Tag: Dasara Yuva sambhrama

ಬಯಲು ರಂಗಮಂದಿರದಲ್ಲಿ ನಾಳೆಯಿಂದ ಸೆ.26ರವರೆಗೆ ಯುವ ಸಂಭ್ರಮ
Uncategorized

ಬಯಲು ರಂಗಮಂದಿರದಲ್ಲಿ ನಾಳೆಯಿಂದ ಸೆ.26ರವರೆಗೆ ಯುವ ಸಂಭ್ರಮ

September 16, 2019

ಮೈಸೂರು: ಪ್ರಸಕ್ತ ಸಾಲಿನ ನಾಡ ಹಬ್ಬ ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯ ಕ್ರಮ ಯುವ ಸಂಭ್ರಮ ಸೆ.17ರಿಂದ ಆರಂಭವಾಗಿ ಸೆ.26ರವರೆಗೆ ನಡೆಯಲಿದ್ದು, ಮೈಸೂರು ವಿಶ್ವವಿದ್ಯಾ ನಿಲಯದ ಬಯಲು ರಂಗ ಮಂದಿರದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ದಸರಾ ಮಹೋತ್ಸವದ ಸಂಭ್ರಮಕ್ಕೆ ಕಳೆಗಟ್ಟಲಿ ರುವ ಯುವ ಸಂಭ್ರಮ-2019ರಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 250ಕ್ಕೂ ಹೆಚ್ಚು ಕಾಲೇಜು ಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಲಾ ಪ್ರಾಕಾರಗಳನ್ನು ಅನಾವರಣಗೊಳಿಸಲಿದ್ದಾರೆ. ಸೆ.17 ರಂದು 20…

ಸೆ.17ರಿಂದ ದಸರಾ ಯುವ ಸಂಭ್ರಮ
ಮೈಸೂರು

ಸೆ.17ರಿಂದ ದಸರಾ ಯುವ ಸಂಭ್ರಮ

September 12, 2019

ಮೈಸೂರು,ಸೆ.11(ಆರ್‍ಕೆ)- ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 17ರಿಂದ 9 ದಿನಗಳ ಬದಲಾಗಿ 12 ದಿನ ದಸರಾ ಯುವ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದಾದ್ಯಂತ ಒಟ್ಟು 278 ಕಾಲೇಜು ಗಳು ವಿಭಿನ್ನ ಕಾರ್ಯಕ್ರಮ ನೀಡುವ ಪ್ರಸ್ತಾವನೆ ಯೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಲಾ ತಂಡಗಳ ಆಸಕ್ತಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸೆಪ್ಟೆಂಬರ್ 17ರಿಂದ 25ರವ ರೆಗೆ ನಿಗದಿಯಾಗಿದ್ದ ಯುವ ಸಂಭ್ರಮವನ್ನು 3 ದಿನಗಳ ಕಾಲ ವಿಸ್ತರಿಸಿ ಸೆಪ್ಟೆಂಬರ್ 28 ರವರೆಗೆ ನಡೆಸುವಂತೆ ಜಿಲ್ಲಾ ಉಸ್ತುವಾರಿ…

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆ

October 8, 2018

ಮೈಸೂರು:ಡ್ರಾಮಾ ಜೂನಿಯರ್ಸ್‍ನ ಅಚಿಂತ್ಯನ ಕಾಮಿಡಿ ಜಲಕ್, ಕನ್ನಡ ನಾಡು-ನುಡಿ-ಜಲ, ಮಹಿಳಾ ಸಬಲೀಕರಣ, ಕಾವೇರಿ ಕನ್ನಡಿಗರ ಸ್ವತ್ತು ಮತ್ತು ದೇಶಪ್ರೇಮದ ಸಂದೇಶ ಸಾರುವ ಮೂಲಕ 2018ರ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆಬಿದ್ದಿತು. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ ಕಡೆಯ ದಿನವಾದ ಭಾನುವಾರ, ಕೆಲವು ಕಾಲೇಜು ವಿದ್ಯಾರ್ಥಿಗಳು ಕನ್ನಡ ನಾಡು- ನುಡಿ ಕುರಿತ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಕನ್ನಡ ಪ್ರೇಮವನ್ನು ಎತ್ತಿಹಿಡಿದರೆ, ಮತ್ತೆ ಕೆಲವು ಕಾಲೇಜುಗಳು…

