ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ 550 ಸಸಿಗಳನ್ನು ನೆಟ್ಟರು ಮೈಸೂರು: ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸಂಸ್ಥೆಯು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಗ್ರಾಹಕರ ಪರಿಷತ್ತು, ಅರಣ್ಯ ಇಲಾಖೆ ಸಹಯೋಗದಲ್ಲಿ ಮೈಸೂರಿನ ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ ಶುಕ್ರವಾರ 550 ಸಸಿಗಳನ್ನು ನೆಡಲಾಯಿತು. ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಸಸಿ ನೆಟ್ಟು, ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈದಾನದ ಸುತ್ತಲ ಪ್ರದೇಶದಲ್ಲಿ ಮಹಾಘನಿ, ಸ್ಪಥೋಡಿಯಾ, ಹುಣಿಸೆ, ನೇರಳೆ,…