ಮೈಸೂರು

387 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

September 29, 2018

ಮೈಸೂರು:  ಮೈಸೂ ರಿನ ಸೇಂಟ್ ಫಿಲೋಮಿನಾಸ್ ಕಾಲೇಜಿ ನಲ್ಲಿ ಶುಕ್ರವಾರ ನಡೆದ ಕಾಲೇಜಿನ 4ನೇ ಘಟಿಕೋತ್ಸವದಲ್ಲಿ ಒಟ್ಟು 387 ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕಾಲೇಜಿನ ಒಳಾಂಗಣ ಕ್ರೀಡಾಂಗಣ ದಲ್ಲಿ ಕಾರ್ಯಕ್ರಮದಲ್ಲಿ ಪದವಿ ವಿಭಾಗದಲ್ಲಿ 255 ವಿದ್ಯಾರ್ಥಿಗಳು ಪದವಿ ಪಡೆದರು. ಅವರಲ್ಲಿ 7 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಮೇರಿ ಏಂಜ ಲಿಯ ಆಲ್ಪ್ರೇಟ್ ಎಂಬ ವಿದ್ಯಾರ್ಥಿನಿ ಪದವಿಯ ವಿಜ್ಞಾನ ವಿಭಾಗ ದಲ್ಲಿ 5 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ಪದಕ ಪಡೆದ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದರು. ಪದವಿಯ ಕಲಾ ವಿಭಾಗದಿಂದ ಒಟ್ಟು 86, ವಿಜ್ಞಾನ ವಿಭಾಗದಿಂದ 86, ವಾಣಿಜ್ಯ ವಿಭಾಗದಲ್ಲಿ 83 ವಿದ್ಯಾರ್ಥಿಗಳು ಪದವಿ ಪಡೆದರು. ಸ್ನಾತಕೋತ್ತರ ವಿಭಾಗದಲ್ಲಿ 132 ವಿದ್ಯಾರ್ಥಿಗಳು ಪದವಿ ಪಡೆದರೆ, ಅವರಲ್ಲಿ 8 ವಿದ್ಯಾರ್ಥಿಗಳು ಚಿನ್ನದ ಪದಕ ಗಳನ್ನು ಸ್ವೀಕರಿಸಿದರು.

ಇದೇವೇಳೆ ಘಟಿಕೋತ್ಸವದ ಅಧ್ಯ ಕ್ಷತೆ ಯನ್ನು ವಹಿಸಿ ವಿದ್ಯಾರ್ಥಿಗಳನ್ನು ಉದ್ದೇ ಶಿಸಿ ಮಾತನಾಡಿದ ಸುಪ್ರಿಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಎಂಬುದು ಅತೀ ಮುಖ್ಯ, ಈ ಶಿಕ್ಷಣ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಹಾಗೆಯೇ ಇದು ಸಮಾಜ ದಲ್ಲಿ ಯಾರಿಗೂ ಹೆದರದಂತೆ ಬದುಕುವ ಶಕ್ತಿ ನೀಡುತ್ತದೆ ಎಂದರು.

ದೇಶದ ಭವಿಷ್ಯವು ತರಗತಿಗಳಲ್ಲಿ ರೂಪಿತ ವಾಗುವುದು. ಶಿಕ್ಷಕರು ಶಿಲ್ಪಿಗಳಿದ್ದಂತೆ. ವಿದ್ಯಾರ್ಥಿಗಳನ್ನು ಶಿಲ್ಪಕಲೆಯಾಗಿ ಮಾರ್ಪ ಡಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ, ಹೀಗಾಗಿ ತರಗತಿಯಲ್ಲಿ ಗುರುಗಳು ವಿದ್ಯಾರ್ಥಿ ಗಳನ್ನು ಪ್ರೋತ್ಸಾಹಿಸುವ ಮೂಲಕ ಅವ ರನ್ನು ವಿವಿಧ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ವಹಿಸುವಂತೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಷಪ್ ಡಾ.ಕೆ.ಎ.ವಿಲಿಯಂ, ಘಟಿಕೋತ್ಸವವು ಉತ್ತಮ ಮಾನವೀಯತೆಯ ಸಂಕೇತ ವಾಗಿದೆ. ವಿಶ್ವವಿದ್ಯಾನಿಲಯ ಮತ್ತು ವಿದ್ಯಾ ಸಂಸ್ಥೆಗಳು ಕೇವಲ ಪದವಿಗಳನ್ನು ಮಾತ್ರ ನೀಡುವುದಿಲ್ಲ. ಜೊತೆಗೆ ಮಾನವೀಯತೆ ಕಲಿಸುತ್ತವೆ. ವಿದ್ಯಾವಂತರಾದ ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮೂಲಕ ಸೇವೆ ಸಲ್ಲಿಸಬೇಕು ಎಂದು ಬಿಷಪ್ ಡಾ.ಕೆ.ಎ.ವಿಲಿಯಂ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಕಾರ್ ಜನರಲ್ ರೆ.ಲೆಸ್ಲಿ ಮೊರಸ್, ಸೇಂಟ್ ಫಿಲೋ ಮಿನಾಸ್ ಕಾಲೇಜಿನ ರೆಕ್ಟರ್ ಡಾ. ಬರ್ನಾಡ್ ಪ್ರಕಾಶ್, ಬಾರ್ನಿಕ್, ಪ್ರಾಂಶು ಪಾಲ ಡಾ.ರೂತ್ ಶಾಂತಕುಮಾರಿ, ಸ್ನಾತಕೋತ್ತರ ವಿಭಾಗದ ನಿರ್ದೇಶಕರಾದ ಆರ್ತ್‍ಬರ್ಟ್ ಪಿಂಟೊ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಸುಕನ್ಯ ಇನ್ನಿತರರು ಉಪಸ್ಥಿತರಿದ್ದರು.

Translate »