ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಬಂದು ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಎಲ್ಲಾ ಆರು ಆನೆಗಳ ತೂಕ ಮಾಡಿಸಲಾಯಿತು. ಪ್ರತಿ ವರ್ಷದಂತೆ ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಮ್ ಅಂಡ್ ಕೊ ಲಾರಿ ವೇಯಿಂಗ್ ಸರ್ವಿಸ್‍ನಲ್ಲಿ ಇಂದು ಬೆಳಿಗ್ಗೆ ಅರಮನೆಯಿಂದ ಆರು ಆನೆ ಕರೆತಂದು ತೂಕ ಮಾಡಿಸಲಾಯಿತು. ಯಾರು ಎಷ್ಟು ತೂಗುತ್ತಾರೆ! : ದಸರಾ ಗಜಪಡೆಯ ನಾಯಕ ಅಂಬಾರಿ ಆನೆ ಅರ್ಜುನ 5,650 ಕೆಜಿ ತೂಕವಿದ್ದಾನೆ. ಕಳೆದ ವರ್ಷ ಬಂದಾಗ ಅವನ ತೂಕ…