ಮೈಸೂರಲ್ಲಿ ಅಂತರರಾಷ್ಟ್ರೀಯ ಆಹಾರ ಸಮ್ಮೇಳನ ಆರಂಭ
ಮೈಸೂರು

ಮೈಸೂರಲ್ಲಿ ಅಂತರರಾಷ್ಟ್ರೀಯ ಆಹಾರ ಸಮ್ಮೇಳನ ಆರಂಭ

December 13, 2018

ಮೈಸೂರು: ವಿಶ್ವದ ಸಾರ್ವಜನಿಕ ಆರೋಗ್ಯ ಮಟ್ಟವನ್ನು ಗಮನಿಸಿದರೆ ಭಾರತ 80-90ನೇ ಸ್ಥಾನ ದಲ್ಲಿದ್ದು, ಭಾರತದ ಶೇ.58ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸೋನೆಪಟ್‍ನ ಎನ್‍ಐಎಫ್‍ಟಿ ಇಎಂನ ಕುಲಪತಿ ಚಿಂಡಿ ವಾಸುದೇವಪ್ಪ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಘಟಿಕೋತ್ಸವ ಸಭಾಂಗಣ ದಲ್ಲಿ ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘ, ಸಿಎಫ್‍ಟಿ ಆರ್‍ಐ-ಸಿಎಸ್‍ಐಆರ್ ಮತ್ತು ಎಫ್ ಆರ್‍ಎಲ್-ಡಿಆರ್‍ಡಿಒ ಸಹಯೋಗದಲ್ಲಿ ಇಂದಿನಿಂದ 4 ದಿನಗಳ ಕಾಲ ಆಯೋಜಿ ಸಿರುವ 8ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನ `ಇಫ್ಕಾನ್- 2018’ ಕಾರ್ಯ ಕ್ರಮದಲ್ಲಿ ಸ್ಮರಣಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶೇ.58ರಷ್ಟು ಮಂದಿ ಅಪೌಷ್ಟಿಕತೆ: ಅಪೌಷ್ಟಿ ಕತೆ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದ್ದು, ದೇಶದ ಶೇ.58ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಹಾಗಾಗಿ ಪೌಷ್ಟಿಕ ಆಹಾರ ಕುರಿತು ಹೆಚ್ಚು ಹೆಚ್ಚು ಸಂಶೋಧನೆಗಳು ಆಗಬೇಕು. ಜತೆಗೆ ಜನರ ಆರೋಗ್ಯದ ದೃಷ್ಟಿಯಿಂದ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಎಲ್ಲೆಡೆ ದೊರೆಯುವಂತೆ ಮಾಡ ಬೇಕಿದೆ. ಸಾರ್ವಜನಿಕ ವಲಯಗಳಲ್ಲಿ ಮಾರಾಟವಾಗುವ ಆಹಾರದ ಗುಣ ಮಟ್ಟದ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದರು.

ವ್ಯಾಪಾರಸ್ಥರನ್ನು ಸಂಘಟಕರಾಗಿ ಮಾಡ ಬೇಕಿದೆ: ಆಹಾರ ಭದ್ರತೆ ಕಾಯಿದೆ ಅನು ಷ್ಠಾನಗೊಳಿಸುವ ಉದ್ದೇಶದಿಂದ ದೇಶದ ಆಹಾರ ಕ್ಷೇತ್ರದಲ್ಲಿ ಅಸಂಘಟಿತರಾಗಿರುವ ವ್ಯವಹಾರದ ಶೇ.70ರಷ್ಟು (2.8 ಮಿಲಿ ಯನ್) ವ್ಯಾಪಾರಸ್ಥರನ್ನು ಒಂದೆಡೆ ಸೇರಿಸಿ, ತರಬೇತಿ ನೀಡಿ ಗುಣಮಟ್ಟದ ಆಹಾರ ತಯಾರಿಸುವಂತೆ ಮಾಡಬೇಕಿದೆ. ಆಗ ಸಾರ್ವಜನಿಕ ಆರೋಗ್ಯ ಉತ್ತಮ ಸ್ಥಿತಿ ಯಲ್ಲಿರುತ್ತದೆ ಎಂದು ಹೇಳಿದರು.

