ಚಾಮರಾಜನಗರ ಸೇರಿ 5 ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರವೇಶಾತಿ ಬೇಡ
ಚಾಮರಾಜನಗರ

ಚಾಮರಾಜನಗರ ಸೇರಿ 5 ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರವೇಶಾತಿ ಬೇಡ

July 9, 2018

ಚಾಮರಾಜನಗರ:  ಚಾಮರಾಜನಗರದ ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರಸ್ತುತ 2018-19ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ವೈದ್ಯ ಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಈ ಪತ್ರ ‘ಮೈಸೂರು ಮಿತ್ರ’ನಿಗೆ ಲಭ್ಯ ವಾಗಿದ್ದು, ಜಿಲ್ಲಾ ಕೇಂದ್ರವಾದ ಚಾಮ ರಾಜನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನರ್ಸಿಂಗ್ ಶಾಲೆಯಲ್ಲಿ ಖಾಯಂ ಬೋಧಕರು ಇಲ್ಲದಿರುವುದು ಹಾಗೂ ಶಾಲೆಯಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಇರುವುದು ಕಂಡು ಬಂದಿದೆ. ಹೀಗಾಗಿ ಈ ಸಾಲಿನ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ತಡೆ ಹಿಡಿಯುವುದು ಸಮಂಜಸವೆಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಕಳೆದ ಎರಡು ವರ್ಷದ ಹಿಂದೆ ಸರ್ಕಾರಿ ನರ್ಸಿಂಗ್ ಶಾಲೆ ಪ್ರಾರಂಭವಾಗಿತ್ತು. ಮೊದಲ ವರ್ಷ 22, ಕಳೆದ ವರ್ಷ 23 ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಪಡೆದಿದ್ದರು. ಈ ವರ್ಷದ (2018-19) 40 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ನೀಡಲಾಗಿತ್ತು.

ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಶಾಲೆಗೆ ಪ್ರವೇಶ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಸೂಚಿಸಿರುವುದರಿಂದ ನರ್ಸಿಂಗ್ ಕೋರ್ಸ್ ಪಡೆಯಲಿಚ್ಚಿಸಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಆಗಿದೆ.

ಚಾಮರಾಜನಗರ ಮಾತ್ರವಲ್ಲದೇ ಬೆಂಗ ಳೂರು, ಬೀದರ್, ಗದಗ ಮತ್ತು ಕಾರ ವಾರದಲ್ಲಿ ತೆರೆಯಲಾಗಿದ್ದ ಸರ್ಕಾರಿ ನರ್ಸಿಂಗ್ ಶಾಲೆಗೂ ಪ್ರಸ್ತುತ ಸಾಲಿನಿಂದ ವಿದ್ಯಾರ್ಥಿಗಳನ್ನು ಪ್ರವೇಶಾತಿ ಮಾಡಿ ಕೊಳ್ಳದಂತೆ ಆಯುಕ್ತರು ಪತ್ರದಲ್ಲಿ ತಿಳಿಸಿ ದ್ದಾರೆ. ಸರ್ಕಾರಿ ಶಾಲೆ ತೆರೆಯಲು ಮುತು ವರ್ಜಿ ವಹಿಸುವ ಜನಪ್ರತಿನಿಧಿಗಳು ಶಾಲೆ ಪ್ರಾರಂಭವಾದ ನಂತರ ಆ ಶಾಲೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ಅಗತ್ಯ ಇರುವ ಭೋದಕ ಸಿಬ್ಬಂದಿಯನ್ನು ನಿಯೋಜಿಸಲು ಗಮನಹರಿಸುವುದಿಲ್ಲ ಎಂಬ ಆರೋಪಕ್ಕೆ ಈ ಶಾಲೆ ನಿದರ್ಶನವಾಗಿದೆ.

Translate »