ಸೆ.17ರಿಂದ ದಸರಾ ಯುವ ಸಂಭ್ರಮ
ಮೈಸೂರು

ಸೆ.17ರಿಂದ ದಸರಾ ಯುವ ಸಂಭ್ರಮ

September 12, 2019

ಮೈಸೂರು,ಸೆ.11(ಆರ್‍ಕೆ)- ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 17ರಿಂದ 9 ದಿನಗಳ ಬದಲಾಗಿ 12 ದಿನ ದಸರಾ ಯುವ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ.

ರಾಜ್ಯದಾದ್ಯಂತ ಒಟ್ಟು 278 ಕಾಲೇಜು ಗಳು ವಿಭಿನ್ನ ಕಾರ್ಯಕ್ರಮ ನೀಡುವ ಪ್ರಸ್ತಾವನೆ ಯೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಲಾ ತಂಡಗಳ ಆಸಕ್ತಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸೆಪ್ಟೆಂಬರ್ 17ರಿಂದ 25ರವ ರೆಗೆ ನಿಗದಿಯಾಗಿದ್ದ ಯುವ ಸಂಭ್ರಮವನ್ನು 3 ದಿನಗಳ ಕಾಲ ವಿಸ್ತರಿಸಿ ಸೆಪ್ಟೆಂಬರ್ 28 ರವರೆಗೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಿಳಿಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಇಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರೊಂದಿಗೆ ದಸರಾ ಸಿದ್ಧತೆ ಕುರಿತಂತೆ ಪೂರ್ವ ಭಾವಿ ಸಭೆ ನಡೆಸಿದ ಸಚಿವ ವಿ.ಸೋಮಣ್ಣ, ಬೇಡಿಕೆ ಹೆಚ್ಚಾಗಿರುವುದರಿಂದ ಪ್ರಸ್ತಾವನೆ ಸಲ್ಲಿಸಿರುವ ಎಲ್ಲಾ 278 ಕಾಲೇಜು ತಂಡಗಳಿಗೂ ಯುವ ಸಂಭ್ರಮ ದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿ ಎಂದು ಯುವ ದಸರಾ ಉಪಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೆ.9ರಂದು ಸಂಜೆ 5.30 ಗಂಟೆಗೆ ಕನ್ನಡದ ಖ್ಯಾತ ಚಲನಚಿತ್ರ ನಟ, ಗೋಲ್ಡನ್ ಸ್ಟಾರ್ ಗಣೇಶ ಯುವ ಸಂಭ್ರಮ ಉದ್ಘಾಟಿಸಲಿದ್ದು, ಸೆಪ್ಟೆಂಬರ್ 28ರವರೆಗೆ ಪ್ರತೀ ದಿನ ಸಂಜೆ 6.30ರಿಂದ ರಾತ್ರಿ 10.30 ಗಂಟೆವರೆಗೆ ದಿನಕ್ಕೆ 18ರಿಂದ 20 ತಂಡ ಗಳು ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗು ವುದು. ಪರಿಸರ ಸಂರಕ್ಷಣೆ, ಮಾನವ ನಿರ್ಮಿತ ವಿಪತ್ತು ಗಳು, ರಾಷ್ಟ್ರೀಯ ಭಾವೈಕ್ಯತೆ, ಪಾರಂಪರಿಕ ಸ್ಮಾರಕಗಳ ರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ, ಭಾರತದ ಸ್ವಾತಂತ್ರ್ಯ ಚಳುವಳಿ, ಜಾನಪದ ಕಲೆ, ಸ್ವಚ್ಛ ಭಾರತ, ಸಂಚಾರ ನಿಯಮಗಳ ಪಾಲನೆ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳು ಮತ್ತು ಹುಲಿ, ಅರಣ್ಯ ಸಂರ ಕ್ಷಣೆ ಈ ಭಾರಿ ಯುವ ಸಂಭ್ರಮದ ವಿಷಯಾಧಾ ರಿತ ವಿಶೇಷವಾಗಿದೆ. ಈ ಭಾರಿ ಯುವ ಸಂಭ್ರಮ ದಲ್ಲಿ ಭಾಗವಹಿಸಲು ಉತ್ತರ ಕರ್ನಾಟಕ ಭಾಗದ ಕಾಲೇಜುಗಳಿಂದ ಹೆಚ್ಚು ಪ್ರಸ್ತಾವನೆಗಳು ಬಂದಿವೆ. ದೂರದ ಊರುಗಳಿಂದ ಬರುವ ಕಾಲೇಜು ತಂಡಗಳನ್ನು ರೈಲು, ಬಸ್ ನಿಲ್ದಾಣದಿಂದ ಕರೆತರಲು ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವರ್ಷ ಕಿರುನಾಟಕ, ಮೈಮ ಹಾಗೂ ಇತ್ಯಾದಿ ಕಲಾ ಪ್ರಕಾರಗಳಿಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ಚರ್ಚಿಸಲು ಸೆ.26ರಂದು ರಾಜ್ಯದ ಎಲ್ಲಾ ವಿವಿಗಳ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು, ಸಾಂಸ್ಕøತಿಕ ಸಂಯೋಜಕರ ಸಭೆ ನಡೆಸ ಲಾಗುವುದು ಎಂದರು. ಯುವ ಸಂಭ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಎಡಿಸಿ ಪೂರ್ಣಿಮಾ, ನಗರ ಪೊಲೀಸ್ ಆಯುಕ್ತ ಕೆ.ಟಿ.ಭಾಲಕೃಷ್ಣ, ಎಸ್ಪಿ ರಿಷ್ಯಂತ್, ಕೆಎಸ್‍ಟಿಡಿಸಿ ಎಂಡಿ ಕುಮಾರ ಪುಷ್ಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಮೇಶ, ಮುಡಾ ಆಯುಕ್ತ ಪಿ.ಎಸ್. ಕಾಂತರಾಜ, ಪಾಲಿಕೆ ಕಮೀಷ್ನರ್ ಗುರುದತ್ ಹೆಗ್ಡೆ, ಪಾರಂಪರಿಕ ಕಮೀಷ್ನರ್ ಟಿ.ವೆಂಕಟೇಶ್, ಜಿಪಂಸಿಇಓ ಕೆ.ಜ್ಯೋತಿ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Translate »