ಸದ್ಯದಲ್ಲೇ ಗೋಕುಲಂ ಸಾಂಸ್ಕೃತಿಕ ಭವನ ಪಾಲಿಕೆಗೆ ಹಸ್ತಾಂತರ
ಮೈಸೂರು

ಸದ್ಯದಲ್ಲೇ ಗೋಕುಲಂ ಸಾಂಸ್ಕೃತಿಕ ಭವನ ಪಾಲಿಕೆಗೆ ಹಸ್ತಾಂತರ

November 9, 2018

ಮೈಸೂರು:  ಕಲೆ, ಸಂಸ್ಕೃತಿ ಹಾಗೂ ಮನರಂಜನೆಯ ತಾಣವಾಗಬೇಕಿದ್ದ ಮೈಸೂರಿನ ಗೋಕುಲಂ 3ನೇ ಹಂತದ ಪಾಲಿಕೆ ನಾಗರಿಕ ಸೇವಾ ಕೇಂದ್ರದ ಹಿಂಭಾಗ ನಿರ್ಮಿಸಿರುವ `ಸಾಂಸ್ಕೃತಿಕ ಭವನ’ ಕಳೆದ ಒಂದು ವರ್ಷದಿಂದ ಪಾಳುಬಿದ್ದಿದೆ.

ಗೋಕುಲಂ 1, 2 ಹಾಗೂ 3ನೇ ಹಂತದ ನಿವಾಸಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು, ಮಧ್ಯಮ ವಯಸ್ಸಿನವರು, ವೃದ್ಧರಿಗೆ ವಾಯುವಿಹಾರ, ವಿಶ್ರಾಂತಿಗೆ ಹಾಗೂ ಮಕ್ಕಳಿಗೆ ಆಟವಾಡಲು ಅನುಕೂಲವಾಗು ವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಗೋಕುಲಂ 3ನೇ ಹಂತದ ಓವರ್‍ಹೆಡ್ ವಾಟರ್ ಟ್ಯಾಂಕ್ ಬಳಿ ಬಯಲು ರಂಗಮಂದಿರ (ಸಾಂಸ್ಕೃತಿಕ ಭವನ)ವನ್ನು 2016-17ರಲ್ಲಿ ನಿರ್ಮಿಸಿತು.

170×100 ಅಡಿ ಜಾಗದಲ್ಲಿ ಸುಮಾರು 1 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ ಭವನವನ್ನು ಒಂದು ವರ್ಷ ಪೂರ್ಣ ಗೊಂಡರೂ ಉದ್ಘಾಟಿಸಲಿಲ್ಲ. ಅಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸದ ಕಾರಣ ಅದು ಪಾಳು ಬಿದ್ದಿದೆಯಷ್ಟೇ. ಅಲ್ಲದೆ, ಗಿಡ-ಮರಗಳು ಬೆಳೆದು ಅನೈತಿಕ ಚಟುವಟಿಕೆಯ ತಾಣವಾಗಿದೆ.

300 ಮಂದಿ ಕುಳಿತು ಕಾರ್ಯಕ್ರಮ ನೋಡಬಹುದಾದ ಬಯಲು ರಂಗಮಂದಿರ, ಮಕ್ಕಳು ಆಟವಾಡಲು ಪ್ಲೇಯಿಂಗ್ ಏರಿಯಾ, ವಾಯುವಿಹಾರಕ್ಕೆ ಪಾತ್‍ವೇ, ಉದ್ಯಾನ (ಗಾರ್ಡನಿಂಗ್), ಕಲ್ಲಿನ ಬೆಂಚ್‍ಗಳು, ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿರುವ ಈ ಸಾಂಸ್ಕೃತಿಕ ಭವನದ ಸುತ್ತ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸಲಾಗಿದೆ.

ನಿರ್ಮಾಣ ಕಾರ್ಯ ಪೂರ್ಣಗೊಂಡು ವರ್ಷ ಕಳೆದರೂ ಅದನ್ನು ಉದ್ಘಾಟಿಸಿ ಸಾರ್ವ ಜನಿಕರ ಬಳಕೆಗೆ ಪೂರೈಸದೇ ನಿರ್ಲಕ್ಷ್ಯ ತೋರಿದ್ದರಿಂದಾಗಿ ಸಾಂಸ್ಕೃತಿಕ ಭವನದಲ್ಲಿ ಗಿಡ-ಗಂಟಿಗಳು ಬೆಳೆದುಕೊಂಡು ಕಾಡು ಕೊಂಪೆಯಂತಾಗಿದೆ. ಯಾವ ಉದ್ದೇಶಕ್ಕೆ ನಿರ್ಮಾಣವಾಯಿತೋ ಅದು ಸಾಕಾರಗೊಳ್ಳ ದಿರುವ ಬಗ್ಗೆ ಗೋಕುಲಂ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಕುಡುಕರಿಗೆ ಅನುಕೂಲ ಮಾಡಿಕೊಟ್ಟಂತಾ ಗಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣವನ್ನು ಮನಸ್ಸೋ ಇಚ್ಛೆ ವ್ಯಯ ಮಾಡಿ ನಿರ್ಮಿ ಸಿರುವ ಕಟ್ಟಡ ವನ್ನು ನಿರ್ವಹಣೆ ಮಾಡ ಬೇಕೆಂಬ ಕನಿಷ್ಠ ಜವಾಬ್ದಾರಿಯೂ ಇಲ್ಲ ದಿರುವುದರಿಂದ ಸಾಂಸ್ಕೃತಿಕ ಭವನದ ಆವರಣದಲ್ಲಿನ ಟೈಲ್ಸ್‍ಗಳು, ಶೌಚಾಲಯಗಳು ಶಿಥಿಲಗೊಂಡು ಹಾಳಾಗುತ್ತಿವೆ ಎಂಬುದು ಸ್ಥಳೀಯರ ದೂರು.

Translate »