ಚಾಮರಾಜ ಕ್ಷೇತ್ರದಲ್ಲಿ ವಿವಿಧ  ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು

ಚಾಮರಾಜ ಕ್ಷೇತ್ರದಲ್ಲಿ ವಿವಿಧ  ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

September 29, 2018

ಮೈಸೂರು:  ಶಾಸಕ ಎಲ್.ನಾಗೇಂದ್ರ ಅವರು ಚಾಮರಾಜ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿ ಸಿದರು. ಹೆಬ್ಬಾಳು ಮುಖ್ಯ ರಸ್ತೆಯಿಂದ ಭೈರವೇಶ್ವರನಗರದಲ್ಲಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು 49 ಲಕ್ಷ ರೂ. ವೆಚ್ಚ ದಲ್ಲಿ ಕೈಗೊಂಡಿದ್ದು, ಮೈಸೂರು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕರು ಕಾಮಗಾರಿಗೆ ಚಾಲನೆ ನೀಡಿದರು.

ಅದೇ ರೀತಿ 15 ಲಕ್ಷ ರೂ.ಗಳಲ್ಲಿ ಜಯ ದೇವನಗರ, ಬಿಎಂಶ್ರೀನಗರ ಹಾಗೂ ಮೇಟಗಳ್ಳಿಯ ವಿವಿಧ ಭಾಗಗಳಲ್ಲಿ ಒಳ ಚರಂಡಿ ಕಾಮಗಾರಿಯನ್ನೂ ಆರಂಭಿಸ ಲಾಯಿತು. ಮಹಾನಗರ ಪಾಲಿಕೆ ಸದಸ್ಯ ರಮೇಶ, ಮುಖಂಡರುಗಳಾದ ಮೂರ್ತಿ, ದೇವರಾಜ್, ಮಧು, ರವೀಂದ್ರ, ದಿವಾ ಕರ ಹಾಗೂ ಇತರರು ಉಪಸ್ಥಿತರಿದ್ದರು.

ಗುರುವಾರವೂ ಗಂಗೋತ್ರಿ ಬಡಾ ವಣೆಯ ಮಾರುತಿ ಟೆಂಪಲ್ ರಸ್ತೆ 1ನೇ ಕ್ರಾಸ್‍ನಲ್ಲಿ ರಸ್ತೆ ಡಾಂಬರೀಕರಣ, ಕೆ.ಜಿ. ಕೊಪ್ಪಲಿನ ರೈಲ್ವೇ ಗೇಟ್ ಬಳಿ ನೀರಿನ ಪೈಪ್‍ಲೈನ್ ಅಳವಡಿಕೆ, ಗೋಕುಲಂ ಹಾಗೂ ಯಾದವಗಿರಿಯ ವಿವಿಧ ರಸ್ತೆ ಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿಪೂಜೆ ನೆರವೇರಿಸಿದರು.

Translate »