ಗ್ರಾಮಸ್ಥರಿಂದ ಅಹವಾಲು ಸಲ್ಲಿಕೆ, ಕಾಲೋನಿಯ ಪ್ರತಿ ಬೀದಿಗೆ ಸಿಇಓ ಭೇಟಿ ಚಾಮರಾಜನಗರ: ದಲಿತ ಸಮು ದಾಯಗಳ ಅಭಿವೃದ್ಧಿಯ ಅವಲೋಕನ ಹಾಗೂ ಗ್ರಾಮದ ಪರಿಸ್ಥಿತಿ ವಾಸ್ತವ ದರ್ಶನದ ಉದ್ದೇಶದೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಡಾ.ಕೆ.ಹರೀಶ್ಕುಮಾರ್ ಆರಂಭಿಸಿರುವ ಮುಸ್ಸಂಜೆ ಮಾತು ಕಾರ್ಯಕ್ರಮಕ್ಕೆ ಗುಂಡ್ಲುಪೇಟೆ ತಾಲೂಕಿನ ಸಿದ್ದಯ್ಯನಪುರ ಕಾಲೋನಿಯಲ್ಲಿ ಶನಿ ವಾರ ಚಾಲನೆ ದೊರೆತಿದೆ. ಶನಿವಾರ ಸಂಜೆ ಜಿಲ್ಲಾ ಮಟ್ಟದ ಅಧಿ ಕಾರಿಗಳೊಡನೆ ಒಡಗೂಡಿ ದಲಿತ ಸಮು ದಾಯದವರೊಂದಿಗೆ ಸಮಾಲೋಚನೆ ನಡೆಸುವ ಮುಸ್ಸಂಜೆ ಮಾತುಕತೆಗಾಗಿ ಆಗಮಿಸಿದ ಸಿಇಒ ಅವರನ್ನು…