ನಾಳೆಯಿಂದ ದಸರಾ ಯುವ ಸಂಭ್ರಮ
ಮೈಸೂರು

ನಾಳೆಯಿಂದ ದಸರಾ ಯುವ ಸಂಭ್ರಮ

September 29, 2018

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗ ವಾಗಿ ಸೆ.30ರಿಂದ ಅ.7ರವರೆಗೆ `ಯುವ ಸಂಭ್ರಮ’ ಆಯೋಜಿಸಿದ್ದು, 8 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 10 ಗಂಟೆ ವರೆಗೆ ಮಾನಸಗಂಗೋತ್ರಿ ಬಯಲು ರಂಗಮಂದಿರ ಕಲಾ ವೈಭವದಲ್ಲಿ ಮಿಂದೇ ಳಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ವಾಗಿರುವ `ಯುವ ಸಂಭ್ರಮ’ವನ್ನು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ, ನಟಿ ಹರ್ಷಿಕಾ ಪೂಣಚ್ಚ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದು, ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಸಂಸದರಾದ ಪ್ರತಾಪ ಸಿಂಹ, ಆರ್.ಧ್ರುವನಾರಾಯಣ್, ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್, ಎಸ್.ಎ. ರಾಮದಾಸ್, ತನ್ವೀರ್‍ಸೇಠ್, ಕೆ.ಮಹ ದೇವ, ಬಿ.ಹರ್ಷವರ್ಧನ್, ಡಾ.ಯತೀಂದ್ರ, ಅಶ್ವಿನ್‍ಕುಮಾರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇ ಗೌಡ, ಆರ್.ಧರ್ಮಸೇನಾ, ಕೆ.ಟಿ.ಶ್ರೀಕಂಠೇ ಗೌಡ, ಸಂದೇಶ್‍ನಾಗರಾಜ್, ಕೆ.ವಿ.ನಾರಾ ಯಣಸ್ವಾಮಿ, ಜಿಪಂ ಉಪಾಧ್ಯಕ್ಷ ಬಿ.ನಟರಾಜ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಭಾಗವಹಿಸಲಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಯುವದಸರಾ ಉಪಸಮಿತಿಯ ಕಾರ್ಯಾ ಧ್ಯಕ್ಷ ಎಂ.ಎನ್.ನಟರಾಜ್ ಮಾತನಾಡಿ, ಸೆ.30ರಿಂದ ಅ.7ರವರೆಗೆ ನಡೆಯುವ ಸಾಂಸ್ಕೃತಿಕ ಹಬ್ಬದಲ್ಲಿ ಸುಮಾರು 159 ಕಾಲೇಜುಗಳ ತಂಡಗಳು ಪ್ರದರ್ಶನ ನೀಡ ಲಿವೆ. ಈ ಬಾರಿ ನಿರೀಕ್ಷೆ ಮೀರಿ ಹೆಚ್ಚು ತಂಡ ಗಳು ಹೆಸರನ್ನು ನೋಂದಾಯಿಸಿ ಕೊಂಡಿ ದ್ದಾರೆ. ಹಾಗಾಗಿ 6 ದಿನಕ್ಕೆ ನಿಗದಿ ಪಡಿಸಿದ್ದ ಯುವ ಸಂಭ್ರಮವನ್ನು 8 ದಿನ ಆಯೋಜಿ ಸಲು ನಿರ್ಧರಿಸಲಾಗಿದೆ ಎಂದರು.

ಪ್ರತಿದಿನ ತಲಾ 20 ಕಾಲೇಜು ತಂಡ ಗಳು ಪ್ರದರ್ಶನ ನೀಡಲಿದ್ದು, ನೈಸರ್ಗಿಕ ವಿಕೋಪ, ಸ್ವಚ್ಛತೆ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀ ಕರಣಗಳನ್ನೊಳಗೊಂಡಂತೆ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬಗ್ಗೆಯೂ ಕಾರ್ಯಕ್ರª ಳನ್ನು ನೀಡುವಂತೆ ಸೂಚಿಸಲಾಗಿದೆ. ಉತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಯುವ ದಸರೆಗೆ ಆಯ್ಕೆ ಮಾಡ ಲಾಗುವುದು ಎಂದರು.

ಪ್ರತಿ ದಿನ 5 ತಂಡಗಳಂತೆ 8 ದಿನಗಳಲ್ಲಿ 40 ತಂಡಗಳನ್ನು ಆಯ್ಕೆ ಮಾಡಿ `ಯುವ ದಸರಾ’ದಲ್ಲಿ ಪ್ರದರ್ಶನ ನೀಡಲು ಅವ ಕಾಶ ಕಲ್ಪಿಸಲಾಗುವುದು. ಪ್ರತಿ ತಂಡದಲ್ಲಿ ಸುಮಾರು 30ರಿಂದ 60 ವಿದ್ಯಾರ್ಥಿಗಳು ಇರಲಿದ್ದು, 8 ದಿನಗಳಲ್ಲಿ ಸುಮಾರು 7,500ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ತಮ್ಮ ಲ್ಲಿನ ಪ್ರತಿಭೆಯನ್ನು ಅನಾವರಣಗೊಳಿ ಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ, ಧಾರವಾಡ, ದಕ್ಷಿಣ ಕನ್ನಡ ಮತ್ತು ಬೆಂಗಳೂರಿ ನಿಂದಲೂ ಕೆಲವು ತಂಡಗಳು ಹೆಸರು ನೋಂದಾಯಿಸಿಕೊಂಡಿವೆ ಎಂದರು. ಯುವ ದಸರಾ ಉಪ ಸಮಿತಿ ಕಾರ್ಯ ದರ್ಶಿ ಡಿ.ಬಿ.ಲಿಂಗಣ್ಣಯ್ಯ ಇದ್ದರು.

Translate »