ರಾಜ್ಯ ಹಣಕಾಸು ಸಂಸ್ಥೆಯಿಂದ 1000 ಲಕ್ಷ ರೂ. ಸಾಲ ವಿತರಣೆ ಗುರಿ
ಚಾಮರಾಜನಗರ

ರಾಜ್ಯ ಹಣಕಾಸು ಸಂಸ್ಥೆಯಿಂದ 1000 ಲಕ್ಷ ರೂ. ಸಾಲ ವಿತರಣೆ ಗುರಿ

July 9, 2018

ಚಾಮರಾಜನಗರ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಚಾಮರಾಜನಗರ ಶಾಖೆಯು 2018-19ನೇ ಸಾಲಿನಲ್ಲಿ ವಿವಿಧ ಉದ್ಯಮಗಳಿಗೆ 1200 ಲಕ್ಷ ರೂ. ಸಾಲ ಮಂಜೂರಾತಿ ಮತ್ತು 1000 ಲಕ್ಷ ರೂ. ಸಾಲ ವಿತರಣೆ ಗುರಿಯನ್ನು ಹೊಂದಿದೆ. ಮೊದಲನೇ ಪೀಳಿಗೆಯ ಉದ್ಯಮಿಗಳಿಗೆ ಕೇವಲ ಶೇ. 8 ಬಡ್ಡಿ ದರದಲ್ಲಿ ಸಾಲವನ್ನು ಮಂಜೂರು ಮಾಡಲಿದೆ.

2017-18ನೇ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆ ಉದ್ಯಮಗಳ ಸ್ಥಾಪನೆ ಹಾಗೂ ಸೇವಾವಲಯಗಳ ಅಭಿ ವೃದ್ಧಿಗಾಗಿ 1079 ಲಕ್ಷ ರೂ. ಸಾಲ ಮಂಜೂ ರಾತಿ ಮಾಡಿದೆ. ಒಟ್ಟು 666.61 ಲಕ್ಷ ರೂ. ಸಾಲ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಉದ್ಯಮದಾರರು, ಮಹಿಳೆಯರು, ಕೈಗಾರಿಕೋದ್ಯ ಮಗಳ ಸ್ಥಾಪನೆಯಲ್ಲಿ ಮತ್ತು ಸೇವಾ ವಲಯಗಳ ಅಭಿವೃ ದ್ಧಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಬಡ್ಡಿ ಸಹಾಯಧನ ಯೋಜನೆಯಡಿ ಶೇ.4 ಬಡ್ಡಿ ದರದಲ್ಲಿ 166.47 ಲಕ್ಷ ರೂ.ಗಳನ್ನ ಪರಿಶಿಷ್ಟ ಜಾತಿ ವರ್ಗಗಳ ಉದ್ದಿಮೆ ದಾರರಿಗೆ ಮಂಜೂರು ಮಾಡಿದೆ. ಮಹಿಳಾ ಉದ್ಯಮಿದಾರರಿಗೆ 158.76 ಲಕ್ಷ ರೂ. ಸಾಲ ಮಂಜೂರು ಮಾಡಿದೆ.

ರಾಜ್ಯದಲ್ಲಿ ಸಣ್ಣ ಮತ್ತು ಮದ್ಯಮ ಪ್ರಮಾಣದ ಉದ್ದಿಮೆಗಳ ದೀರ್ಘಕಾಲಿನ ಮತ್ತು ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸ್ಥಾಪಿ ತವಾದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಇಲ್ಲಿಯವರೆಗೆ ರಾಜ್ಯದಲ್ಲಿ 1,72,000 ಕ್ಕಿಂತಲೂ ಹೆಚ್ಚಿನ ಘಟಕಗಳಿಗೆ 16 ಸಾವಿರ ಕೋಟಿ ರೂ. ಸಂಚಿತ ಮಂಜೂ ರಾತಿಯನ್ನು ನೀಡಿದೆ. ಶೇ. 50ರಷ್ಟು ಹಣ ಕಾಸಿನ ನೆರವನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೀಡಿದೆ.

2017-18ರ ಹಣಕಾಸಿನ ವರ್ಷದಲ್ಲಿ ಸಂಸ್ಥೆಯು 842.13 ಕೋಟಿ ರೂ. ಮಂಜೂ ರಾತಿ ನೀಡಿದೆ. 200.84 ಕೋಟಿ ರೂ. ಆರ್ಥಿಕ ನೆರವನ್ನು ಮಹಿಳಾ ಉದ್ದಿಮೆದಾರರಿಗೆ ಒದಗಿಸಿದೆ. 269.17 ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉದ್ದಿಮೆ ದಾರರಿಗೆ ನೀಡಿದೆ. 77.95 ಕೋಟಿ ರೂ. ಗಳ ಆರ್ಥಿಕ ನೆರವನ್ನು ಮೊದಲ ಪೀಳಿಗೆ ಉದ್ದಿಮೆದಾರರಿಗೆ ನೀಡಿದೆ.

