ಮೈಸೂರು: ರಾಷ್ಟ್ರಕವಿ ಕುವೆಂಪು ವಿರಚಿತ `ಶ್ರೀ ರಾಮಾಯಣ ದರ್ಶನಂ’ ರಂಗಪ್ರಸ್ತುತಿ ಅಂಗವಾಗಿ ರಂಗಾಯಣದ ಆವರಣದಲ್ಲಿ ಹಮ್ಮಿ ಕೊಂಡಿರುವ ರಾಮಾಯಣದ ನಾನಾ ರೋಚಕ ಸನ್ನಿವೇಶಗಳನ್ನು ಕಣ್ಮುಂದೆ ತರುವ ಕಲಾಕೃತಿಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅಂತಾ ರಾಷ್ಟ್ರೀಯ ಖ್ಯಾತಿ ಗಳಿಸಿರುವ ಗಂಜೀಫಾ ರಘುಪತಿ ಭಟ್ ಕೈಚಳಕದಲ್ಲಿ ಈ ಕಲಾಕೃತಿಗಳು ಅರಳಿದ್ದು, ಇವರು 12 ಕಲಾಕೃತಿಗಳಲ್ಲಿ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ. ರಾಮ ಹಾಗೂ ರಾವಣನ ನಡುವಿನ ಕಾಳಗದ ರೋಚಕ ದೃಶ್ಯ, ವನವಾಸಕ್ಕೆ ಹೊರಟ ರಾಮ,…