`ಕೋಟಿ- ಓದುಗರ ಆಂದೋಲನ’ ಪುಸ್ತಕ ಬಿಡುಗಡೆ
ಮೈಸೂರು

`ಕೋಟಿ- ಓದುಗರ ಆಂದೋಲನ’ ಪುಸ್ತಕ ಬಿಡುಗಡೆ

November 22, 2018

ಮೈಸೂರು: ಪತ್ರಿಕೋದ್ಯಮಿ ರಾಜಶೇಖರ ಕೋಟಿ ನಿಧನರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ನ.23ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ `ಕೋಟಿ ನೆನಪು’ ಕಾರ್ಯಕ್ರಮ ಏರ್ಪಡಿಸಿದ್ದು, ಸಂಘವು ಪ್ರಕಟಿಸಿರುವ `ಕೋಟಿ- ಓದುಗರ ಆಂದೋಲನ’ ಪುಸ್ತಕವನ್ನು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಬುಧವಾರ ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. ಬೆಳಿಗ್ಗೆ 10 ಗಂಟೆಗೆ `ಕೋಟಿ ನೆನಪು’ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟಿಸುವರು.
ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅತಿಥಿಗಳಾಗಿ ಭಾಗವಹಿಸುವರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸುವರು ಎಂದರು. ಮಧ್ಯಾಹ್ನ 12ಕ್ಕೆ `ಕೋಟಿ- ಓದುಗರ ಆಂದೋಲನ’ ಪುಸ್ತಕವನ್ನು ಒಡನಾಡಿ, ಶಕ್ತಿಧಾಮ, ಆರ್‍ಎಲ್‍ಎಚ್‍ಪಿ, ತರಕಾರಿ ಮಾರಾಟಗಾರರು ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಪ್ರತಿನಿಧಿಗಳು ಬಿಡುಗಡೆ ಮಾಡಲಿದ್ದಾರೆ. ಏಳು ಭಾಗಗಳಿರುವ ಪುಸ್ತಕ ದಲ್ಲಿ ಓದುಗರ ನೋಟ, ಒಡನಾಟ, ಹೋರಾಟ, ಹಲವು ನೋಟ, ಮಾಧ್ಯಮ ನೋಟ, ಬಾಳಾಟ- ಇವು ಆರು ಭಾಗಗಳು. ಬೇರೆ ಬೇರೆ ಲೇಖಕರು ಬರೆದಿರುವ ಲೇಖನಗಳು. ಏಳನೇ ಭಾಗದಲ್ಲಿ ಕೋಟಿಯವರು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದ `ಇದ್ದದ್ದು ಇದ್ಹಾಂಗ’ ಕಾಲಂನ ಆಯ್ದ ಲೇಖನÀಗಳಿವೆ. ಎಂದು ಹೇಳಿದರು.

ಸಮಾರಂಭದಲ್ಲಿ ಚಾಮರಾಜನಗರ ಸಂಸದ ಆರ್.ಧ್ರುವನಾರಾ ಯಣ್, `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ಸಮಾಜವಾದಿ ಚಿಂತಕ ಪ.ಮಲ್ಲೇಶ್, ಸಂವಹನ ಪ್ರಕಾಶಕ ಡಿ.ಎನ್.ಲೋಕಪ್ಪ ಅತಿಥಿಯಾಗಿ ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ, ಸಂಘದ ಪದಾಧಿಕಾರಿಗಳಾದ ಎಲ್.ಜಿ.ದಕ್ಷಿಣಾಮೂರ್ತಿ, ಎಂ. ಸುಬ್ರಹ್ಮಣ್ಯ, ಇನ್ನಿತರರು ಉಪಸ್ಥಿತರಿದ್ದರು.

Translate »