ಅನಧಿಕೃತವಾಗಿ ತಂದು ಸುರಿಯಲಾಗಿದ್ದ ಹಣ್ಣು,  ತರಕಾರಿ ಕೊಳೆತ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಪತ್ತೆ
ಮೈಸೂರು

ಅನಧಿಕೃತವಾಗಿ ತಂದು ಸುರಿಯಲಾಗಿದ್ದ ಹಣ್ಣು, ತರಕಾರಿ ಕೊಳೆತ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಪತ್ತೆ

September 29, 2018

ಮೈಸೂರು: ಮೈಸೂರಿನ ವಿದ್ಯಾ ರಣ್ಯಪುರಂ, ಚಾಮುಂಡಿಪುರಂ, ವಿಶ್ವೇಶ್ವರನಗರ, ಜೆಪಿ ನಗರ, ಕನಕಗಿರಿ, ಗುಂಡೂರಾವ್‍ನಗರ, ಶ್ರೀರಾಂಪುರ ಭಾಗಗಳಲ್ಲಿ ಕಳೆದ 3 ದಿನಗಳಿಂದ ಸೂಯೇಜ್ ಫಾರಂನ ಎಕ್ಸೆಲ್ ಪ್ಲಾಂಟ್‍ನಿಂದ ದುರ್ವಾಸನೆ ಬರುತ್ತಿದ್ದ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಸೂಯೇಜ್ ಫಾರಂನ ಆವರಣದಲ್ಲಿರುವ ಎಕ್ಸೆಲ್ ಪ್ಲಾಂಟ್‍ಗೆ ಕಾರ್ಪೊರೇಟರ್‍ಗಳು ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಿಗೆ ಅಲ್ಲಿ ಆರ್‌ಎಂಸಿಯಿಂದ ಲಾರಿಗಳಲ್ಲಿ ಕಸ ವಿಲೇವಾರಿ ಮಾಡಿರುವುದು ಹಾಗೂ ಆಸ್ಪತ್ರೆಗಳ ತ್ಯಾಜ್ಯ ತಂದು ಸುರಿದಿರುವುದು ಪತ್ತೆಯಾಯಿತು. ಶಾಸಕರ ಭೇಟಿ ಸಂದರ್ಭದಲ್ಲಿ ಅಲ್ಲಿಗೆ ಆಟೋ ಒಂದರಲ್ಲಿ ಆಸ್ಪತ್ರೆಗಳ ತ್ಯಾಜ್ಯ ತಂದಿದ್ದು ಗೋಚರಿಸಿತು. ಕೂಡಲೇ ಆಟೋ ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್‌ಎಂಸಿಯಿಂದ 2 ಲೋಡ್‍ಗಳಷ್ಟು ಕೊಳೆತ ಹಣ್ಣು, ತರಕಾರಿ, ಕೋಸು ಇನ್ನಿತರ ಕಸವನ್ನು ತಂದು ಸುರಿ ದಿದ್ದದ್ದು ಪತ್ತೆಯಾಯಿತು. ಹೀಗಾಗಿ ಅಲ್ಲಿ ಭಾರೀ ದುರ್ವಾ ಸನೆ ಬರುತ್ತಿದ್ದುದು ತಿಳಿಯಿತು. ಕೂಡಲೇ ಶಾಸಕರು ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದರು. ಯಾರು ಅನಧಿಕೃತವಾಗಿ ಕಸ ತಂದು ಸುರಿದಿ ದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸು ವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ದೂರು ದಾಖಲಿಸಿದ ನಂತರ ಪಾಲಿಕೆ ಅಧಿಕಾರಿಗಳು ಮಂಡಳಿಯ ಮುಂದೆ ಅಂಡರ್‍ಟೇಕಿಂಗ್ ಮೂಲಕ ಏನು ಮಾಡುತ್ತೇವೆ ಎಂದು ತಿಳಿಸಿದ್ದರೋ ಅದನ್ನು ಕಾರ್ಯರೂಪಕ್ಕೆ ತಂದಿದ್ದು, ರಾಶಿ ರಾಶಿ ಬಿದ್ದಿರುವ ಸುಮಾರು 7 ಲಕ್ಷ ಟನ್ ಕಸವನ್ನು ಲ್ಯಾಂಡ್ ಫಿಲ್ಲಿಂಗ್ ಮಾಡುವ ಕೆಲಸ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ.

