ಅನಧಿಕೃತ ಎರಡು ಡೈಯಿಂಗ್ ಕೇಂದ್ರಗಳಿಗೆ ಬೀಗ
ಮೈಸೂರು

ಅನಧಿಕೃತ ಎರಡು ಡೈಯಿಂಗ್ ಕೇಂದ್ರಗಳಿಗೆ ಬೀಗ

July 6, 2018

ಮೈಸೂರು:  ಪರಿ ಸರಕ್ಕೆ ಮಾರಕವಾದ ರಾಸಾಯನಿಕಗಳನ್ನು ಬಳಸಿ, ನಡೆಸಲಾಗುತ್ತಿದ್ದ ಎರಡು ಡೈಯಿಂಗ್ ಕೇಂದ್ರಗಳ ಮೇಲೆ ಗುರುವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿ ಕಾರಿಗಳು ದಾಳಿ ನಡೆಸಿ, ಬೀಗ ಜಡಿದರು.

ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆಯ ಅನುಮತಿ ಪಡೆಯದೆ ಬಟ್ಟೆಗಳಿಗೆ ಬಣ್ಣ ಹಚ್ಚುವ ಕೇಂದ್ರಗಳು ಮೈಸೂರಿನಲ್ಲಿ ತಲೆ ಎತ್ತಿದ್ದು, ಪರಿಸರಕ್ಕೆ ಮಾರಕವಾಗಿರುವ ರಾಸಾ ಯನಿಕ ಪದಾರ್ಥಗಳ ಮಿಶ್ರಣ ಮಾಡಿದ ಬಣ್ಣವನ್ನು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಅವರು ಅನಧಿಕೃತವಾಗಿ ನಡೆಯುತ್ತಿರುವ ಬಟ್ಟೆಗಳಿಗೆ ಬಣ್ಣ ಹಾಕುವ(ಡೈಯಿಂಗ್ ಸೆಂಟರ್) ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವ ದಲ್ಲಿ ಇಂದು ಬೆಳಿಗ್ಗೆ ಮೈಸೂರಿನ ಮಂಡಿ ಮೊಹಲ್ಲಾದ ಸಿವಿ ರಸ್ತೆಯ ಗೋಡೌನ್ ವೊಂದರಲ್ಲಿ ನಡೆಯುತ್ತಿದ್ದ ಬಟ್ಟೆಗಳಿಗೆ ಬಣ್ಣ ಹಾಕುವ ಕೇಂದ್ರ ಹಾಗೂ ಬನ್ನಿ ಮಂಟಪದಲ್ಲಿರುವ ಮತ್ತೊಂದು ಕೇಂದ್ರಕ್ಕೆ ಬೀಗ ಜಡಿದರು. ಇದೇ ವೇಳೆ ತಹಶೀಲ್ದಾರ್ ಟಿ.ರಮೇಶ್ ಬಾಬು ಮಾತನಾಡಿ, ಮೈಸೂರು ನಗರದಲ್ಲಿ ಅನಧಿಕೃತವಾಗಿ 8 ಡೈಯಿಂಗ್ ಕೇಂದ್ರಗಳಿರುವುದನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಕೇಂದ್ರಗಳನ್ನು ಅನುಮತಿ ಪಡೆಯದೆ ನಡೆಸಲಾಗುತ್ತಿತ್ತು. ಜಿಲ್ಲಾಧಿಕಾರಿಗಳು ನೀಡಿದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಇಂದು ಎರಡು ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಉಳಿದ 6 ಕೇಂದ್ರಗಳನ್ನು ಇನ್ನೆರಡು ದಿನದಲ್ಲಿ ಮುಚ್ಚಿಸಲಾಗುತ್ತದೆ. ಇಂದು ಬೀಗ ಹಾಕಿ ರುವ ಕೇಂದ್ರವನ್ನು ಮತ್ತೆ ತೆರೆದರೆ ಜಾಗದ ಮಾಲೀಕರು ಹಾಗೂ ಡೈಯಿಂಗ್ ಘಟಕ ನಡೆಸುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಬಿ.ಎಂ.ಪ್ರಕಾಶ್ ಮಾತನಾಡಿ, ತಮಿಳುನಾಡು ಮೂಲದ ವ್ಯಕ್ತಿಗಳು ಬಟ್ಟೆಗಳಿಗೆ ಬಣ್ಣ ಹಾಕುವ ಘಟಕ ವನ್ನು ನಡೆಸುತ್ತಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಮಿಳುನಾಡಿ ನಲ್ಲಿ ಈ ರೀತಿಯ ಉದ್ಯಮ ನಡೆಸಲು ಅವಕಾಶವಿಲ್ಲ. ಹಾಗಾಗಿ ಮೈಸೂರಿನ ಕೈಗಾರಿಕಾ ಪ್ರದೇಶಗಳು ಕೊಳಚೆ ಪ್ರದೇಶ ಹಾಗೂ ಜನ ಸಂಚಾರ ವಿರಳವಿರುವ ಸ್ಥಳದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಅನಧಿಕೃತವಾಗಿ ಡೈಯಿಂಗ್ ಸೆಂಟರ್ ನಡೆಸುತ್ತಾರೆ. ಈ ಕೇಂದ್ರಗಳಿಗೆ ಹೆಸರಿರುವುದಿಲ್ಲ. ಅಲ್ಲದೆ ಬಾಯ್ಲರ್ ಇರು ವುದಿಲ್ಲ. ಮೈಸೂರಿನಲ್ಲಿ ಸರಬರಾಜಾಗುವ ನೀರನ್ನು ನೇರವಾಗಿ ಡೈಯಿಂಗ್‍ಗೆ ಬಳಸಿ ಕೊಳ್ಳಬಹುದಾಗಿದೆ. ಇದನ್ನೇ ಬಂಡ ವಾಳವಾಗಿಸಿಕೊಂಡು ಅನಧಿಕೃತವಾಗಿ ಡೈಯಿಂಗ್ ಸೆಂಟರ್ ನಡೆಸಲಾಗುತ್ತಿದೆ. ಅನೇಕ ರಾಸಾಯನಿಕ ವಸ್ತುಗಳನ್ನು ಬಳಸ ಲಾಗುತ್ತಿದೆ ಎಂದು ಆರೋಪಿಸಿದರು.

