ಶಾಸಕ ನಿರಂಜನಕುಮಾರ್ ಗೆ ಗ್ರಾಪಂ ನೌಕರರ ಸನ್ಮಾನ
ಚಾಮರಾಜನಗರ

ಶಾಸಕ ನಿರಂಜನಕುಮಾರ್ ಗೆ ಗ್ರಾಪಂ ನೌಕರರ ಸನ್ಮಾನ

July 9, 2018

ಗುಂಡ್ಲುಪೇಟೆ:  ಇಲ್ಲಿನ ತಾಲೂಕು ಗ್ರಾಪಂ ನೌಕರರ ಸಂಘದ ವತಿಯಿಂದ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸ ಕರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಪಂಗಳಲ್ಲಿ ನೌಕರರನ್ನು ಖಾಯಂ ಮಾಡಲು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು ಎಂದು ಸರ್ಕಾರ ಷರತ್ತು ವಿಧಿಸುತ್ತಿರುವುದರಿಂದ ಕಳೆದ 20 ವರ್ಷ ಗಳಿಂದಲೂ ಸೇವೆ ಸಲ್ಲಿಸುತ್ತಿರುವ ಹಲವು ನೌಕರರು ತೊಂದರೆಗೊಳಗಾಗಲಿದ್ದಾರೆ.

ಹಲವಾರು ವರ್ಷಗಳಿಂದಲೂ ನೌಕರರು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸು ತ್ತಿದ್ದು, ಇವುಗಳ ಈಡೇರಿಕೆಗೆ ಕ್ರಮಕೈಗೊಳ್ಳ ಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಮಹ ದೇವಸ್ವಾಮಿ ಮತ್ತು ಪದಾಧಿಕಾರಿಗಳು ಮನವಿ ಮಾಡಿದರು.

ಈ ವೇಳೆ ತಾಲೂಕು ಅಧ್ಯಕ್ಷ ಚಿಕ್ಕಮಾದಶೆಟ್ಟಿ, ಉಪಾಧ್ಯಕ್ಷ ಚಿಕ್ಕತುಪ್ಪೂರು ಮಲ್ಲು, ಪದಾಧಿಕಾರಿಗಳಾದ ರವಿ, ಭೋಗಯ್ಯ, ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.

Translate »