ಮೈಸೂರಿನಲ್ಲಿರುವ 9 ಘಟಕಗಳಲ್ಲಿ 7 ಘಟಕ ಈಗಾಗಲೇ ಪ್ರಾರಂಭವಾಗಿದೆ. ಈ ಮೊದಲು ಎಕ್ಸೆಲ್ ಪ್ಲಾಂಟ್‍ಗೆ ಪ್ರತಿನಿತ್ಯ ಸುಮಾರು 450 ಟನ್ ಕಸ ಬರುತ್ತಿತ್ತು. ಈಗ 7 ಘಟಕ ತೆರೆದ ನಂತರ ಸುಮಾರು 250 ಟನ್ ಕಸ ಬರುತ್ತಿದೆ ಎಂಬುದರ ದಾಖಲೆಗಳನ್ನು ಈಗ ಪರಿಶೀಲಿಸಲಾಗಿದೆ. ಆದರೆ ಕೆಲವು ದಿನಗಳಿಂದ ಆರ್‌ಎಂಸಿಯಿಂದ ಕೊಳೆತ ತ್ಯಾಜ್ಯ ರೂಪದ ತರಕಾರಿಗಳು ಅಕ್ರಮವಾಗಿ ಇಲ್ಲಿಗೆ ಬರುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಯಲ್ಲಿ ಇಲ್ಲಿ ಕೆಲಸ ನಿರ್ವಹಿಸುವವರನ್ನು ಕೇಳಿದರೆ ಸ್ವತಃ ಜಿಲ್ಲಾಡಳಿತವೇ ಕಸ ಸುರಿಯಲು ಆದೇಶಿಸಿದೆ ಎನ್ನುವ ವಿಷಯ ತಿಳಿಯಿತು. ಹಾಗಾಗಿ ಖುದ್ದಾಗಿ ಭೇಟಿ ನೀಡಿದ್ದಾಗಿ ತಿಳಿಸಿದರು.

ಪ್ರತಿ ದಿನ ಎರಡು ಲಾರಿಯಷ್ಟು ಕೊಳೆತ ಸ್ಥಿತಿಯಲ್ಲಿರುವ ಕೋಸು ಇನ್ನಿತರ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಸಹಜವಾಗಿ ಒಂದು ವಾರದಿಂದ ಕೊಳೆಯುತಿದ್ದು, 3 ದಿನದಿಂದ ವಾಸನೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಾವು ಎಕ್ಸೆಲ್ ಪ್ಲಾಂಟ್‍ನ ಒಳಗಿರುವಾಗಲೇ 1415 ಕೆಜಿ ಆಸ್ಪತ್ರೆ ತ್ಯಾಜ್ಯ ಬಂದಿತು. ಆಸ್ಪತ್ರೆ ತ್ಯಾಜ್ಯ ತಂದ ವಾಹನವನ್ನು ವಶಕ್ಕೆ ಪಡೆದಿದ್ದು, ದೂರು ದಾಖಲಿಸಲು ಸೂಚಿಸಲಾಗಿದೆ. ವಾಸ್ತವವಾಗಿ ಆಸ್ಪತ್ರೆಯವರ ಪಾತ್ರ ಇಲ್ಲಿ ಇರುವುದಿಲ್ಲ.

ಕಾರಣ ಆಸ್ಪತ್ರೆಯವರು ತ್ಯಾಜ್ಯ ವಿಲೇವಾರಿ ಮಾಡಲು ಗುತ್ತಿಗೆ ನೀಡಿರುತ್ತಾರೆ. ಅಂತಹ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಈ ಸಮಸ್ಯೆಯಾಗುತ್ತಿದೆ. ಅಲ್ಲದೆ ಕೇರಳದಿಂದ ಬಂದ ಕಸದ ವಾಹನವನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೇರಳದ 4 ಲಾರಿ ತ್ಯಾಜ್ಯ ಸುರಿದಿರುವುದು ಸಹ ವಶಕ್ಕೆ ಪಡೆದಿದ್ದರು. ಆದರೆ ಯಾವ ಅಧಿಕಾರಿಯ ಪ್ರಭಾವ ಬೀರಿದ್ದರೋ ಗೊತ್ತಿಲ್ಲ. ಆ ವಾಹನಗಳ ಮೇಲೆ ದೂರು ದಾಖಲಿಸದೆ ಹಾಗೆ ಬಿಟ್ಟಿದ್ದಾರೆ ಎಂದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಶಾಸಕರು ಕಿಡಿಕಾರಿದರು.

ಹೋರಾಟ ಫಲವಾಗಿ ಎಕ್ಸೆಲ್ ಪ್ಲಾಂಟ್‍ನ ಒಳಗೆ ಸಿಸಿಟಿವಿ ಅಳವಡಿಸಿದ್ದರೂ, ಒಳಬರುವ ಕಸದ ಬಗ್ಗೆ ದಾಖಲಾತಿ ಮಾಡದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪ್ಲಾಂಟ್‍ನ ಒಳಗೆ ಬರುವ ಕಸದ ಬಗ್ಗೆ ಸಮ ರ್ಪಕವಾಗಿ ದಾಖಲಿಸಬೇಕು ಎಂದು ಅಧಿಕಾರಿ ಗಳಿಗೆ ಆದೇಶಿಸಿದರು. ಪ್ಲಾಂಟ್ ಸುತ್ತಲೂ ಸಾರ್ವಜನಿಕರು ವಾಸ ಮಾಡುವ ನಿಟ್ಟಿನಲ್ಲಿ ಪ್ಲಾಂಟ್ ಒಳಗೇ ಬರುವ ಕಸ ಕಡಿಮೆಯಾಗಿ ಒಳಗಿರುವ ಕಸ ವಿಲೇವಾರಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್‌ಗಳಾದ ಚಂಪಕ, ಎಂ.ಶಾರದಮ್ಮ, ಆರ್. ಶಾಂತಮ್ಮ, ಸೌಮ್ಯ, ಎಂ.ಗೀತಾಶ್ರೀ ಯೋಗಾನಂದ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಪರಿಸರ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

Translate »