ಪೊಲೀಸ್ ಠಾಣೆ ಮುಂದೆ ಗುಂಪು ಘರ್ಷಣೆ! ಲಾಠಿ ಚಾರ್ಜ್
ಚಾಮರಾಜನಗರ

ಪೊಲೀಸ್ ಠಾಣೆ ಮುಂದೆ ಗುಂಪು ಘರ್ಷಣೆ! ಲಾಠಿ ಚಾರ್ಜ್

September 15, 2018

ಯಳಂದೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿರುವ ಘಟನೆ ಗುರುವಾರ ರಾತ್ರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಘರ್ಷಣೆ ತಪ್ಪಿಸಲು ಪೊಲೀಸರು ನಡೆಸಿದ ಲಾಠಿ ಚಾರ್ಜ್‍ನಿಂದ ತಪ್ಪಿಸಿಕೊಳ್ಳಲು ಜನರು ತಾವು ತಂದಿದ್ದ ಸುಮಾರು 20 ಕ್ಕೂ ಹೆಚ್ಚು ಬೈಕ್‍ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿ ದ್ದರಿಂದ ಪೊಲೀಸರು ಬೈಕ್‍ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಯಳಂದೂರು ತಾಲೂಕಿನ ಹೊನ್ನೂರು (ಬಿಚ್ಚಹಳ್ಳಿ) ಗ್ರಾಮದ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎರಡು ಗುಂಪಿನವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಎರಡು ಗುಂಪುಗಳ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳು ವಂತೆ ತಿಳಿಸಿ, ಪೊಲೀಸ್ ಠಾಣೆ ಒಳಗೆ ಇತ್ಯರ್ಥ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಠಾಣೆ ಹೊರ ಭಾಗದಲ್ಲಿ ನಿಂತಿದ್ದ ಎರಡು ಗುಂಪಿನ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಹೊಡೆದಾಟ ಶುರು ಮಾಡಿದರು. ಪೊಲೀಸರು ಘರ್ಷಣೆ ಹತೋ ಟಿಗೆ ತರಲು ಪ್ರಯತ್ನಿಸಿದರು ಕೂಡಾ ಪರಿಸ್ಥಿತಿ ಕೈಮೀರುತ್ತಿದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನ ಪಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ಯಳಂದೂರು ಪೊಲೀಸ ಠಾಣೆಯಲ್ಲಿ ಇನ್ನೂ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

Translate »