ಸಂಸದ ಪ್ರಜ್ವಲ್ ರೇವಣ್ಣಗೆ ಜಾಹೀರಾತು ಮೂಲಕ ಸಮನ್ಸ್
ಮೈಸೂರು

ಸಂಸದ ಪ್ರಜ್ವಲ್ ರೇವಣ್ಣಗೆ ಜಾಹೀರಾತು ಮೂಲಕ ಸಮನ್ಸ್

September 12, 2019

ಹಾಸನ,ಸೆ.11- ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀ ರಾತು ಪ್ರಕಟಿಸುವ ಮೂಲಕ ಹೈಕೋರ್ಟ್ ಸಮನ್ಸ್ ಜಾರಿಗೊಳಿ ಸಲಾಗಿದೆ. ಲೋಕ ಸಭೆ ಚುನಾವಣೆ ವೇಳೆ ನಾಮಪತ್ರ ದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಆಸ್ತಿಗೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಎ.ಮಂಜು ಹಾಗೂ ವಕೀಲ ಜಿ. ದೇವರಾಜೇಗೌಡ ಅವರು ಪ್ರತ್ಯೇಕ ವಾಗಿ ದಾಖಲಿಸಿರುವ ಪ್ರಕರಣಗಳ ಸಂಬಂಧ ಸೆ.30ರಂದು ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್ ಅವರಿಗೆ ಸಮನ್ಸ್ ನೀಡಲಾಗಿದೆ. ಸೆ.30ರಂದು ಬೆಳಿಗ್ಗೆ 10.30ಕ್ಕೆ ಖುದ್ದಾಗಿ ಇಲ್ಲವೇ ವಕೀಲರ ಮೂಲಕ ಹಾಜರಾಗುವಂತೆ ಹೈಕೋರ್ಟ್ ಸಮನ್ಸ್‍ನಲ್ಲಿ ಸೂಚಿಸಲಾಗಿದೆ. ಈ ಮೊದಲೇ ಹಲವು ಬಾರಿ ಸಮನ್ಸ್ ಜಾರಿಗೆ ಕೋರ್ಟ್ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಸಮನ್ಸ್ ತಲುಪಿಲ್ಲ ಎಂದೇ ಸಂಸದ ಪ್ರಜ್ವಲ್ ಹೇಳಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಸಂಸದರಿಗೆ ಪತ್ರಿಕೆಯ ಜಾಹೀರಾತು ಮೂಲಕ ಸಮನ್ಸ್ ಜಾರಿ ಮಾಡಲು ಅನುಮತಿ ನೀಡಿತ್ತು. ಅದರಂತೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು.

Translate »