ಜೀವನವನ್ನು ಸವಾಲಾಗಿ ಸ್ವೀಕರಿಸಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್
ಮೈಸೂರು

ಜೀವನವನ್ನು ಸವಾಲಾಗಿ ಸ್ವೀಕರಿಸಿ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್

October 1, 2018

ನಂಜನಗೂಡು:  ‘ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳದೇ ಜೀವನವನ್ನು ಸವಾಲಾಗಿ ಸ್ವೀಕರಿಸಿ ಧೈರ್ಯ, ಆತ್ಮವಿಶ್ವಾಸ, ಸಾಧನೆ, ಛಲವನ್ನು ರೂಢಿಸಿಕೊಳ್ಳಬೇಕು. ಸಂಪದ್ಭರಿತ ಭಾರತದಲ್ಲಿ ಮಕ್ಕಳೇ ಆಸ್ತಿ’ ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.ನಂಜನಗೂಡಿನ ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಪ್ರರು ಮುಂಚಿನಿಂದಲೂ ತಮ್ಮ ವಿದ್ಯಾ ಪಾಂಡಿತ್ಯದಿಂದಲೇ ತಮ್ಮ ಜೀವನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಂದಿನ ಮಕ್ಕಳು ಸಹ ಬುದ್ದಿವಂತರಿದ್ದು, ಅದನ್ನು ಗುರುತಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಿಗಾಗಿ ಆಸ್ತಿ ಮಾಡದೆ ಅವರಿಗೆ ಸೂಕ್ತ ವಿದ್ಯಾಭ್ಯಾಸ ನೀಡಬೇಕು. ಅವರನ್ನು ದೇಶದ ಬಹುದೊಡ್ಡ ಆಸ್ತಿಯನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಮಕ್ಕಳು ಗುರಿಯತ್ತ ಮುನ್ನಗಬೇಕು. ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ತೋರುವ ಮೂಲಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಅಂದುಕೊಂಡ ಕ್ಷೇತ್ರಕ್ಕೆ ಪ್ರವೇಶ ಪಡೆಯಲಾಗದಿದ್ದರೂ ಪರವಾಗಿಲ್ಲ. ಆದರೆ ಆ ಕ್ಷೇತ್ರದಲ್ಲಿ ದೊರೆಯುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉನ್ನತಿಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಹರ್ಷವರ್ಧನ್ ಮಾತನಾಡಿ, ಯುವಕರು ದಾರಿತಪ್ಪದೆ ತಂದೆ-ತಾಯಿಯ ಸಲಹೆಯನ್ನು ಪಡೆದು ಉತ್ತಮ ಭವಿಷ್ಯಾ ರೂಪಿಸಿಕೊಳ್ಳಬೇಕು. ತಮ್ಮ ಸೇವೆಯನ್ನು ದೇಶಕ್ಕೆ ಮುಡಿಪಾಗಿಡಬೇಕು. ವಿದೇಶಕ್ಕೆ ಹೋಗಿ ಹಣದ ವ್ಯಾಮೋಹಕ್ಕೆ ಒಳಗಾಗಬೇಡಿ. ಹಣದಿಂದ ನೆಮ್ಮದಿ ಸಿಗುವುದಿಲ್ಲ, ಪೋಷಕರ ಆಶೋತ್ತರಕ್ಕೆ ಸ್ವಂದಿಸಿ ಅವರ ಕನಸನ್ನು ನನಸು ಮಾಡಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯು.ಎನ್.ಪದ್ಮನಾಭರಾವ್ ಮಾತನಾಡಿ, ರಾಮದಾಸ್ ಅವರ ಸರಳತೆ ಹಾಗೂ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿ, ಪುರಸ್ಕøತರಿಗೆ ಶುಭ ಹಾರೈಸಿದರು. ನಗರಸಭಾ ಸದಸ್ಯರಾದ ಆನಂದ್ ಹಾಗೂ ರಾಮಕೃಷ್ಣ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಸುಮಾರು 19 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪುರಸ್ಕøತರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷ ಎನ್.ಎ.ಸದಾಶಿವು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ, ಪಟ್ಟಣ ಸಂಸ್ಕಾರ ಭಾರತೀಯ ಸಂಚಾಲಕರಾದ ಗೋಪಿನಾಥ್, ನಿವೃತ್ತ ಶಿಕ್ಷಕಿ ಸುಬ್ಬಲಕ್ಷ್ಮಿ, ಸಭಾದ ನಿರ್ದೇಶಕರಾದ ಸಿ.ಪಿ.ರಮೇಶ್, ಮಾಜಿ ಪುರಸಭಾ ಸದಸ್ಯ ರಘು, ಮುಖಂಡರಾದ ಸುಧೀಂದ್ರ, ರಮೇಶ್, ಕಪಿಲೇಶ್, ಗಿರೀಶ್, ರಾಮಮೋಹನ್ ಹಾಜರಿದ್ದರು.

Translate »