ಮುಂದಿನ 5 ವರ್ಷದಲ್ಲಿ ವಿಶ್ವ ಬ್ಯಾಂಕ್ ದೇಶದ ವ್ಯಾಪಾರಸ್ಥರನ್ನು ಒಂದೇ ವೇದಿಕೆ ಯಲ್ಲಿ ತರುವ ಕಾರ್ಯಕ್ಕೆ ಮುಂದಾಗಿದ್ದು, ಅದಕ್ಕಾಗಿ ವಿಶ್ವಬ್ಯಾಂಕ್‍ನ ಅಧಿಕಾರಿಗಳು 3,000 ಕೋಟಿ ರೂ. ಅನುದಾನ ನೀಡು ವುದಾಗಿ ತಿಳಿಸಿದ್ದಾರೆ. ಹಾಗಾಗಿ ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಭಾರತ 900 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡುತ್ತಿದ್ದು, ಇದು ಸಾಕೆ ಎಂಬು ದನ್ನು ಚಿಂತಿಸಬೇಕಿದೆ. ಆದರೆ, ಈ ವೇಳೆ ಪ್ರಧಾನ ಮಂತ್ರಿಗಳು ಒಂದೆಡೆ ಕೃಷಿಕರ ಆದಾಯವನ್ನು ಹೆಚ್ಚು ಮಾಡಬೇಕೆಂದರೆ, ಮತ್ತೊಂದೆಡೆ ಜನರು ಆರೋಗ್ಯಕ್ಕೆ ಖರ್ಚು ಮಾಡುವುದನ್ನು ತಪ್ಪಿಸಬೇಕೆಂದು ಹೇಳು ತ್ತಾರೆ. ಆದರೆ ಆಡಳಿತ ವರ್ಗ ಈ ಎರಡಕ್ಕೂ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ದೇಶದಲ್ಲಿನ ಎಲ್ಲಾ ಆಹಾರ ತಂತ್ರಜ್ಞಾನ ಗಳ ಕುರಿತು ಮಾಹಿತಿಯಿರುವ ಪೆÇೀರ್ಟೆಲ್ ಅನ್ನು ತೆರೆದು ಸಂಶೋಧಕರು ಅನ್ವೇಷಿ ಸಿದ ವಿಷಯಗಳನ್ನು ಇದರಲ್ಲಿ ಅಪ್‍ಲೋಡ್ ಮಾಡುವಂತಾಗಬೇಕು ಎಂದರು ದೆಹಲಿಯ ಎಫ್‍ಎಸ್‍ಎಸ್‍ಎಐನ ಸಿಇಒ ಪವನ್ ಕುಮಾರ್ ಅಗರ್ವಾಲ್ ಅವರು ಇಫ್ಕಾನ್-2018 ಕಾರ್ಯಕ್ರಮ ಉದ್ಘಾಟಿ ಸಿದರು. ಪುಣೆಯ ಸುಹಾನ ಪ್ರವೀಣ್ ಮಸಾಲೆ ವಾಲಾದ ವ್ಯವಸ್ಥಾಪಕ ನಿರ್ದೇಶಕ ಆನಂದ್ ಚೋರ್ಡಿಯಾ ಆಹಾರ ಮೇಳಕ್ಕೆ ಚಾಲನೆ ನೀಡಿದರು. ಮೈಸೂರು ಸಿಎಸ್ ಐಆರ್-ಸಿಎಫ್‍ಟಿಆರ್‍ಐ ನಿರ್ದೇಶಕ ಡಾ. ಕೆ.ಎಸ್.ಎಂ.ಎಸ್.ರಾಘವರಾವ್ ಪೆÇೀಸ್ಟರ್ ಬಿಡುಗಡೆಗೊಳಿಸಿದರು. ಇದೇವೇಳೆ ಪ್ರಶಸ್ತಿ ಗಳನ್ನು ವಿತರಿಸಲಾಯಿತು. ಮೈಸೂರು ಡಿಎಫ್ ಆರ್‍ಎಲ್‍ನ ನಿರ್ದೇಶಕ ಡಾ.ಅನಿಲ್ ದತ್ ಸೆಮ್ವಾಲ್ ಅವರು ಎಅಫ್‍ಎಸ್‍ಟಿ ಪುಸ್ತಕ ಬಿಡುಗಡೆಗೊಳಿಸಿದರು. ಚೆನ್ನೈನ ಎಫ್‍ಐ ಎಲ್‍ನ ನಿರ್ದೇಶಕ ಬಿ.ರಾಘವೇಂದ್ರ, ಫ್ರಾನ್ಸ್‍ನ ಐಎನ್‍ಆರ್‍ಎ ಹ್ಯೂಮನ್ ನ್ಯೂಟ್ರಿಷಿಯನ್ ಯೂನಿಟ್‍ನ ಸಂಶೋಧನಾ ನಿರ್ದೇಶಕ ಡಾ.ಎಡ್ಮಂಡ್‍ರಾಕ್ ಇತರರಿದ್ದರು.

