ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆ: ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ತಂಡಕ್ಕೆ ಗೆಲುವು
ಮೈಸೂರು

ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆ: ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ತಂಡಕ್ಕೆ ಗೆಲುವು

October 1, 2018

ತಿ.ನರಸೀಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂಸಿಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ನೇತೃತ್ವದ ಹಾಲಿ ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ತಂಡಕ್ಕೆ ಭರ್ಜರಿ ಗೆಲುವು ದೊರೆಯಿತು. ‘ಎ’ ತರಗತಿಯಲ್ಲಿ ನಾಲ್ವರು ಹಾಗೂ ‘ಬಿ’ ತರಗತಿಯಲ್ಲಿ 8 ನಿರ್ದೇಶಕರು, ಇಬ್ಬರು ಸಹಕಾರಿ ಧುರೀಣರ ಬೆಂಬಲಿಗರು ಚುನಾಯಿತರಾದರು.

ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಡೆದಂತಹ ಪ್ರಥಮ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ಹಾಗೂ ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡರ ಬಣಗಳ ನಡುವೆ ನೇರ ಪೈಪೋಟಿ ಏರ್ಪಟಿತ್ತು. ಸುಬ್ರಮಣ್ಯ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದು, ಬದಲಾವಣೆಗೆ ಹೋರಾಟವನ್ನು ನಡೆಸಿದ್ದ ಶಂಕರೇಗೌಡರಿಗೆ ಆರಂಭದಲ್ಲೇ ಹಿನ್ನೆಡೆಯಾಗಿದೆ. ಸ್ಪರ್ಧಿಸಿದ್ದ ಬೆಂಬಲಿಗರೆಲ್ಲರೂ ಸೋತಿದ್ದಾರೆ.
ಟಿಎಪಿಸಿಎಂಎಸ್‍ನ ‘ಎ’ ತರಗತಿಯ ನಾಲ್ವರು ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಟಿ.ವಾಸುದೇವ್ 20, ಬಿ.ಎಸ್.ಮಹೇಶ್ 18, ಪಿ.ನಟರಾಜು 17, ಮಲ್ಲಣ್ಣ 16 ಮತಗಳನ್ನು ಪಡೆದು ಆಯ್ಕೆಗೊಂಡರು.

‘ಬಿ’ ತರಗತಿಯಲ್ಲಿ 8 ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯದಡಿ ಕೆ.ಕೃಷ್ಣ 826, ಟಿ.ಪಿ.ಸುಬ್ರಮಣ್ಯ 771, ಸಾಮಾನ್ಯ ಮಹಿಳೆ ಮೀಸಲಿನಡಿ ಡಿ.ಕೋಮಲ 818, ಹೆಚ್.ವಿ.ಚೈತ್ರಾ 755, ಹಿಂದುಳಿದ ವರ್ಗ ‘ಎ’ ಮೀಸಲಿನಡಿ ಎಸ್.ರಾಜಮ್ಮ 709, ಬಿ.ಶಿವಸ್ವಾಮಿ 724, ಪರಿಶಿಷ್ಟ ಜಾತಿ ಮೀಸಲಿನಡಿ ಎಂ.ಎಸ್.ಬಸವರಾಜು 738 ಹಾಗೂ ಪರಿಶಿಷ್ಟ ಪಂಗಡ ಮೀಸಲಿನಡಿ ಎಂ.ಎಂ.ಜಯಣ್ಣ 779 ಮತ ಪಡೆದು ನೂತನ ನಿರ್ದೇಶಕರಾಗಿ ಆಯ್ಕೆಗೊಂಡರು.

ಸಂಘದ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ಮತದಾನ ನಡೆಯಿತು. ನಂತರ ಮತ ಏಣಿಕೆ ಆರಂಭವಾಗಿ ಫಲಿತಾಂಶವನ್ನು ಪ್ರಕಟಿಸಲಾಯಿತು. ಚುನಾವಣಾಧಿಕಾರಿ ಪುಟರಾಜು ನೇತೃತ್ವದಲ್ಲಿ ಚುನಾವಣೆ ಹಾಗೂ ಮತ ಏಣಿಕೆ ನಡೆಯಿತು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಎಂಸಿಡಿಸಿಸಿ ಮಾಜಿ ಸಿ.ಬಸವೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಪಿ.ಸುಬ್ರಮಣ್ಯ ಹಾಗೂ ನೂತನ ನಿರ್ದೇಶಕರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.
ಕಸಬಾ ಪಿಎಸಿಸಿಎಸ್ ನಿರ್ದೇಶಕ ಅಂಗಡಿ ಎನ್.ಶೇಖರ್, ಫ್ಯಾನ್ಸಿ ಮೋಹನ್, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್.ವರದರಾಜು, ಪುರಸಭಾ ಸದಸ್ಯರಾದ ಎಸ್.ಕೆ.ಕಿರಣ, ತುಂಬಲ ಸಿ.ಪ್ರಕಾಶ್, ಬನ್ನೂರು ಪುರಸಭೆ ಉಪಾಧ್ಯಕ್ಷ ಬಿ.ಎಸ್.ರಾಮಲಿಂಗೇಗೌಡ, ಸದಸ್ಯ ಬಿ.ಎಂ.ಸೋಮಶೇಖರ, ನರಗ್ಯಾತನಹಳ್ಳಿ ಪಿಎಸಿಸಿಎಸ್ ನಿರ್ದೇಶಕ ನಿಜಲಿಂಗಪ್ಪ(ನವೀನ್), ಟಿ.ಸಿ.ಫಣೀಶ್‍ಕುಮಾರ್, ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಶಿವು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ವೈ.ಎಸ್.ರಾಮಸ್ವಾಮಿ, ಮುಖಂಡರಾದ ಅಂಗಡಿ ರಮೇಶ, ಅದ್ದೂರಿ ಶೇಖರ, ಎಸ್.ಕುಮಾರ, ಕಾವೇರಿಪುರ ಗೋವಿಂದರಾಜು ಹಾಜರಿದ್ದರು.

Translate »