ಮಹಾರಾಜ ಕಾಲೇಜು ಮೈದಾನದಲ್ಲಿ 10 ದಿನಗಳ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ
ಮೈಸೂರು

ಮಹಾರಾಜ ಕಾಲೇಜು ಮೈದಾನದಲ್ಲಿ 10 ದಿನಗಳ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ

August 4, 2018

ಮೈಸೂರು:  ಮಹಾರಾಜ ಕಾಲೇಜು ಮೈದಾನದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಿರುವ ಗೃಹಶೋಭೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಶಾಸಕ ಎಲ್.ನಾಗೇಂದ್ರ ಅವರು ಗೃಹಶೋಭೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 10 ದಿನಗಳ ಕಾಲ ಗೃಹಶೋಭೆ ಆಯೋಜಿಸಿದ್ದು, ಫರ್ನೀಚರ್ಸ್, ಗೃಹೋಪಯೋಗಿ ವಸ್ತುಗಳು, ಸೋಲಾರ್ ಪದಾರ್ಥ, ಬಟ್ಟೆಗಳು ಸೇರಿದಂತೆ ಮತ್ತಿತರೆ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದ್ದು, ದೊಡ್ಡ ಮಹಲ್‍ಗಳಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ದೊರೆಯಲಿವೆ. ಹಾಗಾಗಿ ಮೈಸೂರು ಸುತ್ತಮುತ್ತಲಿನ ನಿವಾಸಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಏನೇನಿದೆ: ಗೃಹಶೋಭೆಯಲ್ಲಿ 200 ಮಳಿಗೆಗಳಿದ್ದು, ಸೋಲಾರ್, ಹೊಲಿಗೆಯಂತ್ರ, ಸ್ವದೇಶಿ ವಸ್ತುಗಳು, ಗೀಜರ್, ಸ್ಟೌವ್, ಕುಕ್ಕರ್, ಎವರೆಸ್ಟ್ ಮಸಾಲ ಪದಾರ್ಥಗಳು, ವಾಟರ್ ಪ್ಯೂರಿಫಯರ್, ಎಪ್ಸಾನ್ ಪ್ರಿಂಟರ್, ಮಕ್ಕಳ ಆಟಿಕೆ ವಸ್ತುಗಳು, ಅಗರಬತ್ತಿ, ಮಹಿಳೆಯರ ವ್ಯಾನಿಟಿ ಬ್ಯಾಗ್, ಪರ್ಸ್, ಬೆಡ್‍ಶೀಟ್, ಕಾಂಡಿಮೆಂಟ್ಸ್, ಹ್ಯಾಂಡ್‍ಮೇಡ್ ಜ್ಯುವೆಲ್ಲರಿ, ಪಾದರಕ್ಷೆ, ನೋವು ನಿವಾರಣ ತೈಲ, ವಿವಿಧ ಫರ್ನಿಚರ್ಸ್ ಸೇರಿದಂತೆ ಮತ್ತಿತರೆ ವಸ್ತುಗಳು ಲಭ್ಯವಿದ್ದು, ಬೆಳಿಗ್ಗೆ 11ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.

Translate »