ವಿಪ್ರ ಸಂಘಟನೆಗಳಿಂದ ಎಸ್.ಎ.ರಾಮದಾಸ್‍ಗೆ ಅಭಿನಂದನೆ
ಮೈಸೂರು

ವಿಪ್ರ ಸಂಘಟನೆಗಳಿಂದ ಎಸ್.ಎ.ರಾಮದಾಸ್‍ಗೆ ಅಭಿನಂದನೆ

May 28, 2018

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರನ್ನು ವಿಪ್ರ ಸಂಘಟನೆ ಗಳ ವತಿಯಿಂದ ಅಭಿನಂದಿಸಲಾಯಿತು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಬ್ರಾಹ್ಮಣ ಸಂಘಗಳ ಒಕ್ಕೂಟದ ಸಹ ಯೋಗದಲ್ಲಿ ಭಾನುವಾರ ಏರ್ಪಡಿಸಲಾ ಗಿದ್ದ ಸಮಾರಂಭದಲ್ಲಿ ಪಾಂಡವಪುರದ ಅಂಬಾವನ ಕ್ಷೇತ್ರದ ಡಾ.ಶ್ರೀ ವಿದ್ಯಾಹಂಸ ಭಾರತಿ ಮಹಾರಾಜ್ ಹಾಗೂ ಸೋಸಲೆ ಶ್ರೀ ವ್ಯಾಸರಾಜ ಮಠದ 40ನೇ ಪೀಠಾ ಧಿಪತಿಗಳಾದ ಶ್ರೀ 1008 ಶ್ರೀ ವಿದ್ಯಾ ಮನೋಹರ ತೀರ್ಥರು, ಶಾಸಕ ಎಸ್.ಎ. ರಾಮದಾಸ್ ಅವರನ್ನು ಅಭಿನಂದಿಸಿ, ಆಶೀರ್ವದಿಸಿದರು.

ಬಳಿಕ ಶ್ರೀ ವಿದ್ಯಾಮನೋಹರ ತೀರ್ಥರು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಎಸ್.ಎ.ರಾಮದಾಸ್ ಅವರ ಗೆಲುವು ಸಾಕ್ಷೀಕರಿಸುತ್ತದೆ. ವಿಪ್ರ ಸಮು ದಾಯದ ಒಗ್ಗಟ್ಟು ಇದೇ ರೀತಿಯಲ್ಲಿ ಶಾಶ್ವತವಾಗಿರಬೇಕು. ತ್ರಿಮತಸ್ಥರು ಎಂಬ ಗೊಂದಲಗಳು ಕೆಲವರಲ್ಲಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಂಘ ಸಕ್ರಿಯವಾಗಿದೆ. ರಾಮದಾಸ್ ಅಂತಹವರು ಸಮಾಜದ ಏಳಿಗೆಗೆ ದೃಢಸಂಕಲ್ಪ ಮಾಡಿದ್ದಾರೆ. ಇದರೊಂದಿಗೆ ಪ್ರತಿಯೊಬ್ಬರ ಸಹಕಾರ ವೂ ಬೇಕಿದೆ ಎಂದು ತಿಳಿಹೇಳಿದರು.

