ಗ್ಯಾಸ್ ಏಜೆನ್ಸಿ ಬಾಗಿಲು ಮುರಿದು ಹಣ ಕಳವು
ಚಾಮರಾಜನಗರ

ಗ್ಯಾಸ್ ಏಜೆನ್ಸಿ ಬಾಗಿಲು ಮುರಿದು ಹಣ ಕಳವು

September 15, 2018

ಚಾಮರಾಜನಗರ:  ನಗರದ ಮಹೇಶ್ ಗ್ಯಾಸ್ ಏಜೆನ್ಸಿ ಕಚೇರಿಯ ಬಾಗಿಲು ಒಡೆದು ಹಣ ಕಳವು ಮಾಡಲಾಗಿದೆ.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಹಾಗೂ ನಗರಸಭಾ ಮಾಜಿ ಸದಸ್ಯ ಎಸ್. ನಂಜುಂಡಸ್ವಾಮಿ ಅವರಿಗೆ ಸೇರಿದ ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳತನ ನಡೆದಿದೆ.

ಗುರುವಾರ ರಾತ್ರಿ ಏಜೆನ್ಸಿಯ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳನುಗ್ಗಿರುವ ಕಳ್ಳರು ಟೇಬಲ್ ಡ್ರಾಯರ್ ಒಡೆದು 20 ಸಾವಿರ ರೂ. ಕಳವು ಮಾಡಿದ್ದಾರೆ.ಬಳಿಕ ಅದೇ ಬಿಲ್ಡಿಂಗ್‍ನಲ್ಲಿರುವ ಲೆಕ್ಕ ಪರಿಶೋಧಕ ಕಮಲ್‍ನಾಥ್ ಎಂಬುವರ ಕಚೇರಿಯ ಬಾಗಿಲು ಮೀಟಿ ಒಳನುಗ್ಗಿ ಟೇಬಲ್ ಮತ್ತು ಬೀರುವನ್ನು ಹುಡುಕಾಡಿ 10 ಸಾವಿರ ರೂ. ಕದ್ದಿದ್ದಾರೆ. ವಿಷಯ ತಿಳಿದ ಪಟ್ಟಣ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಮಹದೇವಯ್ಯ ಹಾಗೂ ಪೇದೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೆÇಲೀಸ್ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ನಗರದ ಮಧ್ಯಭಾಗದಲ್ಲಿರುವ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಕಳ್ಳತನ ನಡೆದಿರುವುದರಿಂದ ಅಕ್ಕಪಕ್ಕದ ಅಂಗಡಿಗಳ ಮಾಲೀಕರು ಆತಂಕಗೊಂಡಿದ್ದಾರೆ.

Translate »