ಡೈಯಿಂಗ್ ಮಾಡಿದ ನಂತರ ನೀರನ್ನು ಒಳಚರಂಡಿ ಮೂಲಕ ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲದಲ್ಲಿ ರಾಸಾಯನಿಕ ಅಂಶಗಳು ಸೇರುತ್ತವೆ. ಅಲ್ಲದೆ ಸ್ಥಳೀ ಯರಿಗೆ ಚರ್ಮ ರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಇದನ್ನು ಮನ ಗಂಡು ಐಪಿಸಿ 188 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಡೈಯಿಂಗ್ ಸೆಂಟರ್‍ನಲ್ಲಿರುವ ಯಂತ್ರೋಪಕರಣಗಳು, ಬಣ್ಣಗಳನ್ನು ಬಳಸದಂತೆ ಇಡಿ ಕೇಂದ್ರವನ್ನೇ ಜಪ್ತಿ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಅನು ಮತಿ ಪಡೆಯುವವರೆಗೂ ಈ ಕೇಂದ್ರ ವನ್ನು ತೆರೆಯುವುದಕ್ಕೆ ಅವಕಾಶ ನೀಡುವು ದಿಲ್ಲ. ನಿಯಮ ಉಲ್ಲಂಘಿಸಿ ಮತ್ತೆ ಕಾರ್ಯಾರಂಭ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಗುರುತಿಸಲ್ಪಟ್ಟ ಎಲ್ಲಾ ಎಂಟು ಅನಧಿಕೃತ ಡೈಯಿಂಗ್ ಕೇಂದ್ರಗಳ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಅವರು ಹೇಳಿದರು.

ಧಾಳಿಯಲ್ಲಿ ಪಾಲಿಕೆಯ ಪರಿಸರಾಧಿಕಾರಿ ಡಾ.ತಬಸಂ, ಪರಿಸರ ಅಭಿಯಂತರ ಎ.ಸ್ಪೂರ್ತಿ, ಕಂದಾಯಾಧಿಕಾರಿ ಮಹೇಶ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಅಶ್ವಿನಿ, ಎನ್.ಆರ್.ಠಾಣೆಯ ಸಬ್ ಇನ್ಸ್‍ಪೆಕ್ಟರ್ ಎನ್.ಮೋಹನ್ ಸೇರಿದಂತೆ ಇನ್ನಿತರರು ಇದ್ದರು.

Translate »