ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ
ಚಾಮರಾಜನಗರ

ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ

July 9, 2018

ಹನೂರು: ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮ.ಬೆಟ್ಟ ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಡ್ಯ ನಿವಾಸಿ ರಾಜು ಅನ್ನು ಬಂಧಿಸಿದ್ದು, ಇಂಡಿಕಾ ಕಾರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ವಿವರ: ಖಚಿತ ಮಾಹಿತಿ ಮೇರೆಗೆ ಮಲೈಮಹದೇಶ್ವರ ಬೆಟ್ಟದ ಇನ್ಸ್‍ಪೆಕ್ಟರ್ ದೇವ ರಾಜು, ಮುಖ್ಯಪೇದೆ ನಾಗರಾಜು, ಪೇದೆಗಳಾದ ಸಿದ್ದರಾಜು, ಶಂಕರ್, ಪ್ರಭು ದಾಳಿ ನಡೆಸಿದರು. ಮಂಡ್ಯದಿಂದ ಇಂಡಿಕಾ ಕಾರಿನಲ್ಲಿ 51 ಲೀಟರ್ ಮದ್ಯ ಸಾಗಣೆ ಮಾಡಿ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಮಾರಾಟ ಮಾಡಲು ತಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.
ಈ ಸಂಬಂಧ ಮಲೈಮಹದೇಶ್ವರ ಬೆಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳ್ಳೇಗಾಲ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿರುವ ಮ.ಬೆಟ್ಟ ಪೊಲೀಸರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Translate »