ಮೈಸೂರು: ಕಲೆ, ಸಂಸ್ಕೃತಿ ಹಾಗೂ ಮನರಂಜನೆಯ ತಾಣವಾಗಬೇಕಿದ್ದ ಮೈಸೂರಿನ ಗೋಕುಲಂ 3ನೇ ಹಂತದ ಪಾಲಿಕೆ ನಾಗರಿಕ ಸೇವಾ ಕೇಂದ್ರದ ಹಿಂಭಾಗ ನಿರ್ಮಿಸಿರುವ `ಸಾಂಸ್ಕೃತಿಕ ಭವನ’ ಕಳೆದ ಒಂದು ವರ್ಷದಿಂದ ಪಾಳುಬಿದ್ದಿದೆ. ಗೋಕುಲಂ 1, 2 ಹಾಗೂ 3ನೇ ಹಂತದ ನಿವಾಸಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು, ಮಧ್ಯಮ ವಯಸ್ಸಿನವರು, ವೃದ್ಧರಿಗೆ ವಾಯುವಿಹಾರ, ವಿಶ್ರಾಂತಿಗೆ ಹಾಗೂ ಮಕ್ಕಳಿಗೆ ಆಟವಾಡಲು ಅನುಕೂಲವಾಗು ವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಗೋಕುಲಂ 3ನೇ ಹಂತದ ಓವರ್‍ಹೆಡ್ ವಾಟರ್ ಟ್ಯಾಂಕ್ ಬಳಿ ಬಯಲು ರಂಗಮಂದಿರ…