ಮೈಸೂರು: ಮಹಾರಾಜ ಕಾಲೇಜು ಮೈದಾನದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಿರುವ ಗೃಹಶೋಭೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಶಾಸಕ ಎಲ್.ನಾಗೇಂದ್ರ ಅವರು ಗೃಹಶೋಭೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 10 ದಿನಗಳ ಕಾಲ ಗೃಹಶೋಭೆ ಆಯೋಜಿಸಿದ್ದು, ಫರ್ನೀಚರ್ಸ್, ಗೃಹೋಪಯೋಗಿ ವಸ್ತುಗಳು, ಸೋಲಾರ್ ಪದಾರ್ಥ, ಬಟ್ಟೆಗಳು ಸೇರಿದಂತೆ ಮತ್ತಿತರೆ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದ್ದು, ದೊಡ್ಡ ಮಹಲ್‍ಗಳಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ದೊರೆಯಲಿವೆ. ಹಾಗಾಗಿ ಮೈಸೂರು ಸುತ್ತಮುತ್ತಲಿನ ನಿವಾಸಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಏನೇನಿದೆ:…