ಗನ್‍ಹೌಸ್ ವೃತ್ತದಲ್ಲಿ ಶಾಸಕ ಎಸ್.ಎ.ರಾಮದಾಸ್‍ರಿಂದ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ಮೈಸೂರು

ಗನ್‍ಹೌಸ್ ವೃತ್ತದಲ್ಲಿ ಶಾಸಕ ಎಸ್.ಎ.ರಾಮದಾಸ್‍ರಿಂದ ಸಾರ್ವಜನಿಕ ಶೌಚಾಲಯ ಉದ್ಘಾಟನೆ

November 22, 2018

ಮೈಸೂರು:  ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 51ನೇ ವಾರ್ಡ್ ನಲ್ಲಿ ಶಿವರಾತ್ರೀಶ್ವರ ವೃತ್ತದ (ಗನ್‍ಹೌಸ್) ಬಳಿ ಮೈಸೂರು ಮಹಾನಗರಪಾಲಿಕೆ ವತಿ ಯಿಂದ ನಿರ್ಮಿಸಿರುವ ಸಾರ್ವಜನಿಕ ಸುಲಭ್ ಶೌಚಾಲಯವನ್ನು ಶಾಸಕ ಎಸ್.ಎ. ರಾಮದಾಸ್ ಬುಧವಾರ ಉದ್ಘಾಟಿಸಿದರು.

ಈ ಭಾಗದಲ್ಲಿ ಶೌಚಾಲಯವಿಲ್ಲದೆ ಬಸ್ ನಿಂದ ಇಳಿದ ಪ್ರಯಾಣಿಕರು, ಅರಮನೆಗೆ ಬಂದ ಪ್ರವಾಸಿಗರು, ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಜೆಎಸ್‍ಎಸ್ ವಿದ್ಯಾ ಪೀಠದ ಪಕ್ಕದ ಮೋರಿಯೇ ಬಯಲು ಶೌಚಾಲಯವಾಗಿದೆ. ಇದರಿಂದ ಪರಿಸರ ನೈರ್ಮಲ್ಯ ಕೆಡುತ್ತಿತ್ತು. ಇದನ್ನು ಅರಿತು ಮಹಾ ನಗರಪಾಲಿಕೆಯ ಸಾಮಾನ್ಯ ನಿಧಿಯಿಂದ 15 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೌಚಾ ಲಯ ನಿರ್ಮಿಸಲಾಗಿದೆ ಎಂದು ಶಾಸಕ ರಾಮ ದಾಸ್ ಈ ಸಂದರ್ಭದಲ್ಲಿ ಹೇಳಿದರು.

ಮಹಿಳೆಯರು, ಪುರುಷರು, ಮಕ್ಕಳು ಮತ್ತು ವಿಕಲಾಂಗರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಶೌಚಾಲಯದಲ್ಲಿ ಎರಡು ಫ್ಯಾನ್, ಕನ್ನಡಿ, ವಾಷ್ ಬೇಸಿನ್, ನೀರಿನ ಸಂಪ್, ಓವರ್ ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪರಿಸರ ಮತ್ತು ನೈರ್ಮಲ್ಯ ಕಾಪಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಸಹಾಯಕ ಆಯುಕ್ತ ಸುನೀಲ್‍ಬಾಬು, ಅಭಿವೃದ್ಧಿ ಅಧಿಕಾರಿ ಸೋಮಶೇಖರಪ್ಪ, ಅಭಿಯಂತರರಾದ ಸಂತೋಷ್, ಗುತ್ತಿಗೆದಾರ ಪುಟ್ಟರಾಜು, ಬಿಜೆಪಿ ಮುಖಂಡರಾದ ಬಾಲ ಕೃಷ್ಣ , ಸಂತೋಷ್, ವೆಂಕಟೇಶ್, ಗುರುರಾಜ್, ಸುಭಾಷ್ ಇನ್ನಿತರರು ಭಾಗವಹಿಸಿದ್ದರು.

Translate »