ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ  ವಾಪಸ್ ಪಡೆಯುವ ಪ್ರಯತ್ನ
ಮೈಸೂರು

ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ  ವಾಪಸ್ ಪಡೆಯುವ ಪ್ರಯತ್ನ

July 6, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಮಾರಕವಾದ ಬಜೆಟ್ ಮಂಡಿಸಿದ್ದಾರೆ. ಇದು ಅರ್ಥ ವ್ಯವಸ್ಥೆಯ ಹೊರತಾದ ರಾಜಕೀಯ ವ್ಯವಸ್ಥೆಯ ಬಜೆಟ್ ಎಂದು ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಬಹಳ ಸದ್ದು ಮಾಡಿದ್ದ ಈ ಬಜೆಟ್ ರೈತರ ನಿರೀಕ್ಷೆಯನ್ನು ಹುಸಿ ಮಾಡಿದೆ. ರೈತರ ಪೂರ್ಣ ಸಾಲ ಮನ್ನಾ ಆಗಿಲ್ಲ. 34,000 ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಹಣದ ಸಂಗ್ರಹ ಯಾವ ಮೂಲದಿಂದ ಬರುತ್ತದೆ ಎಂದು ಹೇಳಲಾಗಿಲ್ಲ. ಹಿಂದಿನ ಸಿದ್ದರಾಮಯ್ಯರ ಬಜೆಟ್‍ಗಿಂತ 9000 ಕೋಟಿ ಹೆಚ್ಚಿನ ಬಜೆಟ್ ಎಂದು ತೋರಿಸಲಾಗಿದ್ದು, 8,500 ಸಾವಿರ ಕೋಟಿ ಅಧಿಕ ಸಾಲ ತೋರಿಸಲಾಗಿದೆ. ಆಯ್ದ 45 ಯೋಜನೆಗಳಿಗೆ 3278ಕೋಟಿ ರೂ. ಮೀಸಲಿಟ್ಟಿರುವುದು ಬಿಟ್ಟರೆ ಬೇರೇನೂ ಇಲ್ಲ. ಕೇಂದ್ರ ಸರ್ಕಾರದ ಸಂಧ್ಯಾ ಸುರಕ್ಷಾ ಪೆನ್ಷನ್ ಯೋಜನೆಗೆ 600ರಿಂದ 1000 ರೂ. ಹೆಚ್ಚಿಸಲಾಗಿದೆ.

ಇದರಲ್ಲಿ ಕರ್ನಾಟಕ ತನ್ನ ಪಾಲನ್ನು ತೆಗೆದಿಟ್ಟಿರುವುದು ತನ್ನ ಸಾಧನೆ ಎಂದು ಹೇಳಿಕೊಂಡಿದೆ ಎಂದರು. ಕಾಂಗ್ರೆಸ್ ಸರ್ಕಾರ ಶಾಲೆಗಳನ್ನು ಮುಚ್ಚುವು ದಿಲ್ಲ ಎಂದು ಘೋಷಿಸಿತ್ತು. ಆದರೆ ಈ ಬಜೆಟ್‍ನಲ್ಲಿ 28847 ಸರ್ಕಾರಿ ಮತ್ತು ಅನು ದಾನಿತ ಶಾಲೆಗಳನ್ನು ಹತ್ತಿರದ 10,830 ಶಾಲೆಗಳಿಗೆ ವಿಲೀನಗೊಳಿಸಿ 20,317 ಶಾಲೆಗಳನ್ನು ಮುಚ್ಚುತ್ತಿರುವುದು ಒಂದು ಸಾಧನೆ ಎಂದು ಟೀಕಿಸಿದರು. ಆರ್ಥಿಕ ಶಿಸ್ತಿಲ್ಲದ, ಪ್ರಗತಿ ದಾಯಕವಲ್ಲದ ಬಜೆಟ್.ನಲ್ಲಿ 40,753ಕೋಟಿ ವಿತ್ತೀಯ ಕೊರತೆ ನೀಗಿಸಲು ಯಾವ ಪ್ರಯತ್ನವನ್ನೂ ಮಾಡಿಲ್ಲ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಅನ್ನು ದೇಶದ ಎಲ್ಲಾ ರಾಜ್ಯಗಳು ಕಡಿಮೆ ಮಾಡುತ್ತಿದ್ದರೆ, ಕರ್ನಾಟಕ ದಲ್ಲಿ ಈ ಬಜೆಟ್‍ನಲ್ಲಿ ಹೆಚ್ಚು ಮಾಡಿ ರುವುದು ರೈತನಿಗೆ ಕೊಟ್ಟ ಹಣವನ್ನು ರೈತನಿಂದಲೇ ವಾಪಸು ಪಡೆಯುವ ತಂತ್ರವಾಗಿದೆ., ಜನಸಾಮಾನ್ಯರ ಮೇಲೆ ಹೊರೆ, ಇದರಿಂದ ದಿನನಿತ್ಯದ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ವಿದ್ಯುತ್ ದರದ ಮೇಲೆ ಶೇ.30ರಷ್ಟು ಕರ ಹಾಕಿರುವುದು ಪ್ರತಿಯೊ ಬ್ಬನ ಮೇಲೆ ಹಾಕಿದ ಹೊರೆ.ಮೈಸೂರು ಮತ್ತು ಜಿಲ್ಲೆಗೆ ಯಾವುದೇ ಕೊಡುಗೆ ಯಾಗಲೀ, ಪ್ರವಾಸೋದ್ಯಮ ಮತ್ತು ಶಿಕ್ಷಣದ ಅಭಿವೃದ್ಧಿಗೆ ಯಾವುದೇ ಕೊಡುಗೆ ದೊರೆತಿಲ್ಲ.

Translate »