ಅಂಬಾವನ ಕ್ಷೇತ್ರದ ಡಾ.ಶ್ರೀ ವಿದ್ಯಾ ಹಂಸ ಭಾರತಿ ಮಹಾರಾಜ್ ಅವರು ಮಾತನಾಡಿ, ಶಂಕರಾಚಾರ್ಯರ ಮಠ, ಮದ್ವಾಚಾರ್ಯರ ಮಠ, ರಾಮಾನುಜಾ ಚಾರ್ಯರ ಮಠಗಳ ನಡುವೆ ವ್ಯತ್ಯಾಸ ಕಾಣಬಾರದು. ಇನ್ನು ಮುಂದೆ ಎಂದಿಗೂ ವಿಪ್ರರು ತ್ರಿಮತಸ್ಥರು ಎಂಬ ಪದವನ್ನು ಬಳಕೆ ಮಾಡಬಾರದು. ಮಠ ಎಂದರೆ ವಿದ್ಯಾರ್ಥಿಗಳು ವಾಸಿಸುವ ಸ್ಥಳವೆಂಬ ವ್ಯಾಖ್ಯಾನವಿದೆಯೇ ಹೊರತು, ಯತಿಗಳ ಕ್ಷೇತ್ರವೆಂದಲ್ಲ. ಒಂದೇ ಸ್ಥಳದಲ್ಲಿ ವಾಸಿಸು ವರನ್ನು ಯತಿಗಳು ಎನ್ನಲಾಗದು. ಅಂತಹ ವರನ್ನು ಮಠಾಧೀಶರೆಂದು ಕರೆಯಬಹು ದಷ್ಟೆ. ಚಂದ್ರಶೇಖರ ಮಹಾಸ್ವಾಮಿಗಳು ತಮ್ಮ ಬಾಲ್ಯದ ಬಗ್ಗೆ ಹೇಳುವಾಗ `ಮಠ, ಮತ, ದೇವಾಲಯ ಎಂಬ ಸೂತಕಗಳಿಲ್ಲದೆ ಮಡಿವಂತಿಕೆಯಿಂದ ಕಳೆದ ದಿನಗಳವು’ ಎಂದು ತಿಳಿಸಿದ್ದಾರೆ. ಅವರ ಮಾತನ್ನು ಪ್ರತಿ ಯೊಬ್ಬರೂ ಅರ್ಥೈಸಿಕೊಂಡು, ಸ್ಮಾರ್ತರು, ಮಾದ್ವರು, ವೈಷ್ಣವರು ಎಂಬ ಭೇದವನ್ನು ಬಿಟ್ಟು ನಾವೆಲ್ಲಾ ವಿಪ್ರರು ಎಂಬ ಭಾವನೆ ಯನ್ನು ಬೆಳೆಸಿಕೊಳ್ಳಬೇಕೆಂದು ನುಡಿದರು.

