ಗಡ್ಕರಿ ಮನೆಗೆ ಸ್ಕೂಟರ್ ಎಸೆದ ‘ಕೈ’ ಕಾರ್ಯಕರ್ತರು
ಮೈಸೂರು

ಗಡ್ಕರಿ ಮನೆಗೆ ಸ್ಕೂಟರ್ ಎಸೆದ ‘ಕೈ’ ಕಾರ್ಯಕರ್ತರು

September 12, 2019

ನವದೆಹಲಿ,ಸೆ.11-ಹೊಸ ಮೋಟಾರು ವಾಹನ ಕಾಯ್ದೆ ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ದೆಹಲಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವರ ನಿವಾಸದ ಮುಂದೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೆÇಲೀಸರು ಐವೈಸಿ ಕಾರ್ಯ ಕರ್ತರನ್ನು ಮನೆಯ ಮುಂದೆ ತಡೆದರು. ಈ ವೇಳೆ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಗಡ್ಕರಿ ಅವರ ವಿರುದ್ಧ ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ ಕೆಲವರು ಬ್ಯಾರಿಕೇಡ್ ಹಾರಿ ಮನೆಗೆ ನುಗ್ಗಲು ಪ್ರಯತ್ನಿಸಿದರು. ಪ್ರತಿಭಟನೆ ಕಾವೇರು ತ್ತಿದ್ದಂತೆ ಐವೈಸಿ ಕಾರ್ಯಕರ್ತರು ಸ್ಕೂಟರ್ ಒಂದನ್ನು ಮನೆಯ ಮುಂದೆ ಎಸೆದರು. ಪೆÇಲೀಸರು ತಡೆ ಯಲು ಮುಂದಾದರೂ ಕ್ಯಾರೇ ಎನ್ನಲಿಲ್ಲ. ಕೆಳಗೆ ಬಿದ್ದ ಸ್ಕೂಟರ್ ಸಂಪೂರ್ಣವಾಗಿ ಜಖಂಗೊಂಡಿತು. ಈ ವೇಳೆ ತಿದ್ದುಪಡಿ ಮಾಡಿದ ಮೋಟಾರ್ ವಾಹನ ಮಸೂದೆ ವಾಪಸ್ ಪಡೆಯುವಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿ ಘೋಷಣೆ ಕೂಗಿದರು.

Translate »