ಮದ್ದೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಜೆಡಿಎಸ್ ಮುಖಂಡ ನೋರ್ವನನ್ನು ಕೂತಿದ್ದ ಕಾರಿನಲ್ಲಿಯೇ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರಿನ ಟಿ.ಬಿ.ವೃತ್ತದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತೊಪ್ಪನಹಳ್ಳಿ ಪ್ರಕಾಶ್ (48) ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಳಗಾದವರು. ಘಟನೆ ಹಿನ್ನೆಲೆ: ತೊಪ್ಪನಹಳ್ಳಿ ಪ್ರಕಾಶ್ ಇಂದು ಮಧ್ಯಾಹ್ನ ಪಟ್ಟಣದ ಟಿ.ಬಿ.ವೃತ್ತದಿಂದ ಎಳನೀರು ಮಾರುಕಟ್ಟೆಗೆ ಹೋಗುವ ಮಾರ್ಗಮಧ್ಯೆ ಕಾರಿನ ಸೀಟ್ ಕವರ್ ಹಾಕಿಸಲು ಕಾರು ನಿಲ್ಲಿಸಿದ್ದರು. ಈ ವೇಳೆ ಅವರ ಜೊತೆ ಬಂದಿದ್ದ ಸ್ನೇಹಿತರಾದ ವಿನಯ್…