ಮೈಸೂರು: ಸ್ಪರ್ಧೆಯನ್ನು ಎದುರಿಸಲು ಹೊರಟವರಿಗೆ ಮೊದಲು ಸ್ವಸಾಮಥ್ರ್ಯದ ಮೇಲೆ ನಂಬಿಕೆ ಇರಬೇಕು ಎಂದು ಮೈಸೂರು ವಿವಿಯ ಎಮರಿಟಸ್ ಪ್ರಾಧ್ಯಾಪಕ ಪ್ರೊ ಹೆಚ್.ಎಂ.ರಾಜಶೇಖರ್ ಹೇಳಿದರು. ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಐಎಎಸ್,ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ದಿನಗಳೆದಂತೆ ಸ್ಪರ್ಧಾತ್ಮಕ ಮನೋಭಾವ ಹೆಚ್ಚುತ್ತಿದ್ದು, ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದು ದಕ್ಷ ಸರ್ಕಾರಿ ಅಧಿಕಾರಿಗಳಾಗಿ ಆಡಳಿತ ನಡೆಸುತ್ತಿರುವುದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಹೀಗಾಗಿ ಪ್ರಯತ್ನ ತೀವ್ರವಾಗಬೇಕು, ಆತ್ಮವಿಶ್ವಾಸವನ್ನು ಬಲಗೊಳ್ಳಿಸಿಕೊಳ್ಳಬೇಕು. ಚಂಚಲ ಸ್ವಭಾವವೇ ವಿದ್ಯಾರ್ಥಿಗಳ…