ಇಂದಿನಿಂದ ಬಿಗ್‌ಬಜಾರ್‌ನಲ್ಲಿ ಮೆಗಾ ಶಾಪಿಂಗ್ ಮೇಳ
ಮೈಸೂರು

ಇಂದಿನಿಂದ ಬಿಗ್‌ಬಜಾರ್‌ನಲ್ಲಿ ಮೆಗಾ ಶಾಪಿಂಗ್ ಮೇಳ

September 29, 2018

ಮೈಸೂರು:  ಮೈಸೂರು ಮಾತ್ರವಲ್ಲದೆ ದೇಶದ 250ಕ್ಕು ಹೆಚ್ಚು ಬಿಗ್ ಬಜಾರ್‍ನಲ್ಲಿ ಸೆ.29ರಿಂದ ಅ.3ರವರೆಗೆ ಸಾರ್ವಜನಿಕ ಹಾಲಿಡೇ ಮಾರಾಟ (ಪಬ್ಲಿಕ್ ಹಾಲಿಡೆ ಸೇಲ್) ಎಂಬ ಮೆಗಾ ಶಾಪಿಂಗ್ ಉತ್ಸವವನ್ನು ಆಯೋಜಿಸಿದೆ.

ಈ ಕುರಿತು ಮಾಹಿತಿ ನೀಡಲು ಬಿಗ್‍ಬಜಾರ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಬಿಗ್‍ಬಜಾರ್‍ನ ಸ್ಟೋರ್ ಮ್ಯಾನೇಜರ್ ರವಿಚಂದ್ರನ್ ಮಾತನಾಡಿ, ಇದೇ ಮೊದಲ ಬಾರಿಗೆ ಸಾರ್ವಜನಿಕ ಹಾಲಿಡೆ ಮಾರಾಟವನ್ನು ಆಯೋಜಿಸಿದ್ದು, ದಿನಸಿ, ಡಿಟರ್ಜೆಂಟ್ ಪೌಡರ್ಸ್, ಸೋಪ್, ಟೀ, ಬಿಸ್ಕೇಟ್, ಹೆಲ್ತ್‌ಡ್ರಿಂಕ್‌, ಟ್ರೂಟ್ ಜ್ಯೂಸ್, ಸ್ವೀಟ್ಸ್, ಒಣ ಹಣ್ಣುಗಳು, ಚಾಕೋಲೇಟ್, ಬೆಡ್‍ಶೀಟ್ಸ್, ಗ್ಯಾಸ್‍ಸ್ಟೌವ್, ಕ್ಲೀನಿಂಗ್ ನೀಡ್ಸ್, ಅಡುಗೆ ಪದಾರ್ಥ, ಡೈಯಿಂಗ್, ಸ್ಟೋರೇಜ್ ಪದಾರ್ಥ, ಎಲೆಕ್ಟ್ರಾನಿಕ್ಸ್, ಲಗೇಜ್, ಬಟ್ಟೆ ಮತ್ತಿತರೆ ವಸ್ತುಗಳ ಮೇಲೆ ಅತ್ಯಾಕರ್ಷಕ ಕೊಡುಗೆ ಮತ್ತು ರಿಯಾಯಿತಿ ನೀಡಲಾಗುವುದು. ಜತೆಗೆ ಹೆಚ್.ಡಿ.ಎಫ್.ಸಿ ಕಾರ್ಡ್ ಬಳಕೆದಾರರು 3500 ರೂ.ಗಿಂತ ಹೆಚ್ಚು ವ್ಯವಹರಿಸಿದರೆ ಶೇ.7ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.

ನಟ ಚಿರಂಜೀವಿ ಸರ್ಜಾ ಮಾತನಾಡಿ, ಬಿಗ್ ಬಜಾರ್‍ನಲ್ಲಿ ಪಬ್ಲಿಕ್ ಹಾಲಿಡೇ ಸೇಲ್ ಎಂಬ ಶಾಪಿಂಗ್ ಉತ್ಸವವನ್ನು ಆಯೋಜಿಸುವ ಮೂಲಕ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಸ್ತುಗಳನ್ನು ನೀಡುತ್ತಿದೆ. ಜತೆಗೆ ಮನೆಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುವುದರಿಂದ ಮೈಸೂರಿನ ಜನತೆ ಇದರ ಸದುಪಯೋಗಪಡೆದು ಕೊಳ್ಳಬೇಕು. ನಾನೆಂದು ಬಿಗ್‍ಬಜಾರ್‍ಗೆ ಹೋದವನಲ್ಲ. ಇಂದು ನಾನೂ ಕೂಡ ಶಾಪಿಂಗ್ ಮಾಡಿದ್ದೇನೆ ಎಂದು ಹೇಳಿದರು. ನಟಿ ಮೇಘನಾರಾಜ್ ಉಪಸ್ಥಿತರಿದ್ದರು.

Translate »