ಮೈಸೂರು: ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್ ಹಾಗೂ ಹಾರಂಗಿ ಜಲಾಶಯಗಳ ನೀರಿನ ಪ್ರಮಾಣ ತಳಮಟ್ಟ(ಡೆಡ್ ಸ್ಟೋರೇಜ್)ಕ್ಕೆ ಕುಸಿಯುತ್ತಿದ್ದು, ಮೈಸೂರು, ಬೆಂಗಳೂರು ಹಾಗೂ ಇನ್ನಿತರ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿರುವ ಆತಂಕ ಎದುರಾಗಿದೆ. ಈ ಬಾರಿ ಮುಂಗಾರು ವಿಫಲವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಇದೀಗ ಕೃಷಿ ಚಟುವಟಿಕೆಗೆ ಮಾತ್ರವಲ್ಲದೆ ಕುಡಿಯುವ ನೀರಿನ ಸರಬ ರಾಜು ಮಾಡುವುದಕ್ಕೂ ಸಾಧ್ಯವಾಗದಂತಹ ದುಸ್ಥಿತಿ ಎದುರಾಗುವ ಆತಂಕ ನಿರ್ಮಾಣವಾಗಿದೆ. ಸಾಮಾನ್ಯ ವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ…