ಸ್ಪರ್ಧೆಗಿಳಿದವರಿಗೆ ಸ್ವಸಾಮಥ್ರ್ಯದಲ್ಲಿ ನಂಬಿಕೆ ಇರಬೇಕು
ಮೈಸೂರು

ಸ್ಪರ್ಧೆಗಿಳಿದವರಿಗೆ ಸ್ವಸಾಮಥ್ರ್ಯದಲ್ಲಿ ನಂಬಿಕೆ ಇರಬೇಕು

June 27, 2018

ಮೈಸೂರು: ಸ್ಪರ್ಧೆಯನ್ನು ಎದುರಿಸಲು ಹೊರಟವರಿಗೆ ಮೊದಲು ಸ್ವಸಾಮಥ್ರ್ಯದ ಮೇಲೆ ನಂಬಿಕೆ ಇರಬೇಕು ಎಂದು ಮೈಸೂರು ವಿವಿಯ ಎಮರಿಟಸ್ ಪ್ರಾಧ್ಯಾಪಕ ಪ್ರೊ ಹೆಚ್.ಎಂ.ರಾಜಶೇಖರ್ ಹೇಳಿದರು.

ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಐಎಎಸ್,ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ದಿನಗಳೆದಂತೆ ಸ್ಪರ್ಧಾತ್ಮಕ ಮನೋಭಾವ ಹೆಚ್ಚುತ್ತಿದ್ದು, ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದು ದಕ್ಷ ಸರ್ಕಾರಿ ಅಧಿಕಾರಿಗಳಾಗಿ ಆಡಳಿತ ನಡೆಸುತ್ತಿರುವುದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಹೀಗಾಗಿ ಪ್ರಯತ್ನ ತೀವ್ರವಾಗಬೇಕು, ಆತ್ಮವಿಶ್ವಾಸವನ್ನು ಬಲಗೊಳ್ಳಿಸಿಕೊಳ್ಳಬೇಕು. ಚಂಚಲ ಸ್ವಭಾವವೇ ವಿದ್ಯಾರ್ಥಿಗಳ ಯಶಸ್ಸಿಗೆ ಬಹು ದೊಡ್ಡ ಅಡ್ಡಿ. ಹೀಗಾಗಿ ವಿದ್ಯಾರ್ಥಿಗಳಾದವರಿಗೆ ಸಂವಹನ ಕೌಶಲ್ಯವನ್ನು ಬೆಳೆಸಿಕೊಂಡು ಸರಿಯಾದ ಅಧ್ಯಯನ ಕ್ರಮವನ್ನು ರೂಪಿಸಿಕೊಳ್ಳಬೇಕು. ಅಲ್ಲದೇ ಗ್ರಹಿಕೆಯ ಸ್ವಭಾವ ಮೊನಚಾಗಿರಬೇಕು ಮತ್ತು ಬರವಣಿಗೆಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಸೋಮಶೇಖರಯ್ಯ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿಕೊಂಡಾಗ ಅನೇಕ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಗುಂಪು ಚರ್ಚೆಯಲ್ಲಿ ತೊಡಗಿಕೊಂಡಾಗ ನಮಗೆ ಗೊತ್ತಿರದ ಅನೇಕ ವಿಷಯಗಳು ವಿನಿಮಯವಾಗುತ್ತವೆ. ಇದರಿಂದ ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತ ಹೋಗುತ್ತದೆ ಎಂದರು. ತರಬೇತಿ ನಿರತ ಡಿವೈಎಸ್‍ಪಿ ಪೃಥ್ವಿ ಜಯರಾಮು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಕ್ತ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಎಸ್.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಲತಾ ಶಿವರಾಂ ,ಜ್ಞಾನ ಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣ ಗೌಡ , ಬಾಲಕೃಷ್ಣ ಉಪಸ್ಥಿತರಿದ್ದರು.

Translate »