ವಾಟಾಳು ಶ್ರೀಗಳು, ಡಾ.ಆರ್.ರಾಜುಗೆ ಸನ್ಮಾನ
ಚಾಮರಾಜನಗರ

ವಾಟಾಳು ಶ್ರೀಗಳು, ಡಾ.ಆರ್.ರಾಜುಗೆ ಸನ್ಮಾನ

July 9, 2018

ಚಾಮರಾಜನಗರ: ನಗರದ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಶ್ರೀಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹಾಗೂ ನಿವೃತ್ತ ಅರಣ್ಯಾಧಿಕಾರಿ ಡಾ.ಆರ್.ರಾಜು ಅವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಅಧಿಕಾರಿಯು ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ವೇಳೆ ಜನಪರ ಕಾರ್ಯ ಯೋಜನೆಗೆ ಒತ್ತು ನೀಡಿದರೆ ಒಳಿತು ಎಂದು ಅಭಿಪ್ರಾಯಪಟ್ಟರು.

ಗೌರವ ಸ್ವೀಕರಿಸಿ ಮಾತನಾಡಿದ ಡಾ.ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಅವರು, ಪ್ರತಿಯೊಬ್ಬರು ದಾರ್ಶನಿಕರ ತತ್ವ, ಸಿದ್ಧಾಂತ ಗಳಿಗೆ ಬದ್ಧರಾಗಿ ಜೀವನ ಸಾಗಿಸುವಂತೆ ಕರೆ ನೀಡಿದರು.

ಡಾ.ಆರ್.ರಾಜು ಮಾತನಾಡಿ, ನಾನು ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸಿದಾಗ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದರು.
ಹಿರಿಯ ಸಾಹಿತಿ ಡಾ.ಮುನಿವೆಂಕಟಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತ್ರಿ ಪುರಸ್ಕøತ ವೆಂಕಟರಮಣ ಸ್ವಾಮಿ, ಜೆಎಸ್‍ಎಸ್ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಕೆಆರ್‍ಡಿಎಲ್ ಸೋಮಸುಂದರ್, ಸಿಜಿಕೆ ಪ್ರಶಸ್ತಿ ಪುರಸ್ಕøತ ಉಮ್ಮತ್ತೂರು ಬಸವರಾಜು, ಮುಖಂಡರಾದ ಕೆ.ಎಂ. ನಾಗರಾಜು, ಸುರೇಶ್ ಇತರರು ಉಪಸ್ಥಿತರಿದ್ದರು.

Translate »