ವಾಸ್ತುಶಾಸ್ತ್ರದ ಹೆಸರಿನಲ್ಲಿ ಕೆಲವರು, ಪ್ರೀತಿಯಿಂದ ಕಟ್ಟಿದ್ದ ಮನೆಯನ್ನು ನೆಲಸಮ ಮಾಡಿಸುತ್ತಾರೆ. ಉತ್ತರಭಾಗ ಎತ್ತರವಾಗಿದ್ದು, ದಕ್ಷಿಣಭಾಗ ತಗ್ಗಾಗಿದೆ ಹಾಗಾಗಿ ದೇಶದ ವಾಸ್ತುವೇ ಸರಿಯಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ಉತ್ತರದಲ್ಲಿ ಎತ್ತರ ವಾಗಿರುವುದರಿಂದಲೇ ದಕ್ಷಿಣದಲ್ಲಿ ಶೀಲವಂತಿಕೆ ಉಳಿದಿದೆ ಎಂಬುದು ನನ್ನ ಉತ್ತರವಾಗಿದೆ ಎಂದು ತಮ್ಮ ವಿಶಿಷ್ಟ ವಿಶ್ಲೇಷಣೆ ಯಿಂದ ಮೌಢ್ಯಗಳನ್ನು ನಂಬಬಾರದೆಂದು ಎಚ್ಚರಿಕೆ ನೀಡಿದ ಶ್ರೀಗಳು, ರಾಮದಾಸ್ ನನ್ನ ಮಗು ಎಂದು ಭಾವಿಸಿ ಈ ಕಾರ್ಯಕ್ರಮಕ್ಕೆ ಬಂದಿ ದ್ದೇನೆ. ಹೆಚ್.ಡಿ.ದೇವೇಗೌಡ ರಂತೆ ರಾಮ ದಾಸ್‍ಗೂ ಸುಯೋಗ ಕಲ್ಪಿತ ವಾಗಿ 12 ತಿಂಗಳಾದರೂ ಪ್ರಧಾನಮಂತ್ರಿ ಯಾಗಬೇ ಕೆಂಬ ಆಶಯವಿದೆ. ಈವರೆಗೆ ನಾನು ಹೇಳಿರು ವುದು ಸುಳ್ಳಾಗಿಲ್ಲ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಕೆ.ಎನ್.ವೆಂಕಟನಾರಾ ಯಣ ಅವರು ಮಾತನಾಡಿ, ಈ ಬಾರಿ 12 ಮಂದಿ ವಿಪ್ರರು ಶಾಸಕರಾಗಿ ಆಯ್ಕೆ ಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಟ್ಟಾಗಿ ಸೇರಿಸಿ ಅಭಿನಂದಿಸ ಬೇಕೆಂಬ ಚಿಂತನೆಯಿದೆ. ಶಾಸಕರೆಂದರೆ ಎಲ್ಲಾ ಸಮುದಾಯದವರ ಒಳಿತಿಗಾಗಿ ಕೆಲಸ ಮಾಡಬೇಕು. ಜೊತೆಗೆ ವಿಪ್ರ ಸಮುದಾಯ ವನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಸದಾ ಸಮುದಾಯದ ಜೊತೆಗಿರ ಬೇಕು. ವಿಪ್ರ ಸಮುದಾಯದವರು ರಾಜ ಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಹಾಗೆಯೇ ಮತದಾನ ಮಾಡದವರು ಸುಶಿಕ್ಷಿತರಲ್ಲ ಎಂದು ಕಳೆದ 6 ತಿಂಗಳಿಂದ ಜಾಗೃತಿ ಅಭಿಯಾನ ನಡೆಸಿದ್ದಕ್ಕೆ ಮತದಾನ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಪ್ರಾಸ್ತಾವಿಕ ವಾಗಿ ಮಾತನಾಡಿ, ವಿಪ್ರ ಸಮುದಾಯದ ಬಡವರಿಗೆ ಸ್ವಂತ ಸೂರು ಕಲ್ಪಿಸಿಕೊಡ ಬೇಕು. ರಾಜಕೀಯದಲ್ಲಿ ಆಸಕ್ತಿ ಹೊಂದಿ ರುವ ವಿಪ್ರ ಯುವಕರನ್ನು ಸೂಕ್ತ ಮಾರ್ಗ ದರ್ಶನದೊಂದಿಗೆ ಬೆಳೆಸಬೇಕು. ಬ್ರಾಹ್ಮಣ ಕಲ್ಯಾಣ ಮಂಡಳಿ ಸ್ಥಾಪನೆ ಹಾಗೂ ಬ್ರಾಹ್ಮಣ ದೌರ್ಜನ್ಯ ವಿರೋಧಿ ಕಾಯ್ದೆ ಅನುಷ್ಠಾನ ಗೊಳಿಸಬೇಕೆಂಬ ನಮ್ಮ ಆಗ್ರಹಕ್ಕೆ ಶಾಸಕ ಎಸ್.ಎ.ರಾಮದಾಸ್ ಅವರು ಬೆಂಬಲ ವಾಗಿ ನಿಲ್ಲಬೇಕೆಂದು ಅನೇಕ ಬೇಡಿಕೆ ಗಳನ್ನು ಪ್ರಸ್ತಾಪಿಸಿದರು.
ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಸೇವಾ ಸಮಿತಿಯ ಶ್ರೀ ಭಾನುಪ್ರಕಾಶ್ ಶರ್ಮ, ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋ ಧನಾ ಸಂಸ್ಥೆಯ ನಿವೃತ್ತ ಡೀನ್ ಡಾ.ಗೀತಾ ಅವಧಾನಿ, ಪಾಲಿಕೆ ಸದಸ್ಯರಾದ ಮ.ವಿ. ರಾಂಪ್ರಸಾದ್, ಸೀಮಾ ಪ್ರಸಾದ್, ವಿಪ್ರ ಮುಖಂಡರಾದ ಗೋಪಾಲರಾವ್, ಜಿ.ಆರ್.ನಾಗರಾಜ್, ಬಿ.ವಿ.ಶೇಷಾದ್ರಿ, ಕೆ.ರಘುರಾಂ ಮತ್ತಿತರರು ಉಪಸ್ಥಿತರಿದ್ದರು.

Translate »