ಮೈಸೂರು: ವಿಶ್ವದ ಸಾರ್ವಜನಿಕ ಆರೋಗ್ಯ ಮಟ್ಟವನ್ನು ಗಮನಿಸಿದರೆ ಭಾರತ 80-90ನೇ ಸ್ಥಾನ ದಲ್ಲಿದ್ದು, ಭಾರತದ ಶೇ.58ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸೋನೆಪಟ್‍ನ ಎನ್‍ಐಎಫ್‍ಟಿ ಇಎಂನ ಕುಲಪತಿ ಚಿಂಡಿ ವಾಸುದೇವಪ್ಪ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಘಟಿಕೋತ್ಸವ ಸಭಾಂಗಣ ದಲ್ಲಿ ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ, ಸಿಎಫ್‍ಟಿ ಆರ್‍ಐ-ಸಿಎಸ್‍ಐಆರ್ ಮತ್ತು ಎಫ್ ಆರ್‍ಎಲ್-ಡಿಆರ್‍ಡಿಒ ಸಹಯೋಗದಲ್ಲಿ ಇಂದಿನಿಂದ 4 ದಿನಗಳ ಕಾಲ ಆಯೋಜಿ ಸಿರುವ 8ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನ `ಇಫ್ಕಾನ್-…