ರಾವಣ ದುಷ್ಟನೆಂದು ಬಿಂಬಿಸುವ ನಡಾವಳಿ ಅಂತ್ಯಗೊಳ್ಳಬೇಕು
ಮೈಸೂರು

ರಾವಣ ದುಷ್ಟನೆಂದು ಬಿಂಬಿಸುವ ನಡಾವಳಿ ಅಂತ್ಯಗೊಳ್ಳಬೇಕು

November 9, 2018

ಮೈಸೂರು:  ರಾವಣ ನನ್ನು ಆರಾಧಿಸುವ ಜನಸಮುದಾಯ ದೇಶದ ಉದ್ದಗಲಕ್ಕೂ ಇದ್ದು, ಇವರ ಧಾರ್ಮಿಕ ಭಾವನೆಯನ್ನು ಗೌರವಿಸುವ ನಿಟ್ಟಿನಲ್ಲಿ ರಾವಣನನ್ನು ದಹಿಸುವ ಹಾಗೂ ರಾಕ್ಷಸನೆಂದು ತೆಗಳುವ ಮನೋಭಾವದವರು ತಮ್ಮ ನಡಾವಳಿ ಬದಲು ಮಾಡಿಕೊಳ್ಳಬೇಕು ಎಂದು ಇತಿಹಾಸಕಾರರೂ ಆದ ಪೊಲೀಸ್ ಹೆಚ್ಚು ವರಿ ಆಯುಕ್ತ ನಂಜುಂಡಸ್ವಾಮಿ ಆಗ್ರಹಿಸಿದರು.
ಮೈಸೂರಿನ ಪುರಭವನದಲ್ಲಿ ಭಾರತ ಮೂಲ ನಿವಾಸಿಗಳ ಟ್ರಸ್ಟ್ ವತಿಯಿಂದ ದಾನವ ಚಕ್ರವರ್ತಿಗಳ ಸ್ಮರಣೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿ ರಣಕ್ಕೆ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆ ವಾಚಿಸುವ ಮೂಲಕ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ರಾಜ್ಯವೂ ಸೇರಿದಂತೆ ದೇಶದುದ್ದಕ್ಕೂ ರಾವಣನ ದೇವಾಲಯಗಳು ಇದ್ದು, ಬಹು ಜನರು ರಾವಣನನ್ನು ಆರಾಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾವಣನನ್ನು ದಹಿಸುವ ಹಾಗೂ ರಾಕ್ಷಸನೆಂದು ತೆಗಳುವ ಆಚರಣೆಗಳು ನಿಷೇಧ ಗೊಳ್ಳಬೇಕು. ಇಲ್ಲವಾದರೆ ರಾವಣನನ್ನು ದೇವರೆಂದು ಆರಾಧಿಸುವ ಜನಸಮು ದಾಯದ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದರು.

ಹಾಸನಾಂಬೆ ಪೂಜಿಸುವ ರಾವಣ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೋಳದ ಹಳ್ಳಿ ಗ್ರಾಮದಲ್ಲಿ ರಾವಳೇಶ್ವರ ದೇವಸ್ಥಾನ ವಿದೆ. ಅಲ್ಲಿ ರಾವಳೇಶ್ವರ ಒಕ್ಕಲಿನವರಿದ್ದಾರೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಜನತೆ ರಾವಣನನ್ನು ದೇವರೆಂದು ಪೂಜಿಸುತ್ತಾರೆ. ಹಾಸನದ ಹಾಸನಾಂಬೆ ದೇವಸ್ಥಾನದಿಂದ ನಡೆಯುವ ಉತ್ಸವದಲ್ಲಿ ರಾವಣನ ಮೂರ್ತಿ ಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಇಡೀ ಊರು ತುಂಬ ಮೆರವಣಿಗೆ ಮಾಡುವ ಆಚರಣೆ ಇಂದಿಗೂ ರೂಢಿಯಲ್ಲಿದೆ. ಮೆರವಣಿಗೆ ಬಳಿಕ ಗರ್ಭಗುಡಿಯಲ್ಲಿರುವ ಹಾಸನಾಂಬೆ ವಿಗ್ರಹಕ್ಕೆ ರಾವಣ ಮೂರ್ತಿಯಿಂದ ಪೂಜೆ ಮಾಡಿ ಸುತ್ತಾರೆ. ನಂತರ ಬೇರೆ ಪೂಜಾರಿಗಳು ಬಂದು ಹಾಸನಾಂಬೆಯ ಪೂಜಾ ವಿಧಿ ವಿಧಾನ ನೆರವೇರಿಸುತ್ತಾರೆ. ಹೀಗೆ ಹುಡು ಕುತ್ತಾ ಹೋದರೆ ದೇಶದ ನಾನಾ ಭಾಗ ಗಳಲ್ಲಿ ರಾವಣನ ಆರಾಧನೆ ಕಾಣಸಿಗು ತ್ತದೆ ಎಂದು ವಿವರಿಸಿದರು.

ನೆಲದ ಒಡೆಯರು: ರಾವಣ ಪುಲಸ್ತ್ಯ ಕುಲಕ್ಕೆ ಸೇರಿದವನಾಗಿದ್ದು, 1879ರಲ್ಲಿ ವಿದ್ವಾಂಸ ರೊಬ್ಬರು ರಾವಣನ ಕುಲದ ಬಗ್ಗೆ ಸಂಶೋ ಧನೆ ನಡೆಸಿ ಇದನ್ನು ಪ್ರತಿಪಾದಿಸಿದ್ದಾರೆ. ರಾವಣ ಭೂ ಒಡೆಯನಾಗಿದ್ದವ. ಸಂಸ್ಕøತ ದಲ್ಲಿ `ರಾಜ’ ಪದಕ್ಕೆ `ರೈತ’ ಎಂದು ಅರ್ಥೈ ಸಿದ್ದು, ಅದನ್ನು ರಾಯ ಎಂತಲೂ ಹೇಳ ಲಾಗಿದೆ. ಅಂದರೆ ಭೂ ಒಡೆಯರು ಎಂಬ ಅಂಶ ತೆರೆದುಕೊಳ್ಳಲಿದ್ದು, ರಾಜ, ರಾಯ ಹಾಗೂ ರಾವ್ ಇವು ಒಂದೇ ಅರ್ಥ ಕೊಡು ವುದನ್ನು ಅವಲೋಕಿಸಬಹುದು ಎಂದರು.
ಕರ್ನಾಟಕದ ಇತಿಹಾಸದಲ್ಲಿ ಹೊಯ್ಸಳ ರಾಜವಂಶದ ಬಗ್ಗೆ ಕಟ್ಟುಕಥೆಗಳನ್ನು ಕಟ್ಟ ಲಾಗಿದೆ. ಕನ್ನಡ ಶಬ್ದಕೋಶಗಳ ಪ್ರಕಾರ `ಸಳ’ ಎಂದರೆ `ನೇಗಿಲು’ ಎಂಬ ಅರ್ಥವಿದೆ. ಭೂ ಒಡೆಯರಾಗಿದ್ದ ಹೊಯ್ಸಳರ ಮೂಲ ಮಾಳವ ವಂಶಕ್ಕೆ ಸೇರಿದ್ದಾಗಿದೆ. ದಲಿತರು ನೆಲದೊಡೆಯರಾಗಿ ಆಳ್ವಿಕೆ ಮಾಡಿದ್ದು ಸುಳ್ಳಲ್ಲ. ಉತ್ತರ ಭಾರತದ ದೊರೆ ಹರ್ಷವರ್ಧ ನನು ಮಾರ ವಂಶದ ದೊರೆಯಾಗಿದ್ದು, ಪರಮಾರ ಜಾತಿಗೆ ಸೇರಿದವನಾಗಿದ್ದ. ಇದು ಇಂದಿನ ಪರಿಶಿಷ್ಟ ಜಾತಿಗೆ ಸೇರಿದ ಸಮು ದಾಯವಾಗಿದೆ ಎಂದು ವಿವರಿಸಿದರು.
ದಲಿತರಾದ ನಾವು ಎಲ್ಲಿಯವರೆಗೆ ನಮ್ಮ ಹಿಂದಿನ ಗತವೈಭವ ತಿಳಿದುಕೊಳ್ಳಲು ಪ್ರಯ ತ್ನಿಸುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಸಂಸ್ಕøತಿಗೆ ಯಾರೂ ಬೆಲೆ ಕೊಡುವುದಿಲ್ಲ. ಹೀಗಾಗಿ ಒಂದು ಕಾಲದ ಆಳುವ ವರ್ಗ ನಮ್ಮದೆಂಬುದನ್ನು ನಾವು ಅರಿತು ಬಾಳ ಬೇಕಿದೆ. ಹೊಯ್ಸಳ, ಪಲ್ಲವ, ಶಾತವಾಹನ ಈ ಎಲ್ಲ ರಾಜವಂಶದವರು ನಮ್ಮ ಪೂರ್ವ ಜರು ಎಂಬುದನ್ನು ನಾವು ಮನಗಾಣ ಬೇಕಿದೆ. ಇಲ್ಲವಾದರೆ ಅವರಂತೆ ಒಡೆಯ ರಾಗಿ ಬದುಕಲು ಸಾಧ್ಯವಾಗದು ಎಂದರು.

