ವಿಶ್ವದಲ್ಲೇ ಭಾರತ ಬುದ್ಧಿವಂತರ ನಾಡು
ಮೈಸೂರು

ವಿಶ್ವದಲ್ಲೇ ಭಾರತ ಬುದ್ಧಿವಂತರ ನಾಡು

September 23, 2018

ಮೈಸೂರು: ವಿಶ್ವದ ಲ್ಲಿಯೇ ಅತೀ ಬುದ್ಧಿವಂತರ ನಾಡು ಭಾರತ. ಈ ದೇಶದಲ್ಲಿ ಹುಟ್ಟಿದ ಸರ್ ಎಂ.ವಿಶ್ವೇ ಶ್ವರಯ್ಯ ಶ್ರೇಷ್ಠ ಇಂಜಿನಿಯರ್ ಆಗಿ ವಿಶ್ವದ ಗಮನ ಸೆಳೆದರು ಎಂದು ಶಾಸಕ ಎಸ್.ಎ. ರಾಮದಾಸ್ ಗುಣಗಾನ ಮಾಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಾಪರ್ಟೀಸ್ ಅಂಡ್ ಕನ್‍ಸ್ಟ್ರಕ್ಷನ್ಸ್ ಸಂಸ್ಥೆಯ 2ನೇ ಆವೃತ್ತಿಯ ಡೈರಕ್ಟರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್.ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಕೆಆರ್‍ಎಸ್ ಅಣೆಕಟ್ಟು, ಎಸ್‍ಬಿಎಂ ಬ್ಯಾಂಕ್, ಮೈಸೂರು ಸ್ಯಾಂಡಲ್‍ನಂತಹ ಸಂಸ್ಥೆಗಳನ್ನು ಸ್ಥಾಪಿಸಿ ದ್ದಾರೆ ಎಂದರು.

ಸಾಮಾನ್ಯ ಸಿವಿಲ್ ಇಂಜಿನಿಯರ್ ಆಗಿದ್ದ ಅವರು, ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಲು ಅವರ ಬುದ್ಧಿವಂತಿಕೆ ಕಾರಣ ವಾಯಿತು. ಅದೇ ರೀತಿಯಲ್ಲಿ ಈ ಸಂಸ್ಥೆಯು ವಿಶ್ವೇಶ್ವರಯ್ಯರನ್ನು ಆದರ್ಶವಾಗಿಟ್ಟು ಕೊಂಡು ಡೈರಕ್ಟರಿ ಮೂಲಕ ಹೆಚ್ಚಿನ ಸಾಧನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಇಂಜಿ ನಿಯರಿಂಗ್ ಓದಿದವರಿಗೆ ಉದ್ಯೋಗ ಗಳು ಸಿಗುತ್ತಿಲ್ಲ ಎಂದು ತಿಳಿಸಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವ ನಾಗಿದ್ದಾಗ ಸರ್ವಪಲ್ಲಿ ರಾಧಾಕೃಷ್ಣನ್ ನಿವಾಸವನ್ನು ನವೀಕರಿಸಿದೆವು. ಆದರೆ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಮತ್ತು ದೇವ ರಾಜ ಮಾರುಕಟ್ಟೆಯನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಳ್ಳಲು ನವೀಕರಿ ಸುವ ಅಗತ್ಯವಿತ್ತು. ಉತ್ತಮ ಇಂಜಿನಿ ಯರುಗಳ ಕೊರತೆಯಿಂದ ಈ ಕಾರ್ಯ ಸಾಧ್ಯವಾಗಲಿಲ್ಲ ಎಂದು ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಎನ್‍ಐಇ ಕಾಲೇಜು ಡೀನ್ ಪ್ರೊ. ಜಿ.ಎಸ್. ಸುರೇಶ್ ಮಾತನಾಡಿ, ನಮಗೆ ಪರಿಸರ ಬಹಳ ಮುಖ್ಯವಾಗಿದ್ದು, ಕಟ್ಟಡ ಗಳ ನಿರ್ಮಾಣ ಹಂತದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಸಿಮೆಂಟ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಅರಿವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಈ ದೃಷ್ಟಿಯಿಂದ ಡೈರೆಕ್ಟರಿ ಸಹಕಾರಿ ಯಾಗ ಲಿದೆ ಎಂದರು. ವೇದಿಕೆಯಲ್ಲಿ ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ.ಕೆ. ಮಂಜು ನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿ ಯರ್ ಬಿ.ಎನ್. ಪ್ರಭಾಕರ್ ಇದ್ದರು.

Translate »