ಮೈಸೂರು: ಮೈಸೂರಿನ ರಂಗಾಯಣದ ಭೂಮಿಗೀತದಲ್ಲಿ ನಾಳೆ(ಮೇ.26)ಯಿಂದ ಜೂನ್ 24ರವರೆಗೆ ಸಿಜಿಕೆ ನೆನಪಿನ ಹವ್ಯಾಸಿ ನಾಟಕೋತ್ಸವ `ಗ್ರೀಷ್ಮ ರಂಗೋತ್ಸವ’ ನಡೆಯಲಿದ್ದು, ರಾಜ್ಯದ ಬೇರೆ ಹವ್ಯಾಸಿ ರಂಗ ತಂಡಗಳು ವಿಭಿನ್ನ ಅಭಿರುಚಿವುಳ್ಳ ನಾಟಕ ಪ್ರದರ್ಶಿಸಲಿವೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ತಿಳಿಸಿದ್ದಾರೆ. ರಂಗಾಯಣದ ಆವರಣದಲ್ಲಿರುವ ಶ್ರೀರಂಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುರೂಪಿ, ಚಿಣ್ಣರಮೇಳದ ನಂತರ ಗ್ರೀಷ್ಮ ರಂಗೋತ್ಸವ ನಡೆಸಲಾಗುತ್ತದೆ. ರಂಗಭೂಮಿಯನ್ನು ಜನಪರ ಚಳುವಳಿಯನ್ನಾಗಿ ರೂಪಿಸಿದ ರಂಗ ಚೇತನ ಪೆÇ್ರ.ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನಲ್ಲಿ ರಂಗಾಯಣದ ವತಿಯಿಂದ ಪ್ರತಿ…