ಬೆಂಗಳೂರು ಮಹಾಬೋಧಿ ಮಿಷನ್‍ನ ಭಂತೆ ಬುದ್ಧಪ್ರಕಾಶ್ ಸಾನಿಧ್ಯ ವಹಿಸಿ ದ್ದರು. ಗಾಂಧಿ ನಗರದ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಚಿಂತಕ ಡಾ. ಕೃಷ್ಣಮೂರ್ತಿ ಚಮರಂ, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ, ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಸಾಹಿತಿ ಸಿದ್ದಸ್ವಾಮಿ, ಚಿಂತಕ ಜಿ.ಎಂ.ಗಾಡ್ಕರ್, ನಾಯಕ ಸಮುದಾಯದ ಮುಖಂಡ ದ್ಯಾವಪ್ಪ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯರನ್ನು ಒಕ್ಕಲೆಬ್ಬಿಸಿದ ಕಥೆಯೇ ಮೂಲ ರಾಮಾಯಣ: ವಿದ್ವಾಂಸ ಡಾ. ಹಿ.ಶಿ.ರಾಮಚಂದ್ರೇಗೌಡ
ಮೈಸೂರು:  ಪರಕೀಯನಾಗಿ ಬಂದ ಶ್ರೀರಾಮ ಸ್ಥಳೀಯರನ್ನು ಒಕ್ಕಲೆಬ್ಬಿಸಿದ ಕಥೆಯೇ ಮೂಲ ರಾಮಾಯಣ ಎಂದು ಚಿಂತಕ ಹಾಗೂ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಪ್ರತಿಪಾದಿಸಿದರು.

ದಾನವ ಚಕ್ರವರ್ತಿಗಳ ಸ್ಮರಣೋತ್ಸವದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹೊಲದೊಡೆಯರನ್ನು ಒಕ್ಕಲೆಬ್ಬಿಸಿದ ಕಥೆಯೇ ರಾಮಾಯಣವಾಗಿದ್ದು, ಕಥೆಯಲ್ಲಿ ಬರುವ ಋಷಿ-ಮುನಿಗಳು ಅಂದಿನ ಕಾಲದ ರಾಮನ ಗೂಢಚರ್ಯ ರಾಗಿ ಕೆಲಸ ಮಾಡುತ್ತಿದ್ದವರು. ಈ ಪರಕೀಯರ ಪರವಾಗಿ ಬಂದ ರಾಮನು ಹೊಲದೊಡೆಯರನ್ನು ಒಕ್ಕಲೆಬ್ಬಿಸಿದ ಕಥೆಯೇ ರಾಮಾಯಣ ಎಂದು ವಿಶ್ಲೇಷಿಸಿದರು.

ದಲಿತರು ಒಂದು ಕಾಲದಲ್ಲಿ ಹೊಲದ ಒಡೆಯರಾಗಿದ್ದವರು. ಶೋಷಿತ ಸಮು ದಾಯಗಳು ಇನ್ನಾದರೂ ಸತ್ಯ ಶೋಧಿಸಿ ಅರಿತು ಬಾಳಬೇಕು. ವರ್ಣಾಶ್ರಮ ಧರ್ಮ ನಮ್ಮ ನೆಲದ ಸಂಸ್ಕøತಿಯನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಹಾಳುಗೆಡವಿದೆ. ಇಂತಹ ವೈದಿಕಶಾಹಿಯ ವಿರುದ್ಧ ಬಂಡೆದ್ದಿದ್ದ ಮಂಟೇಸ್ವಾಮಿ, ಅವರ ಅನಾ ಚಾರಗಳಿಗೆ ದೊಡ್ಡ ಹೊಡೆತ ನೀಡುವಲ್ಲಿ ಯಶಸ್ವಿಯಾಗಿದ್ದರು. ಪುರೋಹಿತಶಾಹಿ ಹಿಡಿತದ ಬಿಜೆಪಿ ಇಂದು ಸದೃಢವಾಗಿ ಬೆಳೆಯಲು ಮಧ್ಯಮ ವರ್ಗದ ಬಹುಪಾಲು ಬೆಂಬಲವಿದೆ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

Translate »