ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ
ಮೈಸೂರು

ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ

September 29, 2018

ಮೈಸೂರು:  ಇಂಗ್ಲೆಂಡಿನ ಕ್ಯುಎಸ್ ಕ್ವಾಕರೇಲಿ ಸೈಮಂಡ್ಸ್ ಸಂಸ್ಥೆ ನಡೆಸಿದ ವಿಶ್ವವಿದ್ಯಾನಿಲಯಗಳ ಪರಿವೀಕ್ಷಣೆಯಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಜೆಎಸ್‍ಎಸ್ ವಿಶ್ವ ವಿದ್ಯಾನಿಲಯ) ಕ್ಯುಎಸ್- ನಾಲ್ಕು ಸ್ಟಾರ್ ಲಭಿಸಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಯಂಗ್ ವಿವಿ ಬಿರುದನ್ನು ಪಡೆದಿದೆ ಎಂದು ಕುಲಪತಿ ಡಾ.ಬಿ.ಸುರೇಶ್ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯುಜಿಸಿ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಈ ಹಿಂದೆ ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮರು ನಾಮಕರಣ ಮಾಡಲಾಗಿದೆ. ಕಡಿಮೆ ಅವಧಿಯಲ್ಲಿಯೇ ಜೆಎಸ್‍ಎಸ್ ವಿವಿ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.

ರಾಜ್ಯದಲ್ಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎನ್ನಿಸಿಕೊಂಡಿರುವ ಜೆಎಸ್‍ಎಸ್‍ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಪ್ರತಿಷ್ಠಿತ ಟೈಂಸ್ ಹೈಯರ್ ಎಜುಕೇಷನ್ ಏಜೆನ್ಸಿಯು ನಡೆಸಿದ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳ ಶ್ರೇಣಿಯಲ್ಲಿ ಐದನೇ ರ‍್ಯಾಂಕ್ ಗಳಿಸಿದೆ. ಯುಜಿಸಿಯ ನ್ಯಾಕ್‍ನಲ್ಲಿ ಎ-ಪ್ಲಸ್, ಕ್ಯುಎಸ್ ಕ್ವಾಕರೇಲಿ ಸೈಮಂಡ್ ಸಂಸ್ಥೆಯಿಂದ ನಾಲ್ಕು ಸ್ಟಾರ್ ಪಡೆದಿದ್ದ ಸಂಸ್ಥೆಗೆ ಇದೀಗ ಟೈಂಸ್ ಹೈಯರ್ ಎಜುಕೇಷನ್ ಏಜೆನ್ಸಿಯ ಶ್ರೇಣಿಯಲ್ಲಿ ದೇಶದಲ್ಲೇ ಮೊದಲ ಐದು ಸ್ಥಾನಗಳಲ್ಲಿ ಸ್ಥಾನ ಪಡೆದಿರುವುದು ಗಮ ನಾರ್ಹ. ಪ್ರಪಂಚದಾದ್ಯಂತ ಒಟ್ಟಾರೆ ಇರುವ 1258 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಜೆಎಸ್‍ಎಸ್ ಅಕಾಡೆಮಿಯು 401ರಿಂದ 500 ಮಿತಿಯೊಳಗೆ ರ‍್ಯಾಂಕ್ ಪಡೆದಿದ್ದರೆ, ದೇಶದಲ್ಲಿರುವ 49 ವಿಶ್ವವಿದ್ಯಾನಿಲಯಗಳ ಪೈಕಿ ಮೊದಲ ಸ್ಥಾನದ ರ‍್ಯಾಂಕ್ ಪಡೆದು ಶ್ರೇಷ್ಠ ಗುಣಮಟ್ಟ ವನ್ನು ಕಾಯ್ದುಕೊಂಡಿದೆ ಎಂದರು.

ಹಲವು ಮಾನ್ಯತೆಯ ಗರಿಮೆ: ವಿಶ್ವವಿದ್ಯಾ ನಿಲಯ ಧನ ಸಹಾಯ ಆಯೋಗವು ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆ ಎಂದು ಅನುಮತಿ ನೀಡಿದ್ದು, ಯುಜಿಸಿ ಮತ್ತು ನ್ಯಾಕ್ ಸಂಸ್ಥೆ ನಡೆಸಿದ ಪರಿವೀಕ್ಷಣೆಯಲ್ಲಿ ಸಿಜಿಪಿಎ 347ರ ಅಂಕಗಳೊಂದಿಗೆ ಎ ಪ್ಲಸ್ ಶ್ರೇಣಿ ನೀಡಿದೆ. 2016ರಲ್ಲಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಪುನರ್ ರ್ಯಾಂಕಿಂಗ್ ಫ್ರೇಂ ವರ್ಕ್ ಸಂಸ್ಥೆಯ ಪ್ರಕಾರ ದೇಶದ 233 ವಿವಿಗಳ ಪೈಕಿ 35ನೇ ಸ್ಥಾನ ಪಡೆದಿದ್ದರೆ, 2017ರಲ್ಲಿ 724 ವಿವಿಗಳ ಪೈಕಿ 45ನೇ ರ‍್ಯಾಂಕ್ ಗಳಿಸಿತ್ತು. ಪ್ರಸ್ತುತ 2018ನೇ ಸಾಲಿನಲ್ಲಿ 957 ವಿವಿ ಪೈಕಿ 37ನೇ ರ‍್ಯಾಂಕ್ ಗಳಿಸಿದ ಕೀರ್ತಿ ಹೊಂದಿದೆ.

