ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ
ಮೈಸೂರು

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ

October 4, 2018

ಮೈಸೂರು: ಒಂದೆಡೆ ಕನ್ನಡ ನಾಡು-ನುಡಿ, ಮಹಿಳಾ ಸಬಲೀಕರಣ, ದೇಶಪ್ರೇಮ, ಕಾಡಿನ ನಾಶ-ಮನುಷ್ಯನ ವಿನಾಶ, ಮರ ಬೆಳೆಸಿ-ತಾಪ ಇಳಿಸಿ ಸಂದೇಶಗಳನ್ನು ಸಾರುತ್ತಿದ್ದರೆ, ಮತ್ತೊಂದೆಡೆ ಮಳೆಯ ಆರ್ಭಟದ ನಡುವೆಯೂ ಯುವ ಸಂಭ್ರಮ. ಈ ಸಂಭ್ರಮದಲ್ಲಿ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದ ಯುವ ಸಮೂಹ.

ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 4ನೇ ದಿನವಾದ ಬುಧವಾರ ಸಂಜೆ ಮಳೆಯ ಆರ್ಭಟದ ನಡುವೆಯೂ ಯುವ ಸಮೂಹ ಕುಣಿದು ಕುಪ್ಪಳಿಸಿ, ಎಂಜಾಯ್ ಮಾಡಿದರು.

ಮೊದಲಿಗೆ ವೇದಿಕೆ ಹಂಚಿಕೊಂಡ ಹುಣಸೂರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು `ಮೇರಾ ಭಾರತ್ ಮಹಾನ್’ ಹಾಡಿಗೆ ಮನೋಜ್ಞವಾಗಿ ನೃತ್ಯ ಪ್ರದರ್ಶಿಸುವ ಮೂಲಕ ಕೊರೆಯುವ ಚಳಿ, ಮಳೆ ಎನ್ನದೆ ಗಡಿಯಲ್ಲಿ ನಿಂತು ದೇಶದ ರಕ್ಷಣೆಗಾಗಿ ದುಡಿಯುತ್ತಿರುವ ವೀರ ಯೋಧರಿಗೆ ನಮನ ಸಲ್ಲಿಸಿದರು.

ನಂಜನಗೂಡು ತಾಲೂಕು ಎಸ್. ಹೊಸ ಕೋಟೆ ಮುರಾರ್ಜಿ ದೇಸಾಯಿ ಪಿಯು ವಸತಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ನಾಡು-ನುಡಿ ಕುರಿತ `ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’, ಕನ್ನಡ ನಾಡಿನ ಜೀವನದಿ ಕಾವೇರಿ’, ಕೇಳಿ ಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ-ಕನ್ನಡ ನುಡಿ, ಕೇಳಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ’, `ಚೆಲ್ಲಿ ದರೂ ಮಲ್ಲಿಗೇಯ ಬಾಣಾಸು ಏರಿಮ್ಯಾಲೆ’, `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ನೃತ್ಯ ಪ್ರದರ್ಶಿಸಿ ಕನ್ನಡ ನಾಡಿನ ಕಂಪನ್ನು ಪಸರಿಸಿದರು.

ಎಂಐಟಿ ಇಂಜಿನಿಯರಿಂಗ್ ಕಾಲೇ ಜಿನ ವಿದ್ಯಾರ್ಥಿಗಳು, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಹೆಂಡತಿ-ತಾಯಿ-ಸಹೋದರಿಯಾಗಿ ನಿರ್ವಹಿಸು ತ್ತಿರುವ ಅವಳಿಗೆ ಅವಳೇ ಸಾಟಿಯೆಂದು ಅಮ್ಮನ ಕುರಿತ `ಅಮ್ಮ ನನ್ನೀ ಜನುಮಾ, ನಿನ್ನ ವರದಾನವಮ್ಮ’ ಹಾಡಿನ ಮೂಲಕ ತಾಯಿಯ ಮಮತೆಯನ್ನು ಸಾರುವುದರ ಜೊತೆಗೆ, ದೌರ್ಜನ್ಯವನ್ನು ತಡೆಯಲು ದುರ್ಗಿ ಯಾಗಿ ತಮ್ಮ ರಕ್ಷಣೆಗೆ ತಾವೇ ನಿಲ್ಲುವ ಮೂಲಕ ಹೆಣ್ಣು ಒಲಿದರೆ ನಾರಿ-ಮುನಿ ದರೆ ಮಾರಿ ಎಂಬುದನ್ನು ನೃತ್ಯದ ಮೂಲಕ ಕಟ್ಟಿಕೊಡುವಲ್ಲಿ ಯಶಸ್ವಿಯಾದರು.

