ಯುವ ಸಂಭ್ರಮ: ಕನ್ನಡ ನಾಡು-ನುಡಿ ಕಟ್ಟಿಕೊಟ್ಟ ಗಾಯನ, ನೃತ್ಯ
ಮೈಸೂರು

ಯುವ ಸಂಭ್ರಮ: ಕನ್ನಡ ನಾಡು-ನುಡಿ ಕಟ್ಟಿಕೊಟ್ಟ ಗಾಯನ, ನೃತ್ಯ

October 5, 2018

ಮೈಸೂರು: ಇಳಿ ಸಂಜೆಯ ಮಬ್ಬಿನಲಿ. ಚುಮು-ಚುಮು ಚಳಿಯ ತುಂತುರು ಮಳೆಯ ಸಿಂಚನದ ನಡುವೆಯೂ ಕನ್ನಡ ನಾಡು-ನುಡಿ ಕುರಿತ ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಹಳೆ ಹಾಡುಗಳ ನೃತ್ಯ ಝೇಂಕಾರ, ಮಹಿಳಾ ಸಬಲೀಕರಣ, ದೇಶಪ್ರೇಮ, ಪರಿಸರ ನಾಶ-ಮನು ಷ್ಯನ ವಿನಾಶ ಸಂದೇಶಗಳು ಮಾರ್ಧನಿಸಿದವು.

ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 5ನೇ ದಿನವಾದ ಗುರುವಾರ ಸಂಜೆ ತುಂತುರು ಮಳೆಯ ಸಿಂಚನದ ನಡುವೆಯೂ ಯುವ ಸಂಭ್ರಮ ದಲ್ಲಿ ಯುವ ಸಮೂಹ ಸಂಭ್ರಮಿಸಿದರು.

ಮೊದಲಿಗೆ ವೇದಿಕೆ ಹಂಚಿಕೊಂಡ ಹುಣಸೂರು ಸಾದಾನಪುರ ವಿಶ್ವಶಾಂತಿ ಪ್ರಥಮ ದರ್ಜೆ ಕಾಲೇ ಜಿನ ವಿದ್ಯಾರ್ಥಿಗಳು, ಜಾನಪದ ಕಲೆ ಕುರಿತ `ಚೆಲ್ಲಿದರು ಮಲ್ಲಿಗೇಯ ಬಾಣಾಸು ಏರಿಮ್ಯಾಲೆ. ಅಂದಾದ ಚೆಂದಾದ ಮಯಾಕಾರ ಮಾದೇವ್‍ಗೆ ಚೆಲ್ಲಿದರು ಮಲ್ಲಿಗೇಯ’, ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ’ ಹಾಡಿನ ಮೂಲಕ ಮಲೆಮಹದೇಶ್ವರ, ಮೈಸೂರು ಮಹಾರಾಜರ ಕೊಡುಗೆಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ತಿ.ನರಸೀಪುರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಕನ್ನಡ-ಸಂಸ್ಕøತಿ ಕುರಿತು `ಕರ್ನಾ ಟಕದ ಇತಿಹಾಸದಲಿ. ಬಂಗಾರದ ಯುಗದ ಕಥೆಯನ್ನು ಹಾಡುವೆ ಕೇಳಿ ನಾ ಹಾಡುವೆ ಕೇಳಿ’, `ಕನ್ನಡ ನಾಡಿನ ವೀರರ ಮಣಿಯ. ಗಂಡು ಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ’, ಕನ್ನಡದ ಮಾತು ಚೆನ್ನ. ಕನ್ನಡದ ನೆಲ ಚೆನ್ನ. ಕನ್ನಡಿಗರ ಮನಸ್ಸು ಚಿನ್ನ’, ಕರು ನಾಡೆ ಕೈ ಚಾಚಿದೆ ನೋಡೆ’ ಹಾಡಿನ ಮೂಲಕ ಕನ್ನಡ ಕಂಪನ್ನು ಪ್ರೇಕ್ಷಕರಿಗೆ ಉಣಬಡಿಸುವ ಜೊತೆಗೆ ಹೈದರಾಲಿ ಸೈನ್ಯ ಚಿತ್ರದುರ್ಗದ ಕೋಟೆಯೊಳಗೆ ನುಸುಳು ತ್ತಿರುವುದನ್ನು ಕಂಡ ಒನಕೆ ಓಬವ್ವ, ಸೈನಿಕರನ್ನು ಸದೆ ಬಡಿಯುವ ದೃಶ್ಯ ಮನೋಜ್ಞವಾಗಿ ಮೂಡಿಬಂದಿತು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ಗಳು, ಕನ್ನಡ ನಾಡು-ನುಡಿ ಕುರಿತ `ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ-ಕನ್ನಡನುಡಿ, ಕೇಳಿಸದೆ ಹೊನ್ನ ಚೆರಿತೆಯಲಿ ಹಂಪೆಯ ಗುಡಿ’, `ಸಂಕ್ರಾಂತಿ ಬಂತು ರತೋ ರತೋ. ಮನಸ್ಸಲ್ಲಿ ಮನಸ್ಸು ಬಿತೋ ಬಿತೋ’, `ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ’, `ಮೈಸೂರು ದಸರಾ ಎಷ್ಟೊಂದು ಸುಂದÀರ’, `ದೀಪಾವಳಿ-ದೀಪಾವಳಿ ಗೋವಿಂದ ಲೀಲಾವಳಿ. ಅಳಿಯ ಮಗನಾದನು. ಮಾವ ಮಗುವಾದನು’ ಹಳೇ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ, ಕನ್ನಡದ ಕಂಪನ್ನು ಪಸರಿಸಿದರು. ಹಾಸನ ಎನ್‍ಡಿಆರ್ ಕೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಪರಿಸರ ನಾಶ-ನಿಮ್ಮ ವಿನಾಶ. ಮರಗಳ ಹನನದಿಂದ ಮಳೆ ಇಲ್ಲದೆ ಬೆಳೆಯು ಇಲ್ಲವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಕುಡಿಯುವ ನೀರಿಗೂ ತಾತ್ವಾರ ಅನುಭವಿಸಬೇಕಾಗುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ. ಪ್ರಕೃತಿಯನ್ನು ಉಳಿಸಿ. ಮರಗಿಡಗಳನ್ನು ಕಡಿಯಬೇಡಿ, ರಕ್ಷಿಸಿ ಎಂಬ ಸಂದೇಶ ಸಾರಿದರು.

ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜು (ದೇಶಭಕ್ತಿ), ಕೊಳ್ಳೇಗಾಲ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು(ಮಹಿಳಾ ಸಬಲೀಕರಣ), ಹುಣ ಸೂರು ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ರಾಷ್ಟ್ರೀಯ ಭಾವೈಕ್ಯತೆ), ಸುಳ್ಯ ತಾಲೂಕು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಕಾಲೇಜು(ಜಾನಪದ ಕಲೆ), ಮಹಾರಾಣಿ ಮಹಿಳಾ ಕಲಾ ಕಾಲೇಜು (ಭಾರತದ ಸ್ವಾತಂತ್ರ್ಯ ಚಳವಳಿ) ಕುರಿತು ನೃತ್ಯ ಪ್ರದರ್ಶಿಸಿದರು.

Translate »