ಚ.ರಾ.ಪಟ್ಟಣ ಬಳಿ ವಿದ್ಯುತ್ ಅವಘಡ; ತಾಯಿ, ಮಗಳು, ಮಗನ ದುರಂತ ಸಾವು
ಮೈಸೂರು

ಚ.ರಾ.ಪಟ್ಟಣ ಬಳಿ ವಿದ್ಯುತ್ ಅವಘಡ; ತಾಯಿ, ಮಗಳು, ಮಗನ ದುರಂತ ಸಾವು

September 12, 2019

ಚನ್ನರಾಯಪಟ್ಟಣ,ಸೆ.11-ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಬಾಗೂರು ಹೋಬಳಿ ಅಗಸರ ಹಳ್ಳಿಯಲ್ಲಿ ಬುಧವಾರ ಜರುಗಿದೆ. ಮಂಗಳವಾರ ಮುಂಜಾನೆ 6ರ ವೇಳೆ ಸಂಭವಿಸಿದ ವಿದ್ಯುತ್ ಅವ ಘಡದಲ್ಲಿ ತಾಯಿ ಭಾಗ್ಯಮ್ಮ, ಮಗಳು ದಾಕ್ಷಾಯಿಣಿ, ಮಗ ದಯಾನಂದ ಜೀವ ಕಳೆದುಕೊಂಡಿದ್ದಾರೆ. ಮಗಳು ದಾಕ್ಷಾಯಿಣಿ ಬೆಳಿಗ್ಗೆ ಒಗೆದ ಬಟ್ಟೆಗಳನ್ನು ಮನೆಯಿಂದ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿ ಮೇಲೆ ಒಣಗಿ ಹಾಕಲು ಹೋದಾಗ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನು ತಿಳಿಯದ ದಾಕ್ಷಾಯಿಣಿ ಒದ್ದೆ ಯಾಗಿದ್ದ ಬಟ್ಟೆಗಳನ್ನು ತಂತಿಯ ಮೇಲೆ ಹಾಕಿದ್ದಾರೆ. ತಕ್ಷಣವೇ ಅವರಿಗೆ ಭಾರೀ ಪ್ರಮಾಣದಲ್ಲಿ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಆಘಾತಕ್ಕೊಳಗಾದ ದಾಕ್ಷಾ ಯಿಣಿ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಓಡಿ ಬಂದ ತಾಯಿ ಭಾಗ್ಯಮ್ಮ, ವಿದ್ಯುತ್ ಆಘಾತ ಕ್ಕೊಳಗಾಗಿ ಒದ್ದಾಡುತ್ತಿದ್ದ ಮಗಳನ್ನು ರಕ್ಷಿಸಲು ಮುಂದಾ ಗಿದ್ದಾರೆ. ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಅದೇ ವೇಳೆ ಅಲ್ಲಿಗೆ ಓಡಿ ಬಂದ ಮಗ ದಯಾ ನಂದನೂ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊ ಳ್ಳದೇ ತಾಯಿ ಮತ್ತು ಅಕ್ಕನನ್ನು ರಕ್ಷಿಸಲು ಧಾವಿಸಿದ್ದಾರೆ. ಅವರಿಗೂ ವಿದ್ಯುತ್ ಆಘಾತವಾಗಿದ್ದು, ಮೂವರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆ ಬಗ್ಗೆ ಗ್ರಾಮಾಂ ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »