ಶೌಚಾಲಯ ಬಂದ್: ಪಪಂ ಕಚೇರಿ ಮುಂದೆ ರೈತರ ಪ್ರತಿಭಟನೆ
ಚಾಮರಾಜನಗರ

ಶೌಚಾಲಯ ಬಂದ್: ಪಪಂ ಕಚೇರಿ ಮುಂದೆ ರೈತರ ಪ್ರತಿಭಟನೆ

June 27, 2018

ಯಳಂದೂರು: ಕಳೆದ ಮೂರು ದಿನ ಗಳಿಂದ ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕರ ಶೌಚಾ ಲಯವನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅನಾನುಕೂಲವಾಗಿದೆ ಇಂದು ಪ.ಪಂ. ಆಡಳಿತದ ವಿರುದ್ಧ ತಾಲೂಕು ರೈತ ಸಂಘದ ಕಾರ್ಯಕರ್ತರು ಪ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕರ ಶೌಚಾಲಯ ಬಂದ್ ಮಾಡಿದ್ದರಿಂದ ದೂರದ ಊರುಗಳಿಂದ ಬರುವ ಸಾರ್ವಜನಿಕರು ಮತ್ತು ಬಿಳಿಗಿರಿ ರಂಗಸ್ವಾಮಿ ಬೆಟ್ಟಕ್ಕೆ ಹೋಗುವ ಭಕ್ತರು, ಪ್ರವಾಸಿಗರಿಗೆ ಅನಾನುಕೂಲವಾಗಿದೆ.

ಶೌಚಾಲಯವಿಲ್ಲದೆ ಹೆಂಗಸರು, ಮಕ್ಕಳು, ಪುರುಷರ ಪಾಡು ಹೇಳ ತೀರ ದಾಗಿದೆ. ಯಳಂದೂರು ಪಟ್ಟಣದಲ್ಲಿ ಬಸ್ ನಿಲ್ದಾಣ ಸೇರಿದಂತೆ ಒಟ್ಟು 8 ಶೌಚಾ ಲಯಗಳು ಇದೆ. ಆದರೆ ಯಾವೊಂದು ಶೌಚಾಲಯವೂ ಬಳಕೆಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಬಸ್ ನಿಲ್ದಾಣದ ಅಸುಪಾಸಿ ನಲ್ಲಿರುವ ಪೊಲೀಸ್ ವಸತಿ ಗೃಹಗಳ ಬೇಲಿ ಮರೆಯನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕೂಡಲೇ ಶೌಚಾಲಯ ದುರಸ್ಥಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವವರಿಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಂದು ರೈತರು ಪಟ್ಟು ಹಿಡಿದರು. ಇದರಿಂದ ವಿಚಲಿತರಾದ ಟೌನ್ ಪಂಚಾಯಿತಿ ಮುಖ್ಯಾಧಿಕಾರಿ ಉಮಾಶಂಕರ್ ಮಾತ ನಾಡಿ, ಶೌಚಾ ಲಯದಿಂದ ಹೊರಹೂಗುವ ಪೈಪ್‍ನಲ್ಲಿ ಕಸ ತುಂಬಿದೆ. ಇದರಿಂದ ಪೈಪ್ ಲೈನ್ ದುರಸ್ಥಿ ಮಾಡಿಸಿ ಬುಧವಾರದಿಂದ ಸಾರ್ವಜನಿಕರಿಂಗೆ ಅನುಕೂಲ ಮಾಡಿ ಕೊಡುವುದಾಗಿ ಲಿಖತ ಹೇಳಿಕೆ ನೀಡಿದ್ದ ರಿಂದ ರೈತರು ಪ್ರತಿಭಟನೆ ಹಿಂಪಡೆದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ, ಕಾರ್ಯದರ್ಶಿ ಗುರುಪ್ರಸಾದ್. ಹಸಿರು ಸೇನಾ ತಾಲೂಕು ಅಧ್ಯಕ್ಷ ಸಿದ್ದಲಿಂಗ ಸ್ವಾಮಿ, ಮಹೇವಸ್ವಾಮಿ, ಗುರುಸ್ವಾಮಿ, ಮಹದೇವಪ್ಪ, ಶಂಕರಪ್ಪ ಸೇರಿದಂತೆ ನೂರಾರು ರೈತರು ಹಾಜರಿದ್ದರು.

Translate »