ಅಂತಾರಾಷ್ಟ್ರೀಯ ಔಷಧ ವಿಜ್ಞಾನ ಕೌನ್ಸಿಲ್ ಸಂಸ್ಥೆಯು ಫಾರ್ಮ-ಡಿ ಪ್ರೋಗ್ರಾಂನ ಉತ್ತಮ ಶಿಕ್ಷಣ ಗುಣಮಟ್ಟ ಪ್ರಶಂಸಿಸಿ ಅಕ್ರಿಡೇಷನ್ ಕೌನ್ಸಿಲ್ ಆಫ್ ಫಾರ್ಮಸಿ ಎಜುಕೇಷನ್ ಸಂಸ್ಥೆಯ ಮೆಚ್ಚುಗೆ ಗಳಿಸುವ ಜತೆಗೆ ಫಾರ್ಮಸಿ ಕೋರ್ಸಿನಲ್ಲಿ ಏಷ್ಯಾ-ಫೆಸಿಪಿಕ್‍ನಲ್ಲೇ ಮಾನ್ಯತೆಯ ಗೌರವಕ್ಕೆ ಭಾಜನವಾಗಿದೆ ಎಂದು ಹೇಳಿದರು.

ಯಾವುದನ್ನು ಪರಿಗಣನೆ: ಪ್ರತಿಷ್ಠಿತ ಟೈಂಸ್ ಹೈಯರ್ ಎಜುಕೇಷನ್ ಏಜೆನ್ಸಿಯು ನಡೆಸಿದ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯ ಗಳ ಶ್ರೇಣಿಯಲ್ಲಿ ಪ್ರಮುಖ ಅಂಶಗಳನ್ನು ಗುರುತಿಸಿ ಪ್ರಕಟಿಸಲಾಗಿದೆ. ಜೆಎಸ್‍ಎಸ್ ಉನ್ನತ ಶಿಕ್ಷಣ ಸಂಸ್ಥೆಯು ನಾಲ್ಕು ಘಟಕಗಳ ಕಾಲೇಜುಗಳನ್ನು ಮತ್ತು ವಿವಿ ವಿಭಾಗಗಳನ್ನು ಹೊಂದಿದ್ದು, 147 ಶೈಕ್ಷಣಿಕ ವಿವಿಧ ಪ್ರೋಗ್ರಾಂಗಳ್ನು ಬೋಧಿಸಲಾಗುತ್ತಿದೆ. ಜೆಎಸ್‍ಎಸ್ ವೈದ್ಯಕೀಯ, ದಂತ ವೈದ್ಯ ಕೀಯ, ಔಷಧ ವಿಜ್ಞಾನ ಮತ್ತು ಊಟಿ ಜೆಎಸ್‍ಎಸ್ ಔಷಧ ವಿವಿಯ ಜತೆಗೆ ವಾಟರ್ ಅಂಡ್ ಹೆಲ್ತ್ ವಿಭಾಗ, ಹೆಲ್ತ್ ಸಿಸ್ಟಂ ಮ್ಯಾನೇಜ್‍ಮೆಂಟ್ ಸ್ಟಡೀಸ್ ಸೇರ್ಪಡೆ ಗೊಂಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಉಪ ಕಾರ್ಯದರ್ಶಿಗಳಾದ ಎಸ್.ಪಿ.ಮಂಜು ನಾಥ್, ಶಿವಕುಮಾರಸ್ವಾಮಿ, ಪ್ರಾಂಶುಪಾಲ ಡಾ. ಬಸವನಗೌಡಪ್ಪ, ಡಾ.ಪಿ.ಎ. ಕುಶಾಲಪ್ಪ, ಡಾ.ಬಾಲಸುಬ್ರಹ್ಮಣ್ಯಂ ಇನ್ನಿತರರು ಇದ್ದರು..

Translate »