ಮೈಸೂರು: ಇಂಗ್ಲೆಂಡಿನ ಕ್ಯುಎಸ್ ಕ್ವಾಕರೇಲಿ ಸೈಮಂಡ್ಸ್ ಸಂಸ್ಥೆ ನಡೆಸಿದ ವಿಶ್ವವಿದ್ಯಾನಿಲಯಗಳ ಪರಿವೀಕ್ಷಣೆಯಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಜೆಎಸ್‍ಎಸ್ ವಿಶ್ವ ವಿದ್ಯಾನಿಲಯ) ಕ್ಯುಎಸ್- ನಾಲ್ಕು ಸ್ಟಾರ್ ಲಭಿಸಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಯಂಗ್ ವಿವಿ ಬಿರುದನ್ನು ಪಡೆದಿದೆ ಎಂದು ಕುಲಪತಿ ಡಾ.ಬಿ.ಸುರೇಶ್ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯುಜಿಸಿ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಈ ಹಿಂದೆ ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ…