Tag: SA Ramadas

ಗನ್‍ಹೌಸ್ ವೃತ್ತದಲ್ಲಿ ಶಾಸಕ ಎಸ್.ಎ.ರಾಮದಾಸ್‍ರಿಂದ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ಮೈಸೂರು

ಗನ್‍ಹೌಸ್ ವೃತ್ತದಲ್ಲಿ ಶಾಸಕ ಎಸ್.ಎ.ರಾಮದಾಸ್‍ರಿಂದ ಸಾರ್ವಜನಿಕ ಶೌಚಾಲಯ ಉದ್ಘಾಟನೆ

November 22, 2018

ಮೈಸೂರು:  ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 51ನೇ ವಾರ್ಡ್ ನಲ್ಲಿ ಶಿವರಾತ್ರೀಶ್ವರ ವೃತ್ತದ (ಗನ್‍ಹೌಸ್) ಬಳಿ ಮೈಸೂರು ಮಹಾನಗರಪಾಲಿಕೆ ವತಿ ಯಿಂದ ನಿರ್ಮಿಸಿರುವ ಸಾರ್ವಜನಿಕ ಸುಲಭ್ ಶೌಚಾಲಯವನ್ನು ಶಾಸಕ ಎಸ್.ಎ. ರಾಮದಾಸ್ ಬುಧವಾರ ಉದ್ಘಾಟಿಸಿದರು. ಈ ಭಾಗದಲ್ಲಿ ಶೌಚಾಲಯವಿಲ್ಲದೆ ಬಸ್ ನಿಂದ ಇಳಿದ ಪ್ರಯಾಣಿಕರು, ಅರಮನೆಗೆ ಬಂದ ಪ್ರವಾಸಿಗರು, ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಜೆಎಸ್‍ಎಸ್ ವಿದ್ಯಾ ಪೀಠದ ಪಕ್ಕದ ಮೋರಿಯೇ ಬಯಲು ಶೌಚಾಲಯವಾಗಿದೆ. ಇದರಿಂದ ಪರಿಸರ ನೈರ್ಮಲ್ಯ ಕೆಡುತ್ತಿತ್ತು. ಇದನ್ನು ಅರಿತು ಮಹಾ ನಗರಪಾಲಿಕೆಯ ಸಾಮಾನ್ಯ…

ಜೀವನವನ್ನು ಸವಾಲಾಗಿ ಸ್ವೀಕರಿಸಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್
ಮೈಸೂರು

ಜೀವನವನ್ನು ಸವಾಲಾಗಿ ಸ್ವೀಕರಿಸಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್

October 1, 2018

ನಂಜನಗೂಡು:  ‘ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳದೇ ಜೀವನವನ್ನು ಸವಾಲಾಗಿ ಸ್ವೀಕರಿಸಿ ಧೈರ್ಯ, ಆತ್ಮವಿಶ್ವಾಸ, ಸಾಧನೆ, ಛಲವನ್ನು ರೂಢಿಸಿಕೊಳ್ಳಬೇಕು. ಸಂಪದ್ಭರಿತ ಭಾರತದಲ್ಲಿ ಮಕ್ಕಳೇ ಆಸ್ತಿ’ ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.ನಂಜನಗೂಡಿನ ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಪ್ರರು ಮುಂಚಿನಿಂದಲೂ ತಮ್ಮ ವಿದ್ಯಾ ಪಾಂಡಿತ್ಯದಿಂದಲೇ ತಮ್ಮ ಜೀವನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಂದಿನ ಮಕ್ಕಳು ಸಹ ಬುದ್ದಿವಂತರಿದ್ದು, ಅದನ್ನು ಗುರುತಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಿಗಾಗಿ ಆಸ್ತಿ…

ಅನಧಿಕೃತವಾಗಿ ತಂದು ಸುರಿಯಲಾಗಿದ್ದ ಹಣ್ಣು,  ತರಕಾರಿ ಕೊಳೆತ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಪತ್ತೆ
ಮೈಸೂರು

ಅನಧಿಕೃತವಾಗಿ ತಂದು ಸುರಿಯಲಾಗಿದ್ದ ಹಣ್ಣು, ತರಕಾರಿ ಕೊಳೆತ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ ಪತ್ತೆ

September 29, 2018

ಮೈಸೂರು: ಮೈಸೂರಿನ ವಿದ್ಯಾ ರಣ್ಯಪುರಂ, ಚಾಮುಂಡಿಪುರಂ, ವಿಶ್ವೇಶ್ವರನಗರ, ಜೆಪಿ ನಗರ, ಕನಕಗಿರಿ, ಗುಂಡೂರಾವ್‍ನಗರ, ಶ್ರೀರಾಂಪುರ ಭಾಗಗಳಲ್ಲಿ ಕಳೆದ 3 ದಿನಗಳಿಂದ ಸೂಯೇಜ್ ಫಾರಂನ ಎಕ್ಸೆಲ್ ಪ್ಲಾಂಟ್‍ನಿಂದ ದುರ್ವಾಸನೆ ಬರುತ್ತಿದ್ದ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಸೂಯೇಜ್ ಫಾರಂನ ಆವರಣದಲ್ಲಿರುವ ಎಕ್ಸೆಲ್ ಪ್ಲಾಂಟ್‍ಗೆ ಕಾರ್ಪೊರೇಟರ್‍ಗಳು ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರಿಗೆ ಅಲ್ಲಿ ಆರ್‌ಎಂಸಿಯಿಂದ ಲಾರಿಗಳಲ್ಲಿ ಕಸ ವಿಲೇವಾರಿ ಮಾಡಿರುವುದು ಹಾಗೂ ಆಸ್ಪತ್ರೆಗಳ ತ್ಯಾಜ್ಯ ತಂದು ಸುರಿದಿರುವುದು…

ವಿಶ್ವದಲ್ಲೇ ಭಾರತ ಬುದ್ಧಿವಂತರ ನಾಡು
ಮೈಸೂರು

ವಿಶ್ವದಲ್ಲೇ ಭಾರತ ಬುದ್ಧಿವಂತರ ನಾಡು

September 23, 2018

ಮೈಸೂರು: ವಿಶ್ವದ ಲ್ಲಿಯೇ ಅತೀ ಬುದ್ಧಿವಂತರ ನಾಡು ಭಾರತ. ಈ ದೇಶದಲ್ಲಿ ಹುಟ್ಟಿದ ಸರ್ ಎಂ.ವಿಶ್ವೇ ಶ್ವರಯ್ಯ ಶ್ರೇಷ್ಠ ಇಂಜಿನಿಯರ್ ಆಗಿ ವಿಶ್ವದ ಗಮನ ಸೆಳೆದರು ಎಂದು ಶಾಸಕ ಎಸ್.ಎ. ರಾಮದಾಸ್ ಗುಣಗಾನ ಮಾಡಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಾಪರ್ಟೀಸ್ ಅಂಡ್ ಕನ್‍ಸ್ಟ್ರಕ್ಷನ್ಸ್ ಸಂಸ್ಥೆಯ 2ನೇ ಆವೃತ್ತಿಯ ಡೈರಕ್ಟರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್.ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಕೆಆರ್‍ಎಸ್ ಅಣೆಕಟ್ಟು, ಎಸ್‍ಬಿಎಂ ಬ್ಯಾಂಕ್, ಮೈಸೂರು ಸ್ಯಾಂಡಲ್‍ನಂತಹ ಸಂಸ್ಥೆಗಳನ್ನು ಸ್ಥಾಪಿಸಿ ದ್ದಾರೆ…

ಮೈಸೂರಲ್ಲಿ ಪ್ರಧಾನಿ ಮೋದಿಯವರ  ಹುಟ್ಟುಹಬ್ಬ ಸದ್ಭಾವನಾ ದಿನವಾಗಿ ಆಚರಣೆ
ಮೈಸೂರು

ಮೈಸೂರಲ್ಲಿ ಪ್ರಧಾನಿ ಮೋದಿಯವರ  ಹುಟ್ಟುಹಬ್ಬ ಸದ್ಭಾವನಾ ದಿನವಾಗಿ ಆಚರಣೆ

September 18, 2018

ಮೈಸೂರು: ಕೆಆರ್ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಸದ್ಭಾವನಾ ದಿನವಾಗಿ ಆಚರಿಸಲಾಯಿತು. ಕೆಆರ್ ಕ್ಷೇತ್ರದ 20 ವಾರ್ಡ್‍ಗಳ ವ್ಯಾಪ್ತಿ ಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸುವುದ ರೊಂದಿಗೆ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಶಿಕ್ಷಕರು ಸೇರಿದಂತೆ ಹಲವರನ್ನು ಸನ್ಮಾನಿಸುವ ಮೂಲಕ ಮೋದಿಯವರ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎ. ರಾಮದಾಸ್, ವಿಶ್ವದಲ್ಲಿ ಭಾರತ…

ಇಂದ್ರ ಧನುಷ್ ಅಭಿಯಾನದಡಿ ಮೈಸೂರಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಇಂದ್ರ ಧನುಷ್ ಅಭಿಯಾನದಡಿ ಮೈಸೂರಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ

July 17, 2018

ಮೈಸೂರು:  ಗರ್ಭಿಣಿಯರು ಮತ್ತು ಮಕ್ಕಳು ಅಗತ್ಯ ಲಸಿಕೆಗಳಿಂದ ವಂಚಿತರಾಗುವುದನ್ನು ತಡೆಗಟ್ಟುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ಇಂದ್ರಧನುಷ್ ಅಭಿಯಾನದಡಿ ಮೈಸೂರು ನಗರ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರಿನ ರಾಮಾನುಜ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಎಸ್.ಎ.ರಾಮದಾಸ್ ಮೈಸೂರು ನಗರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ…

ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ  ವಾಪಸ್ ಪಡೆಯುವ ಪ್ರಯತ್ನ
ಮೈಸೂರು

ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ  ವಾಪಸ್ ಪಡೆಯುವ ಪ್ರಯತ್ನ

July 6, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಮಾರಕವಾದ ಬಜೆಟ್ ಮಂಡಿಸಿದ್ದಾರೆ. ಇದು ಅರ್ಥ ವ್ಯವಸ್ಥೆಯ ಹೊರತಾದ ರಾಜಕೀಯ ವ್ಯವಸ್ಥೆಯ ಬಜೆಟ್ ಎಂದು ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಬಹಳ ಸದ್ದು ಮಾಡಿದ್ದ ಈ ಬಜೆಟ್ ರೈತರ ನಿರೀಕ್ಷೆಯನ್ನು ಹುಸಿ ಮಾಡಿದೆ. ರೈತರ ಪೂರ್ಣ ಸಾಲ ಮನ್ನಾ ಆಗಿಲ್ಲ. 34,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಹಣದ ಸಂಗ್ರಹ ಯಾವ ಮೂಲದಿಂದ ಬರುತ್ತದೆ ಎಂದು ಹೇಳಲಾಗಿಲ್ಲ. ಹಿಂದಿನ ಸಿದ್ದರಾಮಯ್ಯರ ಬಜೆಟ್‍ಗಿಂತ 9000 ಕೋಟಿ…

ವಿಪ್ರ ಸಂಘಟನೆಗಳಿಂದ ಎಸ್.ಎ.ರಾಮದಾಸ್‍ಗೆ ಅಭಿನಂದನೆ
ಮೈಸೂರು

ವಿಪ್ರ ಸಂಘಟನೆಗಳಿಂದ ಎಸ್.ಎ.ರಾಮದಾಸ್‍ಗೆ ಅಭಿನಂದನೆ

May 28, 2018

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರನ್ನು ವಿಪ್ರ ಸಂಘಟನೆ ಗಳ ವತಿಯಿಂದ ಅಭಿನಂದಿಸಲಾಯಿತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಬ್ರಾಹ್ಮಣ ಸಂಘಗಳ ಒಕ್ಕೂಟದ ಸಹ ಯೋಗದಲ್ಲಿ ಭಾನುವಾರ ಏರ್ಪಡಿಸಲಾ ಗಿದ್ದ ಸಮಾರಂಭದಲ್ಲಿ ಪಾಂಡವಪುರದ ಅಂಬಾವನ ಕ್ಷೇತ್ರದ ಡಾ.ಶ್ರೀ ವಿದ್ಯಾಹಂಸ ಭಾರತಿ ಮಹಾರಾಜ್ ಹಾಗೂ ಸೋಸಲೆ ಶ್ರೀ ವ್ಯಾಸರಾಜ ಮಠದ 40ನೇ ಪೀಠಾ ಧಿಪತಿಗಳಾದ ಶ್ರೀ 1008 ಶ್ರೀ…

Translate »