ದೇಶದಲ್ಲಿ ಆಹಾರ ರಕ್ಷಣಾ ಅಧಿಕಾರಿಗಳ ಕೊರತೆ
ಮೈಸೂರು: -ದೇಶ ದಲ್ಲಿ ಆಹಾರ ಸಂರಕ್ಷಣಾ ನಿಯಮಗಳು ಪಾಲನೆಯಾಗಬೇಕಾದರೆ ಆಹಾರ ರಕ್ಷಣಾ ಅಧಿಕಾರಿಗಳನ್ನು ನೇಮಿಸಬೇಕು ಎಂದು ಭಾರತೀಯ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ಪ್ರಾಧಿಕಾರದ ಸಿಇಓ ಪವನ್ ಕುಮಾರ್ ಅಗರವಾಲ್ ಹೇಳಿದರು.

ಮುಕ್ತಗಂಗೋತ್ರಿ ಘಟಿಕೋತ್ಸವ ಭವ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ದೇಶದಲ್ಲಿ 824 ಆಹಾರ ಸಂರಕ್ಷಣಾಧಿಕಾರಿಗಳ ಕೊರತೆ ಇದೆ. ಕೆಲವು ರಾಜ್ಯಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ದ್ದರೆ, ಮತ್ತೆ ಕೆಲವು ರಾಜ್ಯಗಳಲ್ಲಿ ಅತೀ ಕಡಿಮೆ ಇದ್ದಾರೆ. ಹಾಗಾಗಿ ಅಗತ್ಯದಷ್ಟು ಅಧಿಕಾರಿಗಳನ್ನು ನೇಮಿಸಬೇಕಿದೆ ಎಂದು ಅವರು ವಿವರಿಸಿದರು.

ಉತ್ತಮ ಸ್ಪಂದನೆ: ದೇವಸ್ಥಾನಗಳಲ್ಲಿ ಭಕ್ತ ರಿಗೆ ನೀಡುವ ಪ್ರಸಾದ ತಯಾರಿಕೆಯಲ್ಲಿ ಮಾನದಂಡ ನಿಗದಿಗೊಳಿಸಬೇಕು ಎಂಬ ಎಫ್‍ಎಸ್‍ಎಸ್‍ಎಐನ ಪ್ರಸ್ತಾವಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆರಂಭದಲ್ಲಿ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಏಕೆಂದರೆ ದೇವ ಸ್ಥಾನಗಳಲ್ಲಿ ಧರ್ಮ ಹಾಗೂ ಭಕ್ತಿಯ ವಿಚಾರ ಅಡಗಿದೆ. ಹಾಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಮುತುವರ್ಜಿ ವಹಿಸುವು ದಕ್ಕೆ ಗಮನ ನೀಡಬೇಕಿದೆ ಎಂದರು.

ಆರಂಭದಲ್ಲಿ ತಿರುಪತಿ ದೇವಸ್ಥಾನದಿಂದ ವಿರೋಧವಿತ್ತು. ಆದರೆ ನಮ್ಮ ತಂಡ ದೇವ ಸ್ಥಾನ ಆಡಳಿತ ಮಂಡಳಿಯೊಂದಿಗೆ ನಿರಂತರ ಮಾತುಕತೆ ನಡೆಸಿ, ಪ್ರಸಾದ ತಯಾ ರಿಕೆಯಲ್ಲಿ ಗುಣಮಟ್ಟ ಮಾನದಂಡ ಪಾಲಿ ಸುವಂತೆ ಮನವರಿಕೆ ಮಾಡಿಕೊಟ್ಟಿದೆ. ಹಾಗಾಗಿ ಅವರೂ ನಮಗೆ ಸಹಮತ ವ್ಯಕ್ತ ಪಡಿಸಿದ್ದಾರೆ. ಜತೆಗೆ ಧಾರ್ಮಿಕ ಸಂಸ್ಥೆಗಳೇ ಪ್ರಸಾದದ ಗುಣಮಟ್ಟ ಪರೀಕ್ಷಿಸಿ ಭಕ್ತರಿಗೆ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ ಎಂದರು.

ಕರ್ನಾಟಕವು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದ್ದು, ಯಾವುದೇ ಲೋಪಗಳಾಗದಂತೆ ಎಚ್ಚರವಹಿಸಿದೆ. ಆದರೆ, ಈ ಯೋಜನೆ ಜಾರಿಗೊಳಿಸಿದ ವೇಳೆಯೇ ಕೇಂದ್ರ ಸರ್ಕಾರ ಹಲವು ಗುಣಮಟ್ಟದ ಮಾನದಂಡಗಳನ್ನು ಸಿದ್ಧಪಡಿಸಿತ್ತು. ಅವು ಗಳನ್ನು ಶಾಲೆಗಳ ಆಡಳಿತ ಮಂಡಳಿಗಳು ಪಾಲಿಸಬೇಕು. ಈ ಕುರಿತು ನಿಗಾವಹಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದರು.

Translate »