ಸಂಸ್ಥೆಯು 2018-19ರ ಹಣಕಾಸಿನ ವರ್ಷದಲ್ಲಿ ಹೊಸ ಯೋಜನೆಗಳನ್ನು ಪರಿ ಚಯಿಸುವತ್ತ ಚಿಂತನೆ ನಡೆಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ದಿಮೆ ದಾರರಿಗೆ ಬೆಂಬಲ ನೀಡುವ ಪರಿಸರವನ್ನು ನಿರ್ಮಾಣ ಮಾಡಲು ಕರ್ನಾಟಕ ರಾಜ್ಯ ಪೂರಕ ಭದ್ರತಾ ಖಾತರಿ ಯೋಜನೆಯನ್ನು ಪರಿಚಯಿಸಿದೆ. ಮೊದಲ ಪೀಳಿಗೆ ಉದ್ದಿಮೆ ದಾರರಿಗೆ ಬಡ್ಡಿ ಸಹಾಯಧನ ಯೋಜನೆ ಯಡಿ ಯೋಜನಾ ವೆಚ್ಚದ ಮೇಲಿನ ಮಿತಿ ಯನ್ನು 100 ಲಕ್ಷ ರೂ.ಗಳಿಂದ 500 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಸಾಲದ ಮೊತ್ತವನ್ನು 50 ಲಕ್ಷ ರೂ.ಗಳಿಂದ 200 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ.

ವಿಶೇಷ ಬಡ್ಡಿ ಯೋಜನೆಯಡಿ ಸಣ್ಣ, ಅತಿ ಸಣ್ಣ, ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ವಾರ್ಷಿಕ ಶೇ. 11.50ರ ನಿವ್ವಳ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಿದೆ. ಜವಳಿ ಘಟಕ ಸ್ಥಾಪಿಸಲು ಪರಿ ಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉದ್ಯಮಿ ಗಳಿಗೆ ವಿಶೇಷ ಪ್ಯಾಕೇಜ್ ಯೋಜನೆಯಡಿ ಹಣಕಾಸಿನ ಸೌಲಭ್ಯ ಲಭಿಸಲಿದೆ. ಸ್ಥಿರಾಸ್ಥಿ ಗಳ ವೆಚ್ಚದ ಮೇಲೆ ಸರ್ಕಾರದ ಅನು ದಾನ ಶೇ. 75ರಷ್ಟು ಹಣಕಾಸು ಸಂಸ್ಥೆಗ ಳಿಂದ ಅವಧಿ ಸಾಲ ಶೇ. 15ರಷ್ಟು ಮತ್ತು ಪ್ರವರ್ತಕರ ಪಾಲಿನ ಬಂಡವಾಳ ಶೇ. 10 ರಷ್ಟು ನಿಗದಿಯಾಗಿದೆ. ಸಣ್ಣ, ಅತಿಸಣ್ಣ ತಯಾರಿಕಾ ಘಟಕ ಪ್ರಾರಂಭಿಸಲು ಕೆಎಸ್ ಎಫ್‍ಸಿಯ ಮೂಲಕ ಹಣಕಾಸು ನೆರವು ಪಡೆಯುವ ಎಲ್ಲಾ ಉದ್ಯಮಿಗಳಿಗೆ ಶೇ.10 ರಷ್ಟು ಬಡ್ಡಿ ಸಹಾಯಧನವನ್ನು ಘೋಷಿಸಿದೆ.

ಗ್ರಾಹಕರ ಸೇವೆಯೇ ಕೇಂದ್ರ ಬಿಂದು ವಾಗಿದ್ದು, ಸಂಸ್ಥೆಯು ಪ್ರಸ್ತುತ ವರ್ಷದಲ್ಲಿ ಎಲ್ಲ ವೃತ್ತ ಮಟ್ಟದಲ್ಲಿ ವ್ಯವಹಾರ ಅಭಿ ವೃದ್ಧಿ ಸಭೆಗಳನ್ನು ನಡೆಸಲು ಯೋಜಿಸಿದೆ. ಉದ್ಯಮಿಗಳ ಮನೆ ಬಾಗಿಲಲ್ಲೇ ಉದ್ಯಮಿ ಗಳನ್ನು ಭೇಟಿ ಮಾಡಿ ಸ್ಥಳದಲ್ಲಿಯೇ ಯೋಜ ನೆಗಳ ಬಗ್ಗೆ ಚರ್ಚಿಸಲಾಗುತ್ತದೆ.

ಸಾಲದ ಪ್ರಸ್ತಾವನೆಗಳನ್ನು ಅಂಗೀಕರಿಸಿ ಕೂಡಲೇ ಒಪ್ಪಿಗೆ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Translate »