ವಿವಿಧೆಡೆ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ ಕಾವೇರಿ
ಚಾಮರಾಜನಗರ

ವಿವಿಧೆಡೆ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ ಕಾವೇರಿ

June 27, 2018

ಚಾಮರಾಜನಗರ:  ಚಾಮ ರಾಜನಗರ ಪಟ್ಟಣದ ವಿವಿಧೆಡೆ ಪ್ರಗತಿಯಲ್ಲಿ ರುವ ರಸ್ತೆ ಹಾಗೂ ಚರಂಡಿ ಕಾಮಗಾರಿ ಯನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ಪರಿಶೀಲನೆ ನಡೆಸಿದರು.

ಮೊದಲು ನಗರದ ಗಾಳೀಪುರ ಬಡಾವಣೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಯವರು ನಾಗರಿಕರಿಗೆ ಅನುಕೂಲವಾಗುವಂತೆ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ದೊಡ್ಡ ಅಂಗಡಿ ಬೀದಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ರಸ್ತೆ ಬಳಿ ನಡೆಯುತ್ತಿರುವ ಕಾಮಗಾರಿ ಹಾಗೂ ಅನ್ವರ್‍ಪಾಷ ಕಲ್ಯಾಣ ಮಂಟಪದ ರಸ್ತೆಗೆ ಭೇಟಿ ನೀಡಿ ಅಲ್ಲಿ ನಿರ್ವಹಿಸಲಾಗುತ್ತಿರುವ ರಸ್ತೆ ಮತ್ತು ಚರಂಡಿ ಕೆಲಸವನ್ನು ವೀಕ್ಷಿಸಿ ಯಾವುದೇ ವಿಳಂಬ ಮಾಡದೇ ಕಾಮ ಗಾರಿಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅದಾದ ನಂತರ ಪ್ರಗತಿಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಬಳಿ ರಸ್ತೆ, ಪಿಕಾರ್ಡ್ ಅಸ್ಪತ್ರೆ ರಸ್ತೆ ಹಾಗೂ ಕಲಾಮಂದಿರದ ಮುಂಭಾಗದ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿ ಕಾರಿಯವರಿಗೆ ಕೆಲ ಸ್ಥಳೀಯರು ತಮ್ಮ ಅಹವಾಲುಗಳನ್ನು ಮುಂದಿಟ್ಟರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿ ಕಾರಿ ಬಿ.ಬಿ. ಕಾವೇರಿ, ರಸ್ತೆ ಅಗಲೀಕರಣ ದಿಂದ ಸ್ಥಳೀಯರು ಹಾಗೂ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗಲಿದೆ. ಹಾಗಾಗಿ ಪಟ್ಟಣ ಅಭಿವೃದ್ಧಿ ಉದ್ದೇಶದಿಂದ ರಸ್ತೆ ಹಾಗೂ ಉತ್ತಮ ಚರಂಡಿ ಕಾಮಗಾರಿಗೆ ಸಹಕರಿಸಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿದರು.

ನಗರದ ಜಿಲ್ಲಾಸ್ಪತ್ರೆ ಬಳಿ ನಡೆಯು ತ್ತಿರುವ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಆಸ್ಪತ್ರೆಗೆ ಪ್ರತಿನಿತ್ಯ ಸಾಕಷ್ಟು ರೋಗಿಗಳು, ಸಾರ್ವಜನಿಕರು ಭೇಟಿ ನೀಡುತ್ತಾರೆ. ಈ ಸ್ಥಳದಲ್ಲಿ ಯಾವುದೇ ಅನಾನುಕೂಲ ವಾಗದಂತೆ ಕಾಮಗಾರಿ ನಿರ್ವಹಿಸಬೇ ಕೆಂದು ಅಧಿಕಾರಿಗಳಿಗೆ ತಿಳಿಸಿದರು.

ತದನಂತರ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಯನ್ನು ಸಹ ನಾಗರಿಕರಿಗೆ ಅನುಕೂಲವಾಗುವಂತೆ ಅದಷ್ಟು ಬೇಗನೆ ನಿರ್ವಹಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಯವರು, ಕಾಮಗಾರಿಯಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ಗುಣಮಟ್ಟದ ಕಾಮಗಾರಿ ನಡೆಯಬೇಕು. ಅಧಿಕಾರಿಗಳು ಸ್ಥಳದಲ್ಲಿ ಖುದ್ದು ಹಾಜರಿದ್ದು, ಕಾಮಗಾರಿ ಸುಗಮವಾಗಿ ಸಾಗುವಂತೆ ನಿಗಾ ವಹಿಸ ಬೇಕು ಎಂದು ತಾಕೀತು ಮಾಡಿದರು.

ನಗರಸಭೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಸತ್ಯಮೂರ್ತಿ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಜೂನಿಯರ್ ಎಂಜಿನಿಯರ್ ಶ್ರೀನಿವಾಸ್, ಲೋಕೋಪ ಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ಒಳಚರಂಡಿ (ಯು.ಜಿ.ಡಿ) ಕಾಮಗಾರಿ ಎಂಜಿನಿ ಯರ್ ರಮೇಶ್ ಹಾಗೂ ಇತರರು ಇದೇ ಸಂದರ್ಭದಲ್ಲಿ ಹಾಜರಿದ್ದರು.

Translate »