ಕೊಳ್ಳೇಗಾಲ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ರೈತನ ಕುರಿತು `ನೇಗಿಲ ಹಿಡಿದು, ಹೊಲದೊಳು ಹಾಡುತ್ತಾ ಉಳುವ ಯೋಗಿಯ ನೋಡಲ್ಲಿ’, `ರೈತ, ರೈತ, ರೈತ ಅನ್ನ ಕೊಡುವ ದಾತ’ ಹಾಡುಗಳಿಗೆ ನೃತ್ಯದ ಜೊತೆಗೆ ಸಾಲ ಮಾಡಿ, ಬೆಳೆ ನಾಶದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬು ದನ್ನು ಕಟ್ಟಿಕೊಟ್ಟರು. ಇದರೊಟ್ಟಿಗೆ ಅಣೆಕಟ್ಟು ನಿರ್ಮಿಸಿ, ನಿರ್ಮಿಸಿ ರುವ ಅಣೆಕಟ್ಟೆಗಳನ್ನು ಉಳಿಸಿಕೊಳ್ಳಿ ಸಂದೇಶವನ್ನು ಸಾರಿ ದರು. ಈ ವೇಳೆ ವಿಶ್ವೇಶ್ವರಯ್ಯ, ನಾಲ್ವಡಿ, ಯದುವೀರ್ ಅವರ ಭಾವಚಿತ್ರಗಳ ಪ್ರದರ್ಶನಕ್ಕೆ ಸಿಳ್ಳೇ, ಚಪ್ಪಾಳೆಗಳು ಮಾರ್ದ ನಿಸಿದವು. ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಕನ್ನಡ ಭಾಷೆಯ ಹಿರಿಮೆಯನ್ನು ತಿಳಿಸು ವಂತಹ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯದ ಕೊನೆಯಲ್ಲಿ ನಟ ಜಗ್ಗೇಶ್ ಅಭಿ ನಯದ `ಅಂತಿಂತ ಗಂಡು ನಾನಲ್ಲ, ನನ್ನಂಥ ಭಂಡ ಯಾರಿಲ್ಲ’ ಗೀತೆಗೆ ನೆರೆದಿದ್ದ, ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಮಳೆಗೆ ಸಡ್ಡು ಹೊಡೆದು ಕುಣಿದು ಕುಪ್ಪಳಿಸಿದ ಯುವ ಸಮೂಹ: ಯುವ ಸಂಭ್ರಮ ಆರಂಭಗೊಂಡ 1 ಗಂಟೆಯಲ್ಲೇ ಮಳೆಯ ಆರ್ಭಟ ಜೋರಾಯಿತು. ಈ ವೇಳೆ ಕೆಲವರು ಛತ್ರಿ, ಗಿಡ-ಮರ, ಟಾರ್ಪಾಲ್‍ಗಳ ಮೊರೆ ಹೋದರೆ, ಕೆಲವರು ವೇದಿಕೆಯನ್ನೇರಿದರು. ಮತ್ತೆ ಕೆಲ ಯುವಕ ಯುವತಿಯರು ಮಳೆಯನ್ನು ಲೆಕ್ಕಿಸದೆ ನಿಂತಲ್ಲೆ ನಿಂತು ನೆನೆದು ಮಳೆಗೆ ಸವಾಲು ಹಾಕಿದಂತಿತ್ತು. ಇದಾದ ಅರ್ಧ ಗಂಟೆಯ ಬಳಿಕ ಕಾರ್ಯಕ್ರಮ ಆರಂಭಿಸಿದರು. ಈ ವೇಳೆಯೂ ಮಳೆ ಜಿನು ಗುತ್ತಿದ್ದರೂ ಇದನ್ನು ಲೆಕ್ಕಿಸದೆ ಹಾಡುಗಳಿಗೆ ಕುಣಿದು-ಕುಪ್ಪಳಿಸಿ ಸಂಭ್ರಮಿಸಿದರು. ಮಳೆಯಿಂದ ಪಾರಾಗಲು ಅನೇಕರು ತಾವು ಕೂತಿದ್ದ ಕುರ್ಚಿಗಳನ್ನು ಎತ್ತಿಹಿಡಿದು ಆಶ್ರಯ ಪಡೆದರೆ, ಬೈಕ್‍ಗಳಲ್ಲಿ ಆಗಮಿಸಿದ ಅನೇಕರು ಹೆಲ್ಮೆಟ್ ಧರಿಸಿಯೇ ನಿಂತು ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷವಾಗಿತ್ತು.

Translate »