ಯುವ ಸಂಭ್ರಮ: ಕನ್ನಡ ನಾಡು-ನುಡಿ ಕಟ್ಟಿಕೊಟ್ಟ ಗಾಯನ, ನೃತ್ಯ
ಮೈಸೂರು

ಯುವ ಸಂಭ್ರಮ: ಕನ್ನಡ ನಾಡು-ನುಡಿ ಕಟ್ಟಿಕೊಟ್ಟ ಗಾಯನ, ನೃತ್ಯ

October 5, 2018

ಮೈಸೂರು: ಇಳಿ ಸಂಜೆಯ ಮಬ್ಬಿನಲಿ. ಚುಮು-ಚುಮು ಚಳಿಯ ತುಂತುರು ಮಳೆಯ ಸಿಂಚನದ ನಡುವೆಯೂ ಕನ್ನಡ ನಾಡು-ನುಡಿ ಕುರಿತ ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಹಳೆ ಹಾಡುಗಳ ನೃತ್ಯ ಝೇಂಕಾರ, ಮಹಿಳಾ ಸಬಲೀಕರಣ, ದೇಶಪ್ರೇಮ, ಪರಿಸರ ನಾಶ-ಮನು ಷ್ಯನ ವಿನಾಶ ಸಂದೇಶಗಳು ಮಾರ್ಧನಿಸಿದವು. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 5ನೇ ದಿನವಾದ ಗುರುವಾರ ಸಂಜೆ ತುಂತುರು ಮಳೆಯ…

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ
ಮೈಸೂರು

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ

October 4, 2018

ಮೈಸೂರು: ಒಂದೆಡೆ ಕನ್ನಡ ನಾಡು-ನುಡಿ, ಮಹಿಳಾ ಸಬಲೀಕರಣ, ದೇಶಪ್ರೇಮ, ಕಾಡಿನ ನಾಶ-ಮನುಷ್ಯನ ವಿನಾಶ, ಮರ ಬೆಳೆಸಿ-ತಾಪ ಇಳಿಸಿ ಸಂದೇಶಗಳನ್ನು ಸಾರುತ್ತಿದ್ದರೆ, ಮತ್ತೊಂದೆಡೆ ಮಳೆಯ ಆರ್ಭಟದ ನಡುವೆಯೂ ಯುವ ಸಂಭ್ರಮ. ಈ ಸಂಭ್ರಮದಲ್ಲಿ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದ ಯುವ ಸಮೂಹ. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 4ನೇ ದಿನವಾದ ಬುಧವಾರ ಸಂಜೆ ಮಳೆಯ ಆರ್ಭಟದ ನಡುವೆಯೂ ಯುವ ಸಮೂಹ ಕುಣಿದು ಕುಪ್ಪಳಿಸಿ, ಎಂಜಾಯ್…

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ
ಮೈಸೂರು

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ

October 2, 2018

ಮೈಸೂರು: ಇಳಿ ಸಂಜೆಯ ಮಬ್ಬಿನಲಿ ಬಣ್ಣ-ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ವಿವಿಧ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಹಸಿರೆ ಉಸಿರು, ಗಿಡ ನಕ್ಕರೆ ಜಗ ನಗುತ್ತದೆ, ಗಿಡ ಅಳಿದರೆ ಜಗ ಅಳಿಯುತ್ತದೆ, ಮರ ಬೆಳೆಸಿ-ಬರ ಅಳಿಸಿ-ತಾಪ ಇಳಿಸಿ, ರೈತರೇ ಆತ್ಮಹತ್ಯೆ ಬೇಡ. ಆತ್ಮಸ್ಥೈರ್ಯ ಬೇಕು ಎಂಬಿತ್ಯಾದಿ ಸಂದೇಶಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು. ಮೈಸೂರು ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ದಸರಾ ‘ಯುವ ಸಂಭ್ರಮ’ದ 2ನೇ ದಿನವಾದ ಸೋಮವಾರ ಮರಗಳ ಚಿತ್ರಣವುಳ್ಳ ಬ್ಯಾನರ್ ಹಿಡಿದು ವೇದಿಕೆಗೆ ಆಗಮಿಸಿದ ಹುಣಸೂರು…

