ಹಿಂದೂ ಧರ್ಮದಲ್ಲಿ ಸಾಮಾನ್ಯ ದಲಿತರು  ಪುರೋಹಿತರಾಗಲೂ ಸಾಧ್ಯವಿದೆಯೇ?
ಮೈಸೂರು

ಹಿಂದೂ ಧರ್ಮದಲ್ಲಿ ಸಾಮಾನ್ಯ ದಲಿತರು  ಪುರೋಹಿತರಾಗಲೂ ಸಾಧ್ಯವಿದೆಯೇ?

November 22, 2018

ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರಶ್ನೆ
ಮೈಸೂರು:  ಕ್ರೈಸ್ತ, ಮುಸ್ಲಿಂ ಮತ್ತು ಬೌದ್ಧ ಧರ್ಮದಲ್ಲಿ ಸಾಮಾನ್ಯ ಜನರು ಪೌರೋಹಿತ್ಯ ಹಾಗೂ ಪ್ರವಚನ ಮಾಡಲು ಅವಕಾಶವಿದೆ. ಆದರೆ, ಹಿಂದೂ ಧರ್ಮದಲ್ಲಿ ಸಾಮಾನ್ಯ ದಲಿತರು ಪುರೋ ಹಿತರಾಗಲು ಸಾಧ್ಯವಿದೆಯೇ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಪ್ರಶ್ನಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ‘ಪ್ರವಾದಿ ಮಹಮದ್’ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ವಿಷಯಾಧಾರಿತ ಗಣ್ಯರ ಸಭೆ ಹಾಗೂ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಧರ್ಮ ಗಳಲ್ಲಿ ಮೂಢನಂಬಿಕೆಗಳಿವೆ. ಯಾರು ಒಂದೇ ಧರ್ಮಕ್ಕೆ ಅಂಟಿಕೊಂಡಿರು ತ್ತಾರೋ ಅವರು ಮೂಢರು. ಸಮಾಜಕ್ಕೆ ತಪ್ಪು ತಿಳಿವಳಿಕೆಯನ್ನು ಹರಡುವವರು ಮತಾಂಧರು ಎಂದು ಟೀಕಿಸಿದರು.

ಪ್ರಪಂಚದ ಮತಗಳೆಲ್ಲ ಗೇಲಿಯ ವಸ್ತುಗಳಾ ಗಿರುವ ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಮಾನವ ಜನಾಂಗಕ್ಕೆ ಸೇರಿದವರು, ನಾವೆ ಲ್ಲರೂ ಮನುಷ್ಯರು ಎಂಬುದನ್ನು ಅರಿತು ದೇಶಕ್ಕೆ, ಪ್ರಪಂಚಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ವಿe್ಞÁನ ಮತ್ತು ಮಾನ ವತಾವಾದವೇ ಶಾಶ್ವತವಾಗಿದ್ದು, ಪ್ರತಿ ಯೊಂದು ಮತಗಳನ್ನು ವೈe್ಞÁನಿಕವಾಗಿ ಅವಲೋಕಿಸಿ ಸರಿ ತಪ್ಪುಗಳನ್ನು ಪರಿಶೀಲಿಸಿ, ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ತಿರಸ್ಕರಿಸ ಬೇಕು. ಬುದ್ಧ, ಬಸವ, ಅಂಬೇಡ್ಕರ್ ಹೇಳಿ ರುವಂತೆ ವೇದ, ಉಪನಿಷತ್‍ಗಳನ್ನು ನಂಬುವು ದಕ್ಕಿಂತ ಸ್ವಂತ ಅನುಭವವೇ ಸತ್ಯ ಎಂಬುದನ್ನು ಅರಿಯಬೇಕು ಎಂದರು.
ಇಸ್ಲಾಂ ಧರ್ಮದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ತಬ್ಬಿಕೊಳ್ಳುವ ಆತ್ಮೀಯತೆ ಇನ್ನಿತರ ಧರ್ಮದಲ್ಲಿಲ್ಲ. ಮನುಷ್ಯರೆಲ್ಲ ಒಟ್ಟಾಗಿ ಬಾಳಲಿ ಎಂದು ಪ್ರವಾದಿ ಮಹಮದರು ಹಿಂದೆಯೇ ಹೇಳಿದ್ದರು. ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬುದು ಅವರ ಆಶಯ ವಾಗಿತ್ತು ಎಂದು ತಿಳಿಸಿದರು.

ಬಸವ ಧ್ಯಾನ ಮಂದಿರ ಭಾವೈಕ್ಯ ಕೇಂದ್ರದ ಶ್ರೀ ಬಸವಲಿಂಗಮೂರ್ತಿ ಶರಣರು ಮಾತನಾಡಿ, ವಿಶ್ವದ ಎಲ್ಲಾ ದೇಶಗಳು ಮಹ ಮದ್ ಪೈಗಂಬರ್ ಅವರನ್ನು ಹಾಡಿ ಹೊಗಳಿವೆ. ಅವರು, 63 ವರ್ಷಗಳ ಕಾಲ ಬದುಕಿದ್ದು, 23 ವರ್ಷಗಳ ಕಾಲ ಸಮಾಜ ವನ್ನು ಪ್ರಯೋಗಕ್ಕೆ ಒಳಪಡಿಸಿದರು. ಒಳ್ಳೆಯ ಆಡಳಿತಗಾರನಾಗಿದ್ದ ಅವರು, ಅರಬ್ ದೇಶ ದಲ್ಲಿದ್ದ ಬಹು ದೇವತೆಗಳ ಆರಾಧನೆ, ಮೌಢ್ಯ ಆಚರಣೆಗೆ ಒಳಗಾಗಿದ್ದವರನ್ನು ದುರಾಚಾರ ದಿಂದ ದೂರ ಮಾಡಿದರು. ಇಂದು ಪ್ರಾಣಿ, ಪಕ್ಷಿ, ಗಿಡ, ಮರ, ಬಳ್ಳಿಗಳನ್ನು ಪೂಜಿಸುತ್ತಾರೆ. ಆದರೆ, ಮನುಷ್ಯರು ಮನುಷ್ಯತ್ವಕ್ಕೆ ಬೆಲೆ ಕೊಡದ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ನಡೆದ ಬಹುಭಾಷಾ ಕವಿಗೋಷ್ಠಿ ಯನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ಪ್ರವಾದಿ

ಮಹಮದರ ಚಿಂತನೆಗಳು ಮನುಷ್ಯ ಕುಲದ ಉದ್ಧಾರಕ್ಕೆ ಮಾರ್ಗದರ್ಶಕ ನುಡಿಗಳಾ ಗಿದ್ದು, ಒಳ್ಳೆಯ ದಾರಿಯಲ್ಲಿ ನಡೆಯಲು ಪ್ರೇರಣೆಯಾಗಿವೆ. ಅವರು, ಕಾವ್ಯ ಪ್ರಿಯ ರಾಗಿದ್ದು, ಮಸೀದಿಗಳಲ್ಲಿ ಕವನಗಳನ್ನು ವಾಚಿಸುತ್ತಿದ್ದರು ಎಂದು ತಿಳಿಸಿದರು.
ಮೂರು ಸಾವಿರ ಪದದಲ್ಲಿ ಹೇಳುವ ಅರ್ಥ ವನ್ನು ಮೂರು ಸಾಲುಗಳಲ್ಲಿ ತಿಳಿಸುವ ಶಕ್ತಿ ಕವಿತೆಗಳಿಗೆ ಇರುತ್ತದೆ. ಕವಿತೆಗಳು ಯಾವುದೇ ಪ್ರದೇಶಕ್ಕೆ ಸೀಮಿತವಾಗದೆ ಸತ್ಯ ಶೋಧನೆ ಹಾಗೂ ಮನುಷ್ಯತ್ವದ ಕಡೆ ಇರಬೇಕು ಎಂದು ಹೇಳಿ ಕವನಗಳನ್ನು ವಾಚಿಸಲು ಆಗಮಿಸಿದ್ದ ಕವಿಗಳಿಗೆ ಶುಭಹಾರೈಸಿದರು.

ಇದಕ್ಕೂ ಮೊದಲು ಶಾಂತಿ ಪ್ರಕಾಶನ ಹೊರ ತಂದಿರುವ ‘ಪ್ರವಾದಿ ಮಹಮದ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕವಯತ್ರಿ ಎ.ಹೇಮಗಂಗಾ, ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ಜನಾಬ್ ಅಕ್ಬರ್ ಅಲಿ, ಮೈಸೂರು ಘಟಕದ ಸದಸ್ಯ ಸೈಯದ್ ಅಹ್ಮದ್ ರಾಹಿಲ್, ನಿವೃತ್ತ ಪ್ರಾಧ್ಯಾಪಕ ಅಬ್ದುಲ್ ರಹ್ಮಾನ್ ಖಾನ್ ಗೌಹರ್ ಮತ್ತಿತರರು ಉಪಸ್ಥಿತರಿದ್ದರು.

Translate »