ಹನೂರು: ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮ.ಬೆಟ್ಟ ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಡ್ಯ ನಿವಾಸಿ ರಾಜು ಅನ್ನು ಬಂಧಿಸಿದ್ದು, ಇಂಡಿಕಾ ಕಾರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ವಿವರ: ಖಚಿತ ಮಾಹಿತಿ ಮೇರೆಗೆ ಮಲೈಮಹದೇಶ್ವರ ಬೆಟ್ಟದ ಇನ್ಸ್‍ಪೆಕ್ಟರ್ ದೇವ ರಾಜು, ಮುಖ್ಯಪೇದೆ ನಾಗರಾಜು, ಪೇದೆಗಳಾದ ಸಿದ್ದರಾಜು, ಶಂಕರ್, ಪ್ರಭು ದಾಳಿ ನಡೆಸಿದರು….