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ

October 1, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋ ತ್ಸವದ ಅಂಗವಾಗಿ ಆಯೋಜಿಸಿರುವ ಮೊದಲ ಕಾರ್ಯಕ್ರಮ `ಯುವ ಸಂಭ್ರಮ’ದ ಮೊದಲ ದಿನವೇ ವರುಣನ ಸಿಂಚನವಾಯಿತು. ಸುಂದರ ಇಳಿ ಸಂಜೆಯಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಒಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡೋಲು ಬಾರಿಸುವ ಮೂಲಕ `ಯುವ ಸಂಭ್ರಮ’ಕ್ಕೆ ಅದ್ಧೂರಿ ಚಾಲನೆ ನೀಡಿದರೆ, ಮತ್ತೊಂದೆಡೆ ಉಕ್ರೆನ್‍ನ ನೃತ್ಯಗಾರ್ತಿ ಯುಲಿಯಾ ಅವರು ವಿನೂತನ ಶೈಲಿಯಲ್ಲಿ ಕ್ಲಸ್ಟರ್ ಹೀಲಿಯಂ ಬಲೂನ್ ಗುಚ್ಛದ ಮೂಲಕ 100 ಅಡಿ ಎತ್ತರಕ್ಕೆ ಹಾರಿ `ಯುವ…

ಇಂದಿನಿಂದ ಯುವ ಸಂಭ್ರಮ
ಮೈಸೂರು

ಇಂದಿನಿಂದ ಯುವ ಸಂಭ್ರಮ

September 30, 2018

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018 ಸೆ.30ರಿಂದ ಅ.7ರವರೆಗೆ ಸಂಜೆ 6ರಿಂದ 10 ಗಂಟೆಯವರೆಗೆ ಯುವ ಸಂಭ್ರಮ ಮೈಸೂರು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಸೆ.30ರಂದು ಸಂಜೆ 6 ಗಂಟೆಗೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ನಜಿûೀರ್ ಅಹಮದ್, ಸಂಸದರಾದ ಪ್ರತಾಪ್ ಸಿಂಹ, ಆರ್.ಧ್ರುವನಾರಾಯಣ್, ಶಾಸಕರಾದ…

ಯುವ ಸಂಭ್ರಮ ಹಿನ್ನೆಲೆ ಪರೀಕ್ಷೆಗಳ ನಡೆಸದಂತೆ ಸೂಚನೆ
ಮೈಸೂರು

ಯುವ ಸಂಭ್ರಮ ಹಿನ್ನೆಲೆ ಪರೀಕ್ಷೆಗಳ ನಡೆಸದಂತೆ ಸೂಚನೆ

September 30, 2018

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸೆ.30 ರಿಂದ ಯುವ ಸಂಭ್ರಮದ ಕಾರ್ಯಕ್ರಮಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಯಾವುದೇ ಪರೀಕ್ಷೆಗಳನ್ನು ನಡೆಸದಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ದಯಾನಂದ ಸೂಚನೆ ನೀಡಿದ್ದಾರೆ. ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಹಂತದ ಯಾವುದೇ ಪರೀಕ್ಷೆಗಳನ್ನು ನಡೆಸಬಾರದು ಎಂದು ಸೂಚನೆ ನೀಡಿರುವ ಉಪನಿರ್ದೇಶಕರು,…

ನಾಳೆಯಿಂದ ದಸರಾ ಯುವ ಸಂಭ್ರಮ
ಮೈಸೂರು

ನಾಳೆಯಿಂದ ದಸರಾ ಯುವ ಸಂಭ್ರಮ

September 29, 2018

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗ ವಾಗಿ ಸೆ.30ರಿಂದ ಅ.7ರವರೆಗೆ `ಯುವ ಸಂಭ್ರಮ’ ಆಯೋಜಿಸಿದ್ದು, 8 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 10 ಗಂಟೆ ವರೆಗೆ ಮಾನಸಗಂಗೋತ್ರಿ ಬಯಲು ರಂಗಮಂದಿರ ಕಲಾ ವೈಭವದಲ್ಲಿ ಮಿಂದೇ ಳಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ವಾಗಿರುವ `ಯುವ ಸಂಭ್ರಮ’ವನ್